S. Rudregowda ಕುಟುಂಬದ ಶಾಂತಿ, ನೆಮ್ಮದಿ ಜತೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಯೋಗ ಮತ್ತು ಧ್ಯಾನ ಪ್ರಕ್ರಿಯೆ ಸಹಕಾರಿಯಾಗುತ್ತದೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಅಂತರಾಷ್ಟ್ರೀಯ ಯೋಗ ಧ್ಯಾನ ದಿನಾಚರಣೆ ಅಂಗವಾಗಿ ಶಿವಗಂಗಾ ಯೋಗ ಕೇಂದ್ರ ಕೃಷಿ ನಗರ, ಎಲ್‌ಬಿಎಸ್ ನಗರ, ಅಶ್ವತ್ಥ್ ನಗರಗಳ ಯೋಗಶಾಖೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಅಶಕ್ತತೆ, ಒತ್ತಡ, ಘರ್ಷಣೆ, ಹಿಂಸೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಯೋಗ, ಧ್ಯಾನಗಳ ಆಚರಣೆಯಿಂದ ಪ್ರತಿಯೊಬ್ಬ ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಚಿತ್ತಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹ, ಸಹಬಾಳ್ವೆ, ನಂಬಿಕೆ ಮತ್ತು ಜೀವನಕ್ಕೆ ಅಗತ್ಯವಿರುವ ಎಲ್ಲ ಮೌಲ್ಯಗಳನ್ನು ಒಗ್ಗೂಡಿಸುತ್ತದೆ ಎಂದು ತಿಳಿಸಿದರು.
ಶಿವಗಂಗಾ ಯೋಗಕೇಂದ್ರವು ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರ ನೇತೃತ್ವದ ತಂಡ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ ಎಂದು ಹೇಳಿದರು.
S. Rudregowda ವಿರಕ್ತ ಮಠದ ಹಾಲಯ್ಯ ಮಾತನಾಡಿ, ಧ್ಯಾನದಿಂದ ನಮ್ಮ ದೇಹದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ವೈಜ್ಞಾನಿಕವಾಗಿ ವಿವರಿಸಿದರು. ಶಿವಗಂಗಾ ಯೋಗಕೇಂದ್ರದ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರಾರಾಧ್ಯ ಮಾತನಾಡಿ, ನಗರದ ವಿವಿಧೆಡೆಗಳಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.
ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಚ್.ಎಂ.ಚಂದ್ರಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು. ಶಿವಗಂಗಾ ಯೋಗಕೇಂದ್ರದ ಪೋಷಕ ಪರಮೇಶ್, ಜಿ.ಎಸ್.ಓಂಕಾರ್, ನೀಲಕಂಠರಾವ್, ಜಿ.ವಿಜಯಕುಮಾರ್, ವಿಜಯ ಬಾಯರ್, ಅನಿಲ್‌ಕುಮಾರ್, ಪ್ರೊ. ಸುರೇಶ್, ಕಾಟನ್ ಜಗದೀಶ್, ಕೃಷ್ಣಮೂರ್ತಿ, ನಾಗರತ್ನ ಚಂದ್ರಶೇಖರಯ್ಯ, ಜ್ಯೋತಿ, ರುದ್ರೇಶ್, ರವಿ ಹಾಗೂ ಯೋಗ ಶಿಬಿರಾರ್ಥಿಗಳು ಹಾಜರಿದ್ದರು.
