Monday, April 13, 2026
Monday, April 13, 2026

Bharat Scouts and Guides ಎಲ್ಲರೂ ಸ್ನೇಹದಿಂದಿದ್ದರೆ ಪರಸ್ಪರ ಒಮ್ಮತ ,ಸಹಬಾಳ್ವೆ ಸಾಧ್ಯ: ಶಕುಂತಲಾ ಚಂದ್ರಶೇಖರ್

Date:

Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ ಗೈಡ್ ಚಳುವಳಿಯ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಸ್ಕೌಟ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ಬೇಡೆನ್ ಪೋವೆಲ್ ರವರ 169ನೇ ಮತ್ತು ಲೇಡಿ ಬೇಡೆನ್ ಪೋವೆಲ್ ರವರ 139ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಈ ಸಂಸ್ಥಾಪಕ ದಿನಾಚರಣೆ ಮತ್ತು ಚಿಂತನ ಕಾರ್ಯಕ್ರಮದಲ್ಲಿ ಈ ವರ್ಷದ ಧ್ಯೇಯ ವಾಕ್ಯವಾದ
” ನಮ್ಮ ಸ್ನೇಹ ” ಕುರಿತು ಮಾತನಾಡಿದರು. ಸರ್ವರೂ ಸ್ನೇಹದಿಂದಿದ್ದು ಪರಸ್ಪರ ಚರ್ಚೆಯ ಮೂಲಕ ಒಮ್ಮತದಿಂದ ಬಾಳ್ವೆ ನಡೆಸಿದರೆ ಬಹಳಷ್ಟು ಸಮಸ್ಯೆಗಳನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳಬಹುದೆಂದು ಹೇಳಿದರು.
ಕಾರ್ಯಕ್ರಮವು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜಿಲ್ಲಾ ಸಹಕಾರ್ಯದರ್ಶಿ ಶ್ರೀ ವೈ. ಆರ್. ವೀರೇಶಪ್ಪ ಸರ್ವರನ್ನು ಸ್ವಾಗತಿಸಿದರು. ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲಾ ತರಬೇತಿ ಆಯುಕ್ತ ಶ್ರೀ ಶಿವಶಂಕರ ರವರು ಪ್ರತಿಜ್ಞೆ ಬೋಧಿಸಿದರು. ಶ್ರೀಮತಿ ಲಕ್ಷ್ಮೀ ರವರು ಚಿಂತನ ದಿನದ ಮಹತ್ವದ ಬಗ್ಗೆ ಮನೋಜ್ಞಾವಾಗಿ ತಿಳಿಸಿಕೊಟ್ಟರು. ವಿವಿಧ ಶಾಲೆಯ ಮಕ್ಕಳು ಸ್ಕೌಟಿಂಗ್ ಗೈಡಿಂಗ್ ಚಳುವಳಿ ಸೇರಿಕೊಂದಡಿರುದರಿಂದ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆ ಬಗ್ಗೆ ತಿಳಿಸಿದರು. ಸ್ಕೌಟ್ ಶಿಕ್ಷಕರಾದ ಶ್ರೀ ವೆಂಕಟೇಶ್ ರವರು ಸ್ಕೌಟ್ ಗೈಡ್ ಮಕ್ಕಳು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ಯಲ್ಲಿ ಹೇಗೆ ತೊಡಗಿಸಿಕೊಳ್ಳ ಬೇಕೆಂಬ ಮಾಹಿತಿಯನ್ನು ನೀಡಿದರು. Bharat Scouts and Guides ಸಮಾರಂಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ಶ್ರೀ ಎಸ್. ಜಿ. ಆನಂದ್, ಜಿಲ್ಲಾ ರೋವರ್ ಆಯುಕ್ತ ಶ್ರೀ ಕೆ. ರವಿ, ಜಿಲ್ಲಾ ಗೈಡ್ ಆಯುಕ್ತೆ ಶ್ರೀಮತಿ ಲಕ್ಷ್ಮಿ, ಹಿರಿಯ ಸ್ಕೌಟ್ ಶಿಕ್ಷಕರಾದ ಶ್ರೀ ರುದ್ರಪ್ಪ ಚೀಲೂರ್, ಶ್ರೀ ರಾಜಕುಮಾರ್, ಹಿರಿಯ ಗೈಡ್ ಶಿಕ್ಷಕಿರವರಾದ ಶ್ರೀಮತಿ ಶಾಂತಮ್ಮ, ಶ್ರೀಮತಿ ದಾಕ್ಷಾಯಿಣಿ ರಾಜಕುಮಾರ್, ಕಚೇರಿ ಸಿಬ್ಬಂದಿ ಹಾಗೂ ನಗರದ ವಿವಿಧ ಶಾಲೆಗಳ ಕಬ್, ಬುಲ್ಬುಲ್, ಸ್ಕೌಟ್ ಗೈಡ್ ಮಕ್ಕಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾನವ ಸರಪಳಿ ಮಾಡಿ ಈ ವರ್ಷದ ಧ್ಯೇಯ ವಾಕ್ಯವನ್ನು ಪುನಃರುಚ್ಚರಿಸಲಾಯಿತು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಜೇಶ್ ಅವಲಕ್ಕಿರವರು ಕಾರ್ಯಕ್ರಮದ ನಿರೂಪಣೆ ಮಾಡಿ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಶಿಕಾರಿಪುರ ಬಸ್ ಅಫಘಾತ.ಗಾಯಾಳುಗಳ ಕ್ಷೇಮ ವಿಚಾರಿಸಿದ ಸಂಸದ ರಾಘವೇಂದ್ರ

B.Y. Raghavendra ಶಿಕಾರಿಪುರದ ಕುಮದ್ವತಿ ಕಾಲೇಜಿನ ಮುಂಭಾಗದಲ್ಲಿ ಇಂದು ಬೆಳಿಗ್ಗೆ...

U.T. Khader ದೇಶ,ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಅನನ್ಯ-ಯು‌.ಟಿ‌.ಖಾದರ್

U.T. Khader ಬೀದರ್‌ನ ಝೀರಾ ಕನ್ವೆನ್ಸನ್ ಹಾಲ್‌ನಲ್ಲಿ ಕಳೆದ ಎರಡು ದಿನಗಳಿಂದ...

Asha Bhosle ಭಾರತೀಯ‌ “ಇನಿದನಿ “ಆಶಾ ಭೋಂಸ್ಲೆ ಇನ್ನಿಲ್ಲ.!

Asha Bhosle ಭಾರತದ ಜನಪ್ರಿಯ ಗಾಯಕಿ ಆಶಾ ಭೋಂಸ್ಲೆ (92). ಅವರು...

Bapuji Institute of Hi-Tech Education ಯಶಸ್ವಿ ಬದುಕಿಗೆ ಶಾಲಾ ಪಾಠಕ್ಕಿಂತ ಜೀವನ ಪಾಠವೇ ಮುಖ್ಯ- ಡಾ.ರಾಹುಲ್ ದೇವರಾಜ್

Bapuji Institute of Hi-Tech Education ಜಾಗತಿಕ ಸವಾಲುಗಳನ್ನೆದುರಿಸುತ್ತಾ ಬದುಕಿನಲ್ಲಿ ಯಶಸ್ಸು...