Friends Center Shivamogga ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ವತಿಯಿಂದ ನಗರದ ಎಟಿಎನ್‌ಸಿಸಿ ಕಾಲೇಜಿನ ಫ್ರೆಂಡ್ಸ್ ಸಭಾಂಗಣದಲ್ಲಿ ನವೆಂಬರ್ 28ರಂದು ಬೆಳಗ್ಗೆ 11.30ಕ್ಕೆ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಮೊದಲ 50 ಸ್ಪರ್ಧಿಗಳಿಗೆ ಆದ್ಯತೆ ನೀಡಲಾಗುವುದು. ಸಿರಿಧಾನ್ಯಗಳಿಂದ ತಯಾರಿಸಿದ ಒಂದು ಸಿಹಿ ಮತ್ತು ಒಂದು ಖಾರದ ಖಾದ್ಯವನ್ನು ಮನೆಯಲ್ಲೇ ತಯಾರಿಸಿಕೊಂಡು ಬಂದು ಆಕರ್ಷಕವಾಗಿ ಪ್ರದರ್ಶಿಸಬೇಕು. ಸ್ಪರ್ಧೆಯ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಶುಚಿ, ರುಚಿ Friends Center Shivamogga ಹಾಗೂ ಅಚ್ಚುಕಟ್ಟಾಗಿ ಪ್ರದರ್ಶಿಸುವ ಖಾದ್ಯಗಳನ್ನು ಪರಿಗಣಿಸಲಾಗುವುದು. 100 ರೂ. ಪ್ರವೇಶ ಶುಲ್ಕ ಇರುತ್ತದೆ. ಮಾಹಿತಿಗೆ 8088882425, 9449230127, 9481500004 ಸಂಪರ್ಕಿಸಬಹುದಾಗಿದೆ ಎಂದು ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷೆ ಸ್ವಪ್ನಾ ಬದ್ರಿನಾಥ್ ತಿಳಿಸಿದ್ದಾರೆ.
ಫೋಟೊ: ಸ್ವಪ್ನಾ ಬದ್ರಿನಾಥ್
