Monday, December 22, 2025
Monday, December 22, 2025

Kuvempu ಡಿಸೆಂಬರ್ 29. ಕುಪ್ಪಳಿಯಲ್ಲಿ ವಿಶ್ವ ಮಾನವ ದಿನಾಚರಣೆಗೆಜಿಲ್ಲಾಡಳಿತದಿಂದ ಪೂರ್ವಸಿದ್ಧತೆ.

Date:

Kuvempu ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್- ಶಿವಮೊಗ್ಗ ಮತ್ತು ರಾಷ್ಟçಕವಿ ಕುವೆಂಪು ಪ್ರತಿಷ್ಠಾನ-ಕುಪ್ಪಳಿ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 10.00ಕ್ಕೆ ಕುಪ್ಪಳಿಯ ಹೇಮಾಂಗಣದಲ್ಲಿ ಕುವೆಂಪು ಅವರ 121ನೇ ಜನ್ಮದಿನೋತ್ಸವ, ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 10.00ಕ್ಕೆ ಅತಿಥಿಗಳಿಂದ ಕವಿಶೈಲದಲ್ಲಿ ಕವಿನಮನ, ಬೆ. 11 ರಿಂದ ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು. ಕಾರ್ಯಕ್ರಮದಲ್ಲಿ 2025ನೇ ಸಾಲಿನ ಕುವೆಂಪು ಪ್ರಶಸ್ತಿ ಪುರಸ್ಕೃತ ಗೋವಾದ ಖ್ಯಾತ ಕೊಂಕಣಿ ಸಾಹಿತಿ ಶ್ರೀ ಮಹಾಬಳೇಶ್ವರ ಸೈಲ್‌ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್.ಶಂಕರ್, ಕುವೆಂಪು ವಿವಿ ಕುಲಪತಿಗಳು ಹಾಗೂ ಕುವೆಂಪು ಪ್ರತಿಷ್ಠಾನದ ಉಪಾಧ್ಯಕ್ಷ ಡಾ. ಶರತ್ ಅನಂತಮೂರ್ತಿ ಗೌರವ ಉಪಸ್ಥಿತಿ ಹಾಗೂ ಮುಖ್ಯ ಅತಿಥಿಗಳಾಗಿ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಂಚಾಲಕ ಕೇಶವ ಮಳಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಸೇರಿದಂತೆ ಜಿಲ್ಲೆಯ ಸಂಸದರು, ಎಲ್ಲಾ ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರುಗಳು, ವಿವಿಧ ನಿಗಮ/ಮಂಡಳಿ/ಪ್ರಾಧಿಕಾರದ ಅಧ್ಯಕ್ಷರುಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿರುವರು.
Kuvempu ಅಂದು ಸಂಜೆ 6.00ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮAದಿರದಲ್ಲಿ ತೀರ್ಥಹಳ್ಳಿಯ ಸುಮುಖ ಸಂಗೀತ ನೃತ್ಯ ಶಾಲೆ ಮತ್ತು ಶ್ರೀ ರಾಜರಾಜೇಶ್ವರಿ ನೃತ್ಯ ತಂಡ ಪ್ರಸ್ತುತಪಡಿಸುವ ಕುವೆಂಪು ಗೀತೆಗಳ ನೃತ್ಯ ಸಂಭ್ರಮ ಹಾಗೂ ನವೀನ್ ಸಾಣೆಹಳ್ಳಿ ನಿರ್ದೇಶನದ ಶ್ರೀ ಗಜಾನನ ಯುವಕ ಮಂಡಳ, ಶೇಷಗಿರಿ, ಹಾನಗಲ್ ತಾ. ಪ್ರಸ್ತುತಪಡಿಸುವ ಕುವೆಂಪು ವಿರಚಿತ “ ಬೆರಳ್ ಗೆ ಕೊರಳ್ ಎಂಬ ನಾಟಕ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಶತಮಾನದ ಸಂಭ್ರಮದಲ್ಲಿರುವ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೃತಿಯ ಆಯ್ದ ಸನ್ನಿವೇಶಗಳನ್ನು ಆಧರಿಸಿದ ಚಿತ್ರಗಳೊಂದಿಗೆ 2026ರ ಕ್ಯಾಲೆಂಡರ್ ವಿಶೇಷವಾಗಿ ರೂಪಿಸಲಾಗಿದ್ದು ಬಿಡುಗಡೆ ಮಾಡಲಾಗುತ್ತಿದೆ.
ಅಂದು ಬೆಳಗ್ಗೆ 10.00ಕ್ಕೆ ಕುವೆಂಪು ಜನ್ಮಸ್ಥಳ ಹಿರಿಕೊಡಿಗೆಯಲ್ಲಿ ಕೊಪ್ಪ ತಾಲೂಕು ಆಡಳಿತ ಮತ್ತು ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕವಿನಮನ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 27 ರಿಂದ 29 ರವರೆಗೆ ಬೆಂಗಳೂರು ವಿಶ್ವ ಮಾನವ ಕುವೆಂಪು ವೇದಿಕೆಯ ಸಹಕಾರದಲ್ಲಿ ಕುವೆಂಪು ಸಾಹಿತ್ಯ ಅಧ್ಯಯನ ಶೀಬಿರ ನಡೆಯಲಿದೆ. ಖ್ಯಾತ ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಈ ಶಿಬಿರದ ನಿರ್ದೇಶಕರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡೋಣ- ಮಧು ಬಂಗಾರಪ್ಪ.

Madhu Bangarappa ಶಿವಮೊಗ್ಗದ ಆರ್ಯ ಈಡಿಗರ ಭವನದಲ್ಲಿ ಆಯೋಜಿಸಿದ್ದ "ದೀವರ ಸಾಂಸ್ಕೃತಿಕ...

University of Sciences ಜೇನುಕೃಷಿ : ರೈತರಿಂದ- ರೈತರಿಗಾಗಿ ಡಿಸೆಂಬರ್ 23 ರಂದು ತರಬೇತಿ ಕಾರ್ಯಕ್ರಮ

University of Sciences ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ವಿಸ್ತರಣಾ ನಿರ್ದೇಶನಾಲಯದ ರೈತರ...

Shri Shivaganga Yoga Kendra ಧ್ಯಾನಗಳಲ್ಲಿ 112ಕ್ಕಿಂತಲೂ ಜಾಸ್ತಿ ವಿಧಾನಗಳಿವೆ- ವಿರಕ್ತಮಠದ ಹಾಲಯ್ಯ.

Shri Shivaganga Yoga Kendra ಆನಾಪಾನಸತಿ ಧ್ಯಾನ ಅಂದರೆ ನಮ್ಮ ದೇಹದ...

Madhu Bangarappa ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು- ಸಚಿವ ಮಧು ಬಂಗಾರಪ್ಪ

Madhu Bangarappa ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಶಿಕ್ಷಕರ ಪ್ರೋತ್ಸಾಹದ ಜೊತೆಗೆ ಪೋಷಕರ...