Friday, December 5, 2025
Friday, December 5, 2025

Lions Club Shimoga ಲಯನ್ಸ್ ಕ್ಲಬ್ ನಿಂದ ತುಂಗಾನಗರದಲ್ಲಿ ಉಚಿತ ನೇತ್ರ ತಪಾಸಣೆ & ಕನ್ನಡಕ ವಿತರಣೆ.

Date:

Lions Club, Shimoga ಜಿ.ಪಂ. ತಾ.ಪಂ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತುಂಗನಗರದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರ ಯಶಸ್ವಿಯಾಗಿ ನಡೆಯಿತು.

ಈ ಶಿಬಿರಕ್ಕೆ ವಿವಿಧ ಗ್ರಾಮಗಳಿಂದ ಬಂದ ಸುಮಾರು ೧೮೫ ರೋಗಿಗಳು ನೇತ್ರ ತಪಾಸಣೆಗೆ ಭಾಗವಹಿಸಿದರು. ನೇತ್ರ ತಜ್ಞರಿಂದ ಸಂಪೂರ್ಣ ದೃಷ್ಟಿ ಪರೀಕ್ಷೆ ನಡೆಯಿತು. ತಪಾಸಣೆಯ ನಂತರ ೪೮ರೋಗಿಗಳು ಮುತ್ತಿನ ಬಿಂದು (ಕ್ಯಾಟರ್‍ಯಾಕ್ಟ್) ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಶಿವಮೊಗ್ಗ ಶಂಕರ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗು ವುದು ಎಂದು ತಿಳಿಸಲಾಯಿತು.

ಇದೇ ವೇಳೆ ೬೬ರೋಗಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾ ಯಿತು. ಪ್ರದೇಶ ಅಧ್ಯಕ್ಷ ಎಂ.ಜೆ.ಎಫ್. ಗಿರೀಶ್ ಕೆ. ನಾಯಕ್, ಶಿವರಾಮ ಜಿ.ಪಿ., ಎಂಜೆಎಫ್. ಕುಮಾರ್ ಜಿ.ಎಸ್., ಎಂ.ಜೆ.ಎಫ್. ಡಾ. ಉಮಾದೇವಿ ಎಸ್. ಬಿರಾದಾರ್, ಐರಿನ್ ಗೋವಿಯಾಸ್, ಎಂಜೆಎಫ್ ಪೌಲ್ ಗೋವಿಯಾಸ್.ಶಂಕರ ಆಸ್ಪತ್ರೆ ಸಿಬ್ಬಂದಿ, ಡಾ. ಲಕ್ಷಿತಾ (ನೇತ್ರ ತe), ಸಚಿನ್ ಎ.ಆರ್., ಭಾರ್ಗವಿ, ಅನುಷಾ, ಕಂಚನಾ (ಜಿಎನ್‌ಎಂ), ಪ್ರವೀಣ್ ಕೆ. ಶಿಬಿರ ಉದ್ಘಾಟಿಸಿದ ೧ನೇ ಉಪ ರಾಜ್ಯಪಾಲ (ವಿಡಿಜಿ) ಅಭ್ಯರ್ಥಿ ಎಂ.ಜೆ.ಎಫ್. ಲಯನ್ ಡಾ. ಎಸ್.ಐ. ಬಿರಾದಾರ್ ಅವರು ಲಯನ್ಸ್ ಕ್ಲಬ್ ಕೈಗೊಂಡಿರುವ ಸಾಮಾಜಿಕ ಆರೋಗ್ಯ ಸೇವೆಗಳ ಮಹತ್ವವನ್ನು ಪ್ರಶಂಸಿಸಿ, ಇಂತಹ ಶಿಬಿರಗಳು ಗ್ರಾಮೀಣ ಜನತೆಗೆ ಮಹತ್ತರವಾದ ನೆರವು ಆಗುತ್ತಿವೆ ಎಂದು ಹೇಳಿದರು.

Lions Club, Shimoga ಈ ಶಿಬಿರದ ಯಶಸ್ವಿ ಸಂಯೋಜನೆ ಯನ್ನು ಲಯನ್ ನಂದೀಶ್ ಎನ್.ಟಿ., ಜಿಲ್ಲಾ ಸಂಯೋಜಕ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ (೩೧೭ಸಿ) ಅವರು ಶಿವಮೊಗ್ಗ ಆಪ್ಟಿಕಲ್ಸ್ ಸಹಯೋಗದಲ್ಲಿ ಅತ್ಯುತ್ತ ಮವಾಗಿ ನಿರ್ವಹಿಸಿ ಮಾತನಾಡಿ, ಈ ವರ್ಷ ಲಯನ್ಸ್ ಜಿಲ್ಲೆ ೩೧೭ಅ ನಲ್ಲಿ ೩೦೦೦ ( ಬೆಲೆ ೫೪೦೦೦೦ )ಕ್ಕೂ ಹೆಚ್ಚು ಉಚಿತ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಿದ್ದೇವೆ. ಈಗಾಗಲೇ ಸಾಗರ, ಸಾಗರ ಶ್ರೀಗಂಧ, ಸೊರಬ, ಶಿವಮೊಗ್ಗ, ಭದ್ರಾವತಿ ಮತ್ತು ಶುಗರ್ ಟೌನ್ ಲಯನ್ಸ್ ಕ್ಲಬ್‌ಗಳ ಮೂಲಕ ೭೫೦(ಬೆಲೆ ೧೩೫೦೦೦)ಕ್ಕೂ ಹೆಚ್ಚು ಕನ್ನಡಕ ವಿತರಣೆ ಹಾಗೂ ೮೦೦ಕ್ಕೂ ಹೆಚ್ಚು ಮುತ್ತಿನಬಿಂದು (ಕ್ಯಾಟರ್‍ಯಾಕ್ಟ್) ಶಸ್ತ್ರಚಿಕಿತ್ಸೆಗಳು ನೆರವೇರಿವೆ ಎಂದು ತಿಳಿಸಿದರು. ಲಯನ್ಸ್ ಜಿಲ್ಲೆ ೩೧೭ ಜಿಲ್ಲಾ ಸಂಯೋ ಜಕರಾದ ಲಯನ್ ನಂದೀಶ್ ಎನ್.ಟಿ. ಅವರು ನೇತ್ರ ಶಿಬಿರ ಮತ್ತು ಕನ್ನಡಕ ವಿತರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...