Friday, December 5, 2025
Friday, December 5, 2025

Klive Special Article ಸಾಮಾಜಿಕ ಕಳಕಳಿಯಲ್ಲಿ ಶೃಂಗದಂತಿದೆ, ಶ್ರೀಶೃಂಗೇರಿ ಜಗದ್ಗುರು ಪೀಠ

Date:

ಲೇ; ಪ್ರಭಾಕರ ಕಾರಂತ

Klive Special Article ಜಗದ್ಗುರುಗಳಿಂದ ಭಾನುವಾರ ದೆಹಲಿಯ ಶಂಕರ ವಿದ್ಯಾ ಕೇಂದ್ರದಲ್ಲಿ ಕುಂಭಾಭಿಷೇಕ ನಡೆಯಿತು. ಶಾರದಮ್ಮನ ನೂತನ ವಿಗ್ರಹ ಪ್ರತಿಷ್ಠಾ ಕುಂಭಾಭಿಷೇಕದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಜಗದ್ಗುರುಗಳ ಧರ್ಮ ವಿಜಯ ಯಾತ್ರೆ ಎಂದರೇ ಧಾರ್ಮಿಕ ಕಾರ್ಯಕ್ರಮಗಳು,ಶಾಸ್ತ್ರ ಸಭೆಗಳು,ಅನುಗ್ರಹ ಭಾಷಣ, ದೇವಸ್ಥಾನ ಭೇಟಿ ಮತ್ತು ಹೋಮಹವನಗಳು. ಜಗದ್ಗುರುಗಳು ಹೋಗುವ ಬಹುತೇಕ ಕಡೆಗಳಲ್ಲಿ ಶೃಂಗೇರಿಯ ಶಂಕರಮಠ ಇರುತ್ತದೆ. ಆ ಶಾಖೆಗಳು, ಸಂಸ್ಥೆಗಳು ನಿರಂತರ ಧರ್ಮ ಉಳಿಸುವ ಚಟುವಟಿಕೆಯಲ್ಲಿ ತೊಡಗಿರುತ್ತವೆ.ಗುರುಗಳ ಭೇಟಿ ಅಲ್ಲಿನ ಕಾರ್ಯಕ್ಕೆ ಪುನಶ್ಚೇತನ ನೀಡುತ್ತದೆ.
ಶೃಂಗೇರಿಯ ಮಠದಿಂದ ಉಡುಪಿ ಜೆಲ್ಲೆಯ ಅನೇಕ ಶಾಲಾ ಕಾಲೇಜಿಗೆ ಭೋಜನ ಪ್ರಸಾದ ಬರುತ್ತಿರುವ ಸಂಗತಿಯನ್ನು ಈಚೆಗೆ ಕಮಲಶಿಲೆಯ ಶ್ರೀಮತಿ ಪೂರ್ಣಿಮ ನರಸಿಂಹ ಬರೆದಾಗ ಅನೇಕರಿಗೆ ಇದು ಅಚ್ಚರಿ ತಂದಿದೆ. ಭೋಜನ ಪ್ರಸಾದ ಶಾಲೆಗಳಿಗೆ ಕಳಿಸಲು ಆರಂಭಿಸಿ ಕಾಲು ಶತಮಾನವೇ ಆಗಿದೆ.ಆಗಿನ್ನೂ ಸರ್ಕಾರ ಬಿಸಿಯೂಟ ಯೋಜನೆ ಆರಂಭಿಸಿರಲಿಲ್ಲ. ಚಿಕ್ಕಮಗಳೂರು,ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ನೂರಾರು ಶಾಲಾ ಕಾಲೇಜಿಗೆ ಸುಮಾರು 20 ಸಹಸ್ರ ಕ್ಕೂ ಹೆಚ್ಚಿನ ಮಕ್ಕಳಿಗೆ ಭೋಜನ ಪ್ರಸಾದ ಕಳಿಸಲಾಗುತ್ತಿದೆ.ಸರ್ಕಾರೀ ಶಾಲೆಗಳೂ ಬಿಸಿಯೂಟದ ಬದಲು ಪ್ರಸಾದ ಭೋಜನವನ್ನೇ ಈ ಪ್ರದೇಶದಲ್ಲಿ ಆಯ್ಕೆ ಮಾಡುತ್ತವೆ. ಶೃಂಗೇರಿಯ ಜಗದ್ಗುರುಗಳಿಂದ ಅನುಗ್ರಹ ಭಾಷಣದಲ್ಲಿ ಮಠ ಭೋಜನ ಕಳಿಸುತ್ತದೆ ಎಂಬ ಮಾತು ಬರುವುದಿಲ್ಲ. ಮಠ ಪ್ರಚಾರ ಮಾಡುವುದಿಲ್ಲ.
Klive Special Article ಈ ಭಾರಿ ಮಹಾಕುಂಭದಲ್ಲಿ ಭೋಜನ ಒದಗಿಸಲು ವಾರಣಾಸಿಯ ಅನ್ನಪೂರ್ಣ ಟ್ರಸ್ಟ್ ಗೆ ಮಠ 50 ಲಕ್ಷರೂ ನೀಡಿತು.ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ವಾರ್ಷಿಕ 25 ಲಕ್ಷ ರೂ ಅನುದಾನ ನೀಡಲಾಗುತ್ತಿದೆ.ಮರು ಮತಾಂತರ ಕಾರ್ಯ ಕೈಗೆತ್ತಿಕೊಂಡ ಕೇರಳದ ಆರ್ಶವಿದ್ಯಾಸಂಸ್ಥೆಗೆ 50 ಲಕ್ಷ ರೂ ನೀಡಿತು. ಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳು,ದೇವಸ್ಥಾನ ಮರು ನಿರ್ಮಾಣ ಇತ್ಯಾದಿ ಅನೇಕ ಕಾರ್ಯಕ್ಕೆ ಮಠದಿಂದ ಈಛಿನ ವರ್ಷಗಳಲ್ಲಿ ನೂರು ಕೋಟಿ ರೂ ಒದಗಿಸಲಾಗಿದೆ.ಐವತ್ತು ವೇದ ಪಾಠ ಶಾಲೆ ಮಠ ನಡೆಸುತ್ತಿದೆ. ದೇಶಾದ್ಯಂತ ಅನೇಕ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಮಠದ ಬಹುತೇಕ ಶಾಖೆಗಳಲ್ಲಿ ಅವಿರತ ಇಂತಹ ಬಹೂಪಯೋಗಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ದೇಶಾದ್ಯಂತ ಗೋ ಸಂರಕ್ಷಣೆಯ ಸಂಸ್ಥೆಗಳಿಗೆ ವಾರ್ಷಿಕ ಕೋಟ್ಯಂತರ ನೆರವು ಒದಗಿಸಲಾಗುತ್ತಿದೆ.
ಕೇರಳದ ಕಾಲಟಿಯಲ್ಲಿ ಶೃಂಗೇರಿಯ ಶಂಕರಮಠ ಇದೆ.ಅದರ ಆಶ್ರಯದಲ್ಲಿ ಶ್ರೀ ಆದಿಶಂಕರ ಶಿಕ್ಷಣ ಸಮೂಹ ಸಂಸ್ಥೆಗಳಿವೆ. 2018 ರಲ್ಲಿ ಕೇರಳ ಭೀಕರ ಪ್ರವಾಹಕ್ಕೆ ತುತ್ತಾಯಿತು.
ಆಗ ಈ ಸಂಸ್ಥೆಗಳು ಪುನರ್ವಸತಿ ಶಿಭಿರ ಆರಂಭಿಸಿತು. ಈ ಶಿಭಿರದಲ್ಲಿ ನಾಲ್ಕೈದು ಸಹಸ್ರ ಜನ ಆಶ್ರಯ ಪಡೆದರು. ಒಂಬತ್ತು ದಿನ ಕೇವಲ ಅನ್ನಾಹಾರವಲ್ಲದೇ ಆರೋಗ್ಯ ಸೌಲಭ್ಯವನ್ನೂ ಒದಗಿಸಲಾಗಿತ್ತು. ಅಂಬ್ಯುಲೆನ್ಸ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿತು. 500 ಜನ ವಲಸೆ ಕಾರ್ಮಿಕರಿಗೆ ವಸತಿ ನಿರ್ಮಿಸಿಕೊಡಲಾಯಿತು.
