S.N.Chennabasappa ಶಿವಮೊಗ್ಗ ಮಹಾನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಗಂಭೀರವಾಗಿ ಹಾಳಾಗಿರುವ ಹಿನ್ನೆಲೆಯಲ್ಲಿ, ಇಂದು ಬೆಂಗಳೂರಿನಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (DG ಮತ್ತು IGP) ಡಾ. ಎಂ.ಎ. ಸಲೀಮ್ ಹಾಗೂ ಅಪರ ಪೊಲೀಸ್ ಮಹಾ ನಿರ್ದೇಶಕರಾದ (ADGP) ಶ್ರೀ ಹಿತೇಂದ್ರ ಕುಮಾರ್ ಅವರನ್ನು ಶಾಸಕ ಚನ್ನಬಸಪ್ಪ ಭೇಟಿಯಾದರು.
ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಕರ್ತವ್ಯ ನಿರ್ವಹಣೆಯ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಕಳೆದ ಎರಡು ವರ್ಷಗಳಿಂದ ನಗರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಗಳು, ಮಾದಕ ವಸ್ತುಗಳ ಮಿತಿಮೀರಿದ ಬಳಿಕೆ ಮತ್ತು ಅಪರಾಧ ಕೃತ್ಯಗಳ ವಿಪರೀತ ಹೆಚ್ಚಳಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (DG ಮತ್ತು IGP) ಡಾ. ಎಂ.ಎ. ಸಲೀಮ್ ಹಾಗೂ ಅಪರ ಪೊಲೀಸ್ ಮಹಾ ನಿರ್ದೇಶಕರಾದ (ADGP) ಶ್ರೀ ಹಿತೇಂದ್ರ ಕುಮಾರ್ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಇತ್ತೀಚೆಗೆ ನಗರದ ನಿವಾಸಿಯಾದ ಶ್ರೀ ಹರೀಶ್ ಎಂಬುವರ ಮೇಲೆ ಮುಸಲ್ಮಾನ ಗೂಂಡಾಗಳಿಂದ ನಡೆದ ಹಲ್ಲೆ ಪ್ರಕರಣದ ಕುರಿತು ವಿಶೇಷವಾಗಿ ಗಮನ ಸೆಳೆದರು
ಶಾಸಕ ಚನ್ನಬಸಪ್ಪನವರ ಮನವಿಗೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (DG ಮತ್ತು IGP) ಡಾ. ಎಂ.ಎ. ಸಲೀಮ್ ಹಾಗೂ ಅಪರ ಪೊಲೀಸ್ ಮಹಾ ನಿರ್ದೇಶಕರಾದ (ADGP) ಶ್ರೀ ಹಿತೇಂದ್ರ ಕುಮಾರ್ ತಕ್ಷಣವೇ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶಿವಮೊಗ್ಗದ ಕಾನೂನು ಸುವ್ಯವಸ್ಥೆಯ ಗಂಭೀರತೆಯನ್ನು ಮನಗಂಡು, ಶಿವಮೊಗ್ಗದ ಸುರಕ್ಷತೆ ಮತ್ತು ಸಾರ್ವಜನಿಕ ಶಾಂತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿ, ತಕ್ಷಣದ ಕ್ರಮಕ್ಕೆ ಸೂಚಿಸಿದರು.
S.N.Chennabasappa ಈ ಹಿನ್ನೆಲೆಯಲ್ಲಿ, ಜಿಲ್ಲೆಯ ಕಾನೂನು ಸುವ್ಯವಸ್ಥೆಯ ವಾಸ್ತವ ಪರಿಸ್ಥಿತಿ ಮತ್ತು ಪೊಲೀಸ್ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಅವಶ್ಯಕ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ, ಪೂರ್ವ ವಲಯ, ದಾವಣಗೆರೆ ಐ.ಜಿ.ಪಿ (IGP) ಶ್ರೀ ರವಿ ಕಾಂತೇಗೌಡ ಐ.ಪಿ.ಎಸ್. ಅವರು ನಾಳೆ (ಗುರುವಾರ, ನವೆಂಬರ್ 20, 2025) ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ಈ ಭೇಟಿಯ ಮೂಲಕ ಪೊಲೀಸ್ ಇಲಾಖೆಯಲ್ಲಿ ನಿರ್ಲಕ್ಷ್ಯಕ್ಕೆ ಶೂನ್ಯ ಸಹಿಷ್ಣುತಾ ನೀತಿಯನ್ನು ಜಾರಿಗೊಳಿಸಿ, ಹೊಣೆಗಾರಿಕೆ ಮತ್ತು ಶಿಸ್ತನ್ನು ಮರುಸ್ಥಾಪಿಸುವ ಭರವಸೆ ಇದೆ ಎಂದು ಶಾಸಕ ಚೆನ್ನಿ ನುಡಿದರು.
ಶಿವಮೊಗ್ಗದ ಅಭಿವೃದ್ಧಿ, ಸುರಕ್ಷತೆ, ಮತ್ತು ಗೌರವಕ್ಕಾಗಿ ಯಾವುದೇ ರಾಜಿ ಇಲ್ಲ. ಎಂತಹ ಸವಾಲು ಎದುರಾದರೂ, ಶಿವಮೊಗ್ಗ ನಗರಕ್ಕಾಗಿ ನಾವು ಸದಾ ಸಿದ್ಧ ಮತ್ತು ಬದ್ಧ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ.
