Dr. Gajanana Sharma ದಿನಾಂಕ ೨೮ನೇ ನವೆಂಬರ್ ೨೦೨೫ರ ಶುಕ್ರವಾರÀ, ಸಂಜೆ ೫:೩೦ಕ್ಕೆ ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತಿç ಸಾಹಿತ್ಯ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಇವರ ಅಧ್ಯಕ್ಷತೆಯಲ್ಲಿ “ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-೨೦೨೫” ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಮೂಲತ: ಶಿವಮೊಗ್ಗ ಜಿಲ್ಲೆಯ, ಬೆಂಗಳೂರಿನಲ್ಲಿ ವಾಸವಿರುವ ಪ್ರಸಿದ್ಧ ಸಾಹಿತಿ, ನಟ, ನಾಟಕಕಾರ ಮತ್ತು ನಿರ್ದೇಶಕರಾದ ಡಾ. ಗಜಾನನ ಶರ್ಮ ಅವರು ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-೨೦೨೫ನ್ನು ಸ್ವೀಕರಿಸಲಿದ್ದಾರೆ.
Dr. Gajanana Sharma ವಿದ್ವಾನ್ ಜಿ.ಎಸ್. ನಟೇಶ್, ಚಿಂತಕರು ಮತ್ತು ಉಪನ್ಯಾಸಕರು, ಶಿವಮೊಗ್ಗ ಇವರು ಡಾ. ಗಜಾನನ ಶರ್ಮ ಅವರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ
