Friday, May 15, 2026
Friday, May 15, 2026

ಶ್ರದ್ಧೆ ,ನಿಷ್ಠೆ ಮತ್ತು ಪ್ರಾಮಾಣಿಕತೆ ಇರುವ ಕಾಯಕದಿಂದ ಬಡತನವೇ ಇರದು- ಸಿ.ಎಸ್.ಚಂದ್ರಭೂಪಾಲ

Date:

ಶ್ರದ್ದೆ, ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಕಾಯಕದಲ್ಲಿ ತೊಡಗಿದಾಗ ಬಡತನವೇ ಇರುವುದಿಲ್ಲ ಎಂದು ಕಾಯಕ ಶರಣರು ತಮ್ಮ ನಡೆ ಮತ್ತು ನುಡಿಯ ಮೂಲಕ ಸಾರಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅಸಮಾನತೆ, ತಾರತಮ್ಯ ಮತ್ತು ಕೆಟ್ಟ ಸಂಪ್ರದಾಯಗಳನ್ನು ಹೋಗಲಾಡಿಸಲು ಅವರೆಲ್ಲ ಹೋರಾಡಿದ್ದಾರೆ. ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಬೇಕು. ಆಗ ಸಮಾಜದಲ್ಲಿ ಬಡತನವೆಂಬುದು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಶರಣರು ಸಮಾಜದ ಅಭಿವೃದ್ದಿಗಾಗಿ ಮತ್ತು ಏಳ್ಗೆಯ ದಿಶೆಯಲ್ಲಿ ಶ್ರಮಿಸಿದ್ದು ವಚನಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. 12 ನೇ ಶತಮಾನದಿಂದ ನಡೆದು ಬಂದ ಶರಣರ ಕಾಯಕ ಸಂಸ್ಕೃತಿಯನ್ನು ನಾವೆಲ್ಲ ಮುಂದುವರೆಸಿಕೊAಡು ಹೋಗೋಣ ಎಂದರು.
ದಾರ್ಶನಿಕರು, ಶರಣರು ಮತ್ತು ಮಹಾನ್ ವ್ಯಕ್ತಿಗಳ ತತ್ವಗಳು, ವಿಚಾರಗಳು ಮತ್ತು ಜೀವನ ಚರಿತ್ರೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಬೇಕು. ಆಗ ಮಕ್ಕಳು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ತಿಳಿದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ಶAಕರಘಟ್ಟದ ಸಾಹಿತಿಗಳಾದ ಡಾ.ಬಸವರಾಜ್ ನೆಲ್ಲಿಸರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶರಣರು ಆಡಿದ ಮಾತುಗಳು, ನೀಡಿದ ವಚನಗಳು ಜೀವನ್ಮುಖಿಯಾಗಿವೆ. ಸಿನೆಮಾ, ಸೀರಿಯಲ್, ಮೊಬೈಲ್‌U ನೋಡುವುದನ್ನು ಬಿಟ್ಟು ಶರಣರ ವಚನ ಸಾಹಿತ್ಯವನ್ನು ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಜವಾದ ಕಲ್ಯಾಣ ಆಗುತ್ತದೆ.
ಬಸವಣ್ಣನವರು ಸೇರಿದಂತೆ ಎಲ್ಲ ಶರಣರು, ಎಲ್ಲ ಜಾತಿ, ಧರ್ಮಗಳು ಒಂದೇ ಎಂದು ಸಾರಿ ಸಮಾಜದಲ್ಲಿ ತಾಂಡವವಾಡುತ್ತಿದ್ದ ಅನಿಷ್ಟ ಪದ್ದತಿಗಳಿಗೆ ಚಾಟಿ ಬೀಸಿ, ಹೆಣ್ಣಿಗೆ ಗೌರವ ಮತ್ತು ಸಮಾನತೆ ನೀಡಬೇಕು, ಅಸ್ಪೃಶ್ಯತೆ ಹೋಗಬೇಕು ಎಂದು ಹೋರಾಡಿದ್ದರು.
ಕಾಯಕಕ್ಕೆ ಮತ್ತೊಂದು ಹೆಸರಾದ ಶರಣರಾದ ಮಾದಾರ ಚನ್ನಯ್ಯನವರು ಬಸವಣ್ಣನವರಿಗಿಂತ ಹಿರಿಯರಾಗಿದ್ದು ಕುದುರೆ ಕಾಯುವ ಕಾಯಕದಲ್ಲಿ ತೊಡಗಿ, ಬರುವ ಶರಣರಿಗೆ ಅಂಬಲಿ ಪ್ರಸಾದ ನೀಡುತ್ತ ಶಿವನನ್ನೇ ಒಲಿಸಿಕೊಂಡಿದ್ದರು, ಮಾದಾರ ದೂಳಯ್ಯ ತಮ್ಮ ಕಾಯಕದೊಂದಿಗೆ ಹಲವಾರು ವಚನ ರಚಿಸಿದ್ದಾರೆ. ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಸಹ ಕಾಯಕ ನಿಷ್ಟೆಗೆ ಹೆಸರಾಗಿದ್ದು, ಸಮಾಜದಲ್ಲಿನ ಅನಿಷ್ಟ ಪದ್ದತಿ ನಿವಾರಣೆಗೆ ತಮ್ಮ ಕೊಡುಗೆ ನೀಡಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಾಡು, ನೃತ್ಯ, ಮತ್ತು ಉಪನ್ಯಾಸಗಳ ಮೂಲಕ ಕಾಯಕ ಶರಣರ, ದಾರ್ಶನಿಕರ ಬಗ್ಗೆ ತಿಳಿಸಿ ಹೇಳುವ ಕೆಲಸ ಆಗಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಶರಣರ ವಚನಗಳು, ತತ್ವಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಡಳಿತ ಕಚೇರಿಯ ತಹಶೀಲ್ದಾರ್ ಪ್ರದೀಪ್ ಆರ್ ಮಾತನಾಡಿ, ವಚನಕಾರರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಜಾತಿ ಮತ್ತು ಧರ್ಮಗಳನ್ನು ಮೀರಿದವರು. 12ನೇ ಶತಮಾನದ ವಚನ ಸಾಹಿತ್ಯ ಸಮುದ್ರವಿದ್ದಂತೆ. ಪರ್ವತದಷ್ಟು ಎತ್ತರವಾದ ವಿಚಾರಗಳಿವೆ. ದಾರ್ಶನಿಕರ ಆಶಯಗಳು, ತತ್ವಗಳು, ವಿಚಾರಗಳು ಮುಂದಿನ ಪೀಳಿಗೆಗೆ ತಲುಪಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shivamogga ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದು ಮನುಷ್ಯರ ಜವಾಬ್ದಾರಿ- ಬಿ.ಜಿ.ಶಿವಮೂರ್ತಿ

