Akashvani Bhadravati 1965ರ ಫೆಬ್ರವರಿ 7ರಂದು ಆರಂಭವಾದ ಆಕಾಶವಾಣಿ ಭದ್ರಾವತಿ ಕೇಂದ್ರ ವಿವಿಧ ಅಂಶಗಳಲ್ಲಿ ಪ್ರಸಾರ ಶಕ್ತಿಯನ್ನ ಅಧಿಕ
ಮಾಡಿಕೊಳ್ಳುತ್ತ ಬಂದ್ದಿದು 62ನೇ ವರ್ಷದಲ್ಲಿ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನವನ್ನ ಒಳಗೊಂಡ 10ಕಿಲೋ ವ್ಯಾಟ್
ಸಾಮರ್ಥ್ಯದ ಎಫ್.ಎಂ 101.4 ತರಂಗಾಂತರದ ಮೂಲಕ ಶಿವಮೊಗ್ಗದ ಸುತ್ತಮುತ್ತಲಿನ ಸುಮಾರು 8 ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿಯನ್ನು
ಹೆಚ್ಚಿಸಿಕೊಳ್ಳುತ್ತಿದೆ. ಆಕಾಶವಾಣಿ ಶಿವಮೊಗ್ಗ ಎಫ್.ಎಂ. ಕೇಂದ್ರದ ಮುಖಾಂತರ ಭದ್ರಾವತಿಯ ಆಕಾಶವಾಣಿಯ ಕಾರ್ಯಕ್ರಮಗಳು
ಪ್ರಸಾರವಾಗಲಿದ್ದು ಜಿಲ್ಲೆಯ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಜಾನಪದ ಕಲಾಕಾರರಿಗೆ ಹೆಚ್ಚಿನ ಅವಕಾಶ ಸಿಗಲಿದ್ದು ಮಹಿಳೆಯರು, ಮಕ್ಕಳು, ಯುವಕರು ಮತ್ತು ಎಲ್ಲಾ ವಯೋಮಾನದವರಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಮಾಹಿತಿ ಮನೋರಂಜನೆ ಹಾಗು ಶಿಕ್ಷಣವನ್ನ ಧೈಯವಾಗಿಟ್ಟುಕೊಂಡ ಆಕಾಶವಾಣಿ ಭದ್ರಾವತಿ ಕೇಂದ್ರವು ಹೆಚ್ಚಿನ ಜನರಿಗೆ ತಲುಪಲು ಮಧ್ಯ ಕರ್ನಾಟಕದಲ್ಲಿ ಸ್ಥಾಪಿತವಾದ ಈ ಕೇಂದ್ರ ಅನುಕೂಲತೆ ಕಲ್ಪಿಸುತ್ತದೆ. Akashvani Bhadravati ಈ ಕಾರ್ಯಕ್ರಮ ದಿನಾಂಕ 26.02.2026ರಂದು ಮಧ್ಯಾಹ್ನ 12.30ಕ್ಕೆ ಕೇಂದ್ರ ಸರ್ಕಾರದ ಮಾನ್ಯ ರಾಜ್ಯ ಮಾಹಿತಿ ಪ್ರಸಾರ ಹಾಗು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಡಾ.ಎಲ್.ಮುರುಗನ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದರಾದ ಶ್ರೀ.ಬಿ.ವೈ.ರಾಘವೇಂದ್ರ ಹಾಗು ಜಿಲ್ಲಾ ಮಂತ್ರಿಗಳಾದ ಶ್ರೀ. ಎಸ್.ಮಧುಬಂಗಾರಪ್ಪ ಹಾಗು ಇವರೊಡನೆ
ಶಿವಮೊಗ್ಗ ಜಿಲ್ಲೆಯ ವಿಧಾನಸಭೆ ಮತ್ತು ವಿಧಾನ ಪರಿಷತ್ನ ಎಲ್ಲಾ ಸದಸ್ಯರುಗಳು ಭಾಗವಹಿಸಲಿದ್ದಾರೆ.
Akashvani Bhadravati ಶಿವಮೊಗ್ಗಕ್ಕೆ 10 ಕಿ,ವ್ಯಾ. ಶಕ್ತಿಯ ಎಫ್.ಎಂ.ಆಕಾಶವಾಣಿ ಕೇಂದ್ರ. ಫೆ. 26 ರಂದು ಲೋಕಾರ್ಪಣೆ
Date:
