ಮಂಜುನಾಥ ಹೂಗಾರ್, 36 ವರ್ಷ ಮಂಜುನಾಥ ಬಡಾವಣೆ, ಶಿವಮೊಗ್ಗ ಇವರು ಅ.27 ರಂದು ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್‌ನಲ್ಲಿ ಊಟ ಮಾಡಿ ಹಿಂದಿರುಗುವಾಗ ಕಾಣೆಯಾಗಿರುತ್ತಾರೆ.
ಕಾಣೆಯಾದ ಮಂಜುನಾಥ್ ಸುಮಾರು 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ಮುಂಭಾಗದ ತಲೆಯು ಭಾಗಶಃ ಬೋಳಾಗಿರುತ್ತದೆ. ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದ ವೇಳೆ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕೇಸರಿ ಬಣ್ಣದ ಶರ್ಟ್ನ್ನು ಧರಿಸಿರುತ್ತಾರೆ.
ಈ ವ್ಯಕ್ತಿಯ ಸುಳಿವು ಯಾರಿಗಾದರೂ ಕಂಡು ಬಂದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದೆಂದು ಪ್ರಕಟಣೆ ತಿಳಿಸಿದೆ.
ಶಿವಮೊಗ್ಗದಲ್ಲಿ ವ್ಯಕ್ತಿ ಕಾಣೆ : ಪತ್ತೆಗೆ ಮನವಿ
Date:
