Wednesday, February 18, 2026
Wednesday, February 18, 2026

H.S. Sundaresh ಅಂತರ್ಜಲ ಕಾಪಿಡಲು ಶಿವಮೊಗ್ಗದ ಕೆರೆಗಳ ಅಭಿವೃದ್ಧಿ ನಮ್ಮ ಗುರಿ- ಹೆಚ್.ಎಸ್.ಸುಂದರೇಶ್

Date:

H.S. Sundaresh ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅವರು ಸಾಗರ ರಸ್ತೆಯ ಶಿವಪ್ಪನಾಯಕ ಕೆರೆಯ ಜೀರ್ಣೋದ್ಧಾರ ಸಂಬಂಧ ಸ್ಥಳ ಪರಿಶೀಲನೆಗೆ ಅಧಿಕಾರಿ ವರ್ಗದವರೊಂದಿಗೆ ಇಂದು, (ತಾ. 17-2-26) ರಂದು ಭೇಟಿ ನೀಡಿದ್ದರು.

ಶಿವಮೊಗ್ಗ ಮತ್ತು ಸುತ್ತಮುತ್ತ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕೆರೆಗಳ ಅಭಿವೃದ್ಧಿ ಪ್ರಸ್ತಾವನೆ ಇದೆ. ಹೀಗಾಗಿ ಸದ್ಯ ಸಾಗರ ರಸ್ತೆಯಲ್ಲಿ ಸಿರಿಮಲ್ಲಿಗೆ ವಸತಿ ಸಂಘಕ್ಕೆ ಹೊಂದಿಕೊಂಡಂತೆ ಇರುವ ಕೆರೆಯ ಅಭಿವೃದ್ಧಿಯ ಯೋಜನೆಯೂ ಸೇರಿದೆ ಎಂದು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ,ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸಿರಿಮಲ್ಲಿಗೆ ವಸತಿ ಸಂಘದ ಜಯಕಮಲ್ ಮತ್ತು ಮಲ್ಲಿಗೆ ನಗರ ಬಡಾವಣೆಗಳ ಪಾರ್ಕ್
ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಹಂತಕ್ಕೆ ಹೋಗಿದೆ ಎಂದು ಹೇಳಿದರು.
ಆದಷ್ಟು ಶೀಘ್ರ ಕೆರೆ ಮತ್ತು ಪಾರ್ಕ್ ಕಾಮಗಾರಿ ಆರಂಭಿಸಿ, ಈ ಪಾರ್ಕ್ ಮತ್ತು ಕೆರೆ ಅಭಿವೃದ್ಧಿಯಿಂದ ಸುತ್ತಲ ಹತ್ತು ಬಡಾವಣೆಯಲ್ಲಿ ವಾಸಿಸುವ ಸಾರ್ವಜನಿಕರಿಗೆ ವಿನೋದ ವಿಹಾರ ತಾಣವಾಗಿ ಕಂಗೊಳಿಸುವಲ್ಲಿ ಸೂಡಾ ಕೊಡುಗೆಯಾಗಿ ಇಲ್ಲಿ ವಸತಯಿರುವ ಸಮುದಾಯಕ್ಕೆ ನೀಡಲಿ, ಸುಂದರೇಶ್ ಅವರ ಅಧಿಕಾರಾವಧಿಯಲ್ಲೇ ಈ ಜನೋಪಯೋಗಿ ಕಾರ್ಯ ಪೂರ್ಣವಾಗುವಂತಾಗಲಿ ಎಂದು ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷ ಡಾ.ಸುಧೀಂದ್ರ ಹಾರೈಸಿ ಮಾತನಾಡಿದರು.

H.S. Sundaresh ಸಿರಿಮಲ್ಲಿಗೆ ವಸತಿ ಸಂಘದ ಖಜಾಂಚಿ ಮಹೇಶ್ ಯಲಿಗಾರ್, ಹಿರಿಯ ಸಲಹೆಗಾರರುಗಳಾದ ಡಿ.ಎನ್.ಶ್ರೀಧರ ರಾವ್
ನಾಡಿಗ್ ಮತ್ತು ಶಿವಾಜಿರಾವ್, ಸೂಡಾ ಇಂಜಿನಿಯರ್ ಗಂಗಾಧರ ಸ್ವಾಮಿ ಮುಂತಾದ ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಶಿವಮೊಗ್ಗ ಗ್ರಾಮೀಣ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ.20 ರಂದು ಜನಸಂಪರ್ಕ ಸಭೆ

MESCOM ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಗ್ರಾಹಕರ...

District Consumer Disputes Redressal Commission ಕರ್ನಾಟಕ ಬ್ಯಾಂಕ್ ಸೇವಾ ನ್ಯೂನತೆ ದೂರು: ಪರಿಹಾರ ನೀಡಲು ಆದೇಶ

ಶಿವಮೊಗ್ಗ ಜಿಲ್ಲೆಯ ಕಾಚಿನಕಟ್ಟೆ ನಾಗರಾಜ್ ಬಿ.ಎಂ. ಎಂಬುವವರು ಸಂತೇ ಕಡೂರು ಕೆನರಾ...

Agnipath scheme ಅಗ್ನಿವೀರ್ ನೇಮಕಾತಿಗಾಗಿ ಆನ್ ಲೈನ್ ಅರ್ಜಿ ಆಹ್ವಾನ

Agnipath scheme ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ...

Department of Kannada and Culture ಫೆ‌.19. ಛತ್ರಪತಿ‌ ಶ್ರೀ ಶಿವಾಜಿ ಮಹಾರಾಜರ ಜಯಂತಿ ಜಿಲ್ಲಾಡಳಿತದಿಂದ ಆಯೋಜನೆ

Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...