Thursday, March 19, 2026
Thursday, March 19, 2026

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Date:

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ ಬಿರಾದರರವರು ಭೌತಶಾಸ್ತ್ರ ವಿಷಯದಲ್ಲಿ ಡಾ. ಚಂದ್ರಶೇಖರ ಎಂ.ಎನ್. ಮತ್ತು ಪ್ರೋ. ದೇವಿದಾಸ್ ಜಿ.ಬಿ ಅವರ ಮಾರ್ಗದರ್ಶನದಲ್ಲಿ ಸಂಶೋಧಿಸಿದ “ಸಿಂಥೇಸಿಸ್ ಆಂಡ್ ಕ್ಯಾರೇಕ್ಟರೈಜೇಷನ್ ಆಫ್ ಹ್ಯವಿ ಮೆಟಲ್ ಆಕ್ಸೈಡ್ ಡೋಪ್ಡ್ ಬೋರೇಟ್ ಗ್ಲಾಸೆಸ್ ಫಾರ್ ರೇಡಿಯೇಷನ್ ಶೀಲ್ಡಿಂಗ್ ಅಪ್ಲಿಕೇಷನ್” ಎಂಬ ಪ್ರಬಂಧಕ್ಕೆ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್‌ಡಿ ನೀಡಿ ಗೌರವಿಸಿದೆ.

ಇವರು ತಮ್ಮ ಪ್ರಬಂಧದಲ್ಲಿ ಕಿರಣ ರಕ್ಷಣೆಗೆ ಸೂಕ್ತವಾದ ನವೀನ ಬೊರೇಟ್ ಗ್ಲಾಸ್ ವಸ್ತುಗಳ ಅಭಿವೃದ್ಧಿ ಮತ್ತು ಅವುಗಳ ಗುಣಲಕ್ಷಣಗಳನ್ನು ಸಂಶೋಧಿಸಿದ್ದಾರೆ. ಈ ಅಧ್ಯಯನವು ಕಿರಣ ರಕ್ಷಣಾ ವಸ್ತುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ವಿಷಯದಲ್ಲದಿ ಮಹತ್ವದ ಮಾಹಿತಿಯನ್ನು ಒದಗಿಸುತ್ತದೆ.

ಭವಿಷ್ಯದಲ್ಲಿ ಯಂತ್ರಗಳು, ವೈದ್ಯಕೀಯ ಉಪಕರಣಗಳು ಮತ್ತು ಇತರ ರೇಡಿಯೇಷನ್ ಅಪ್ಲಿಕೇಶನ್‌ಗಳಿಗೆ ಬಳಸಬಹುದಾದ ಶಿಲ್ಡಿಂಗ್ ವಸ್ತುಗಳ ಅಭಿವೃದ್ಧಿಗೆ ದಾರಿತೋರಬಹುದೆಂದು ಶ್ರೀಕಾಂತ ಬಿರಾದರ ತಿಳಿಸಿದ್ದಾರೆ.

Kuvempu University ಶ್ರೀಕಾಂತ ಬಿರಾದರರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಲು ಅಭಿನಂದಿಸಿದ್ದಾರೆ. ಸಂಶೋಧನೆಗೆ ಸಹಕರಿಸಿದ ಗುರುಗಳು, ಕಾಲೇಜು ಮತ್ತು ಮನೆಯವರ ಬೆಂಬಲಕ್ಕೆ ಶ್ರೀಕಾಂತ ಬಿರಾದರ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...