Monday, April 13, 2026
Monday, April 13, 2026

S.N. Channabasappa ಊರುಗಡೂರು ಕೊಲೆ ಪ್ರಕರಣ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿಲ್ಲ: ಶಾಸಕ ಎಸ್.ಎನ್.ಚನ್ನಬಸಪ್ಪ

Date:

S.N. Channabasappa ಶಿವಮೊಗ್ಗ ಹೊರವಲಯದ ಊರುಗಡೂರಿನಲ್ಲಿ ಅಪ್ರಾಪ್ತ ಬಾಲಕನ ಹತ್ಯೆ ವಿಚಾರವಾಗಿ
ಘಟನೆಯ ಕುರಿತು ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ನವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಇಂದು ನಡೆದಿರುವ ಘಟನೆ ಅತ್ಯಂತ ದುಃಖ ತಂದಿದೆ.
ವಿಶೇಷ ತರಗತಿ ಮುಗಿಸಿಕೊಂಡು ಹೊರಟಿದ್ದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ. ಇನ್ನೊಬ್ಬನ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲು ಹೋದ ವಿದ್ಯಾರ್ಥಿ ಜೀವ ಕಳೆದುಕೊಂಡಿದ್ದಾನೆ ಎಂದಿದ್ದಾರೆ. ಇಂದು ಬೆಳಗ್ಗೆ ಊರಗಡೂರಿನ ಪರಿಸ್ಥಿತಿಯ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲ ಆಗಿದೆ.

ಹಿಂದುಗಳ ಹತ್ಯೆ ನಡೆದಾಗ ಅವರ ಹೆಣ ಹೊರಲು ಪೊಲೀಸರು ಬರುತ್ತಾರೆ.
ಘಟನೆ ಸಂಬಂಧ ಕೆಲವರನ್ನ ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಹೋದ ಜೀವ ಮತ್ತೆ ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಶಿರಾಳಕೊಪ್ಪದಲ್ಲೂ ಸಹ ನಿನ್ನೆ ಇಂಥದೇ ಘಟನೆ ನಡೆದಿದ್ದು,
ಆದಾಗಿಯೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿಲ್ಲ.
ಕೇವಲ ಹತ್ಯೆಗೀಡಾದ ಹಿಂದುಗಳ ಪೋಸ್ಟ್ ಮಾರ್ಟಂ ಹಾಗೂ ಶವದ ಮೆರವಣಿಗೆಗೆ
ಪೊಲೀಸರು ಸೀಮಿತವಾಗಿದ್ದಾರೆ. ಅವರ ಉಪವಾಸದ ಹಬ್ಬದಲ್ಲೂ ಹಿಂದುಗಳ ಮೇಲೆ ಹಲ್ಲೆ ಮುಂದುವರೆದಿದೆ‌‌
ದ್ವಿಚಕ್ರ ವಾಹನದಲ್ಲಿ ಮೂರ್ನಾಲ್ಕು ಜನರು ದೊಣ್ಣೆ ಹಿಡಿದು ಓಡಾಡುವುದು ಮಾಮೂಲಿಯಾಗಿದೆ ಎಂದಿದ್ದಾರೆ.

S.N. Channabasappa ಮತ್ತೂರು ಸುತ್ತಮುತ್ತಲ ಗ್ರಾಮದಲ್ಲಿ ಹೆಣ್ಣು ಮಕ್ಕಳ ಮೇಲೂ ಹಲ್ಲೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಇದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.
ಈ ಬಗ್ಗೆ ಏನಾದರೂ ಹೇಳಲು ಹೋದರೆ ನಮ್ಮನ್ನು ಕೋಮುವಾದಿಗಳು ಎಂದು ಹೇಳುತ್ತಾರೆ.
ಹಾಗೆಂದು ಇಂತಹ ಕೃತ್ಯವನ್ನು ನೋಡಿ ನಾವು ಸುಮ್ಮನಿರಬೇಕೇ ಎಂದಿದ್ದಾರೆ.

ಹೊಸ ಎಸ್ಪಿ ಘಟನೆಯ ಕುರಿತು ಕಥೆಯನ್ನು ಹೇಳುತ್ತಾರೆ.
ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಶಿಕಾರಿಪುರ ಬಸ್ ಅಫಘಾತ.ಗಾಯಾಳುಗಳ ಕ್ಷೇಮ ವಿಚಾರಿಸಿದ ಸಂಸದ ರಾಘವೇಂದ್ರ

B.Y. Raghavendra ಶಿಕಾರಿಪುರದ ಕುಮದ್ವತಿ ಕಾಲೇಜಿನ ಮುಂಭಾಗದಲ್ಲಿ ಇಂದು ಬೆಳಿಗ್ಗೆ...

U.T. Khader ದೇಶ,ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಅನನ್ಯ-ಯು‌.ಟಿ‌.ಖಾದರ್

U.T. Khader ಬೀದರ್‌ನ ಝೀರಾ ಕನ್ವೆನ್ಸನ್ ಹಾಲ್‌ನಲ್ಲಿ ಕಳೆದ ಎರಡು ದಿನಗಳಿಂದ...

Asha Bhosle ಭಾರತೀಯ‌ “ಇನಿದನಿ “ಆಶಾ ಭೋಂಸ್ಲೆ ಇನ್ನಿಲ್ಲ.!

Asha Bhosle ಭಾರತದ ಜನಪ್ರಿಯ ಗಾಯಕಿ ಆಶಾ ಭೋಂಸ್ಲೆ (92). ಅವರು...

Bapuji Institute of Hi-Tech Education ಯಶಸ್ವಿ ಬದುಕಿಗೆ ಶಾಲಾ ಪಾಠಕ್ಕಿಂತ ಜೀವನ ಪಾಠವೇ ಮುಖ್ಯ- ಡಾ.ರಾಹುಲ್ ದೇವರಾಜ್

Bapuji Institute of Hi-Tech Education ಜಾಗತಿಕ ಸವಾಲುಗಳನ್ನೆದುರಿಸುತ್ತಾ ಬದುಕಿನಲ್ಲಿ ಯಶಸ್ಸು...