ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಶಿಬಿರ ಸಾಗರದ ಬಂದಗದ್ದೆ ಗ್ರಾಮ, ಶಿವಮೊಗ್ಗ ಜಿಪಂ, ತಾಲ್ಲೂಕು ಪಂಚಾಯತ್, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಶಿವಮೊಗ್ಗ, ಲಯನ್ಸ್ ಕ್ಲಬ್ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಗರದ ಬಂದಗದ್ದೆ ಗ್ರಾಮದಲ್ಲಿ ನ. 20 ರಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ವಿವಿಧ ಗ್ರಾಮಗಳಿಂದ ಬಂದ ಸುಮಾರು 250 ಮಂದಿ ರೋಗಿಗಳು ನೇತ್ರ ತಪಾಸಣೆಗಾಗಿ ಭಾಗವಹಿಸಿದರು. ನೇತ್ರ ತಜ್ಞರಿಂದ ಸಮಗ್ರ ದೃಷ್ಟಿ ತಪಾಸಣೆ ನಡೆಯಿತು.
ಅದರಲ್ಲಿ 56 ಮಂದಿ ರೋಗಿಗಳು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು, ಮತ್ತು ಶೀಘ್ರದಲ್ಲೇ ಶಿವಮೊಗ್ಗ ಶಂಕರ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ 62 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು, ಒಟ್ಟು 260 ಜನ ನೇತ್ರ ತಪಾಸಣೆ ಮಾಡಿಸಿಕೊಂಡರು.
ಇದರಿಂದ ಅವರಿಗೆ ಉತ್ತಮ ದೃಷ್ಟಿ ಪಡೆಯಲು ಸಹಾಯವಾಯಿತು. ಕನ್ನಡಕದ ವಿತರಣೆ ದಾನಿಗಳಾದ ಲಯನ್ಸ್ ಕ್ಲಬ್ ಪ್ರಥಮ ಉಪಾಧ್ಯಕ್ಷರಾದ ಪಿಎಂಜೆಎಫ್ ಲಯನ್ ನಾಗರಾಜ್.ಈ, ವಕೀಲರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ. ಟಿ ಇವರು ಉಪಸ್ತಿತರಿದ್ದರು. ಡಾ. ಪ್ರಜಕ್ತಾ, ಕಣ್ಣಿನ ತಜ್ಞರು, ಡಾ. ಭರತ್, ಸಹಾಯಕ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಬಂದಗದ್ದೆ , ಶ್ರೀ ಸಚಿನ್, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಶ್ರೀಮತಿ ಸವಿತಾ, ಹಿರಿಯ ಮೇಲ್ವಿಚಾರಕರು, ಉಪಸ್ತಿತರಿದ್ದರು.
ಈ ಶಿಬಿರದ ಯಶಸ್ವಿ ಸಂಯೋಜನೆಯನ್ನು ಲಯನ್ ನಂದೀಶ್ ಎನ್.ಟಿ. (ಜಿಲ್ಲಾ ಸಂಯೋಜಕ – ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ, ಜಿಲ್ಲೆ 317C) ಅವರು ಶಿವಮೊಗ್ಗ ಆಪ್ಟಿಕಲ್ಸ್ ಸಹಯೋಗದೊಂದಿಗೆ ನಿರ್ವಹಿಸಿದರು.