Rotary Club Shivamogga ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸುವುದು...

Bhadra dam ಮೇ17 ರ ಮಧ್ಯರಾತ್ರಿಯಿಂದ ಭದ್ರಾ ಬಲ ಮತ್ತು ಎಡದಂಡೆ ಕಾಲುವೆಗಳ ಮೂಲಕ ಹರಿಯುತ್ತಿರುವ ನೀರು ಬಂದ್

Bhadra dam ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಬಲದಂಡ...

Royal Diamond English Medium School ಮನೆಯೇ ಮೊದಲ ಪಾಠಶಾಲೆ.ತಾಯಿಯೇ ಮೊದಲ ಗುರು- ವೀಣಾ ನಾಯಕ್

Royal Diamond English Medium School ಸಿರಿಗನ್ನಡ ವೇದಿಕೆ, ಮಹಿಳಾ...

Priyanka Kharge ಗ್ರಾಮ ಪಂಚಾಯತ್ ಗಳು ರಾಷ್ಡ್ರಮಟ್ಟದಲ್ಲಿ ಗಮನ ಸೆಳೆದು ಪ್ರಶಸ್ತಿಗೆ ಭಾಜನ: ಸಶಕ್ತೀಕರಣಕ್ಕೆ ಹಿಡಿದ ಕನ್ನಡಿ- ಸಚಿವ ಪ್ರಿಯಾಂಕ ಖರ್ಗೆ

Priyanka Kharge ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಕರ್ನಾಟಕದ...