DVS College of Arts, Science and Commerce ಹಿಂದಿ ಸಾಹಿತ್ಯದಲ್ಲಿ ಸಂತ ಮಹಾತ್ಮರ ಕೊಡುಗೆ ಅಮೂಲ್ಯ. ಸಂತ ಕವಿಗಳು ಸಾಹಿತ್ಯದ ಮೂಲಕ ಅತ್ಯಮೂಲ್ಯ ಸಂದೇಶ ಸಾರಿದರು ಎಂದು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಲೇಖಕ ಪ್ರೊ. ಧನ್ಯಕುಮಾರ್ ಬಿರಜ್ದಾರ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿಂದಿ ವಿಭಾಗದಿಂದ ಆಯೋಜಿಸಿದ್ದ ಭಾರತೀಯ ಸಾಹಿತ್ಯದಲ್ಲಿ ಸಂತ ಪರಂಪರೆ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಸಂತ ಪರಂಪರೆಯು ಸರಳ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದು, ಜೀವನ ಮೌಲ್ಯಗಳನ್ನು ಸಾಹಿತ್ಯದಲ್ಲಿ ಅರ್ಥ ಆಗುವಂತೆ ವಿವರಿಸಿದ್ದಾರೆ. ಸಮಾಜ ಸುಧಾರಣೆಗೆ ಪೂರಕವಾದ ಅಂಶಗಳನ್ನು ಸಾಹಿತ್ಯದಲ್ಲಿ ಅಳವಡಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎಂದು ತಿಳಿಸಿದರು.
ಹಿಂದಿ ಸಾಹಿತ್ಯದಲ್ಲಿ ಸಂತ ಮಹಾತ್ಮರು ಭಕ್ತಿಪರ ಕಾವ್ಯ, ಸಾಮಾಜಿಕ ಸಂದೇಶಗಳು ಭಾರತೀಯ ಸಂಸ್ಕೃತಿಗೆ ದಿಕ್ಕು ತೋರಿಸುವ ಬೆಳಕಿನಂತಿದೆ. ಮಹಾನ್ ಸಂತರು ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಯ ಶಕ್ತಿ ಸಾರುತ್ತದೆ ಎಂದು ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ನಡೆಸಬೇಕು. ಸಾಹಿತ್ಯದಲ್ಲಿನ ಮೌಲ್ಯಯುತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸಮಿತಿ ವತಿಯಿಂದ ನಿರಂತರವಾಗಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ಪಿ.ದಿನೇಶ್ , ಸಹ ಕಾರ್ಯದರ್ಶಿ ಡಾ. ಎ.ಸತೀಶ್ಕುಮಾರ್ ಶೆಟ್ಟಿ, ಎಂ.ರಾಜು, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಚಾಲಕ ಪ್ರೊ. ಎನ್.ಕುಮಾರಸ್ವಾಮಿ, ಹಿಂದಿ ವಿಭಾಗದ ಮುಖ್ಯಸ್ಥ ಡಾ. ಎಂ.ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.