ಪ್ರವಾಹ ಇಳಿದ ಮೇಲೆ ಸಂತ್ರಸ್ತರ ಮನೆಗಳನ್ನು ವಾಸಯೋಗ್ಯ ಮಾಡಿಕೊಡಲಾಯಿತು. ಕುಡಿಯುವ ನೀರಿನ ಮೂಲ ಸ್ವಚ್ಛ ಗೊಳಿಸಲಾಯಿತು. ಹೆಚ್ಚಾಗಿ ಬಡವರು ಮತ್ತು ದಲಿತರೇ ಇದ್ದ ಈ ವಸತಿ ಸಂಕೀರ್ಣಗಳ ಸಂತ್ರಸ್ತರ ಮುಂದಿನ ತಕ್ಷಣದ ಬದುಕನ್ನು ಗಮನದಲ್ಲಿಟ್ಟು ಧವಸ ಧಾನ್ಯ, ವಸ್ತ್ರ,ಔಷದ,ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಒದಗಿಸಲಾಯಿತು. ಇದು ಗುರುಗಳಿರಲಿ ಮಠವೂ ಪತ್ರಿಕೆಗಳಲ್ಲಿ ಸುದ್ದಿ ಬರುವಂತೆ ಮಾಡಲಿಲ್ಲ. ಎಲ್ಲಾ ಸಾರ್ಥಕ ಕಾರ್ಯ ಮುಗಿದ ಮೇಲೆ ಮಠದ ಪತ್ರಿಕೆಯಲ್ಲಿ ಕಡೆಯ ಪುಟಗಳಲ್ಲಿ ಒಂದು ಚಿಕ್ಕ ಸುದ್ದಿ ಪ್ರಕಟಿಸಲಾಯಿತು.
ಮೊನ್ನೆ ಪುಲ್ವಾಮ ದಾಳಿಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಎಲ್ಲಾ ಸಂತ್ರಸ್ತರ ಮನೆಗೂ ಶೃಂಗೇರಿಯ ಪ್ರಸಾದ ರೂಪದಲ್ಲಿ ತಲಾ ಎರಡು ಲಕ್ಷರೂ ಒದಗಿಸಲಾಯಿತು. ಪ್ರತಿ ಮನೆಗೂ ಮಠದ ಸಿಬ್ಬಂದಿಯೇ ಚಕ್ ತಲ್ಪಿಸಿದರು. ಹೀಗೆ ಚಕ್ ನೀಡುತ್ತಿರುವ ಫೋಟೋ ಸಹ ಪ್ರಚಾರಕ್ಕೆ ಬರಲಿಲ್ಲ. ಪೂರ್ಣಿಮ ರವರ ಲೇಖನಕ್ಕೆ ಪ್ರತಿಕ್ರಿಯಿಸಿದವರೊಬ್ಬರು ಚಿನ್ನದ ಕಿರೀಟ,ಪಲ್ಲಕ್ಕಿ ಜತೆ ಇಂತಹ ಕಾರ್ಯವೂ ಆಗಲಿ ಎಂದು ಪ್ರತಿಕ್ರಿಯಿಸಿದ್ದರು. ಶೃಂಗೇರಿಯ ಜಗದ್ಗುರುಗಳು ಎಂದೂ ಚಿನ್ನದ ಕಿರೀಟ, ಪಲ್ಲಕ್ಕಿ ಮಾಡಿಸಿಕೊಂಡಿಲ್ಲ.ರಾಜಮಹಾರಾಜರು ನೀಡಿದ ಕಿರೀಟ ಪಲ್ಲಕ್ಕಿ ಅಪರೂಪದ ಸಂಧರ್ಭ ಬಳಸುತ್ತಾರೆ. ಶಾರದಮ್ಮನಿಗೆ ಸ್ವರ್ಣ ಮಂಟಪ,ಸ್ವರ್ಣ ದ್ವಾರ,ಗೋಡೆಗೆ ಸ್ವರ್ಣ ಕವಚ,ಸ್ವರ್ಣ ಕಲಶ, ಚಂದ್ರಮೌಳೀಶ್ವರ ನಿಗೆ ಸ್ವರ್ಣ ಮಂಟಪ ಆಗಿದೆ ನಿಜ.ಅದೆಲ್ಲವೂ ಸ್ವರ್ಣ ಸಿಂಹಾಸನವೂ ಭಕ್ತರು ಅರ್ಪಿಸಿದ್ದು. ಮಹಾಸನ್ನಿಧಾನ ಈಗ ತಮ್ಮ ವರ್ದಂತ್ಯುತ್ಸವದಲ್ಲಿ ಕೂಡ ಪೀತಾಂಬರ ಕಾವಿ ಸಹ ಧರಿಸುವುದಿಲ್ಲ.
ದೇಹಲಿಯ ಶಾರದಮ್ಮನ ಅಲಂಕಾರಕ್ಕೆ ಸಹಸ್ರ ಬಿಳಿ ಕಮಲ ಪುಷ್ಪ ತರಿಸಲಾಗಿತ್ತು. ಸನ್ನಿಧಾನಂಗಳು ಸ್ವತಹ ದೇವಿಯ ಪೂಜೆಯ ಸಂಧರ್ಭ ಅಲಂಕಾರ ಮಾಡುತ್ತಿದ್ದುದನ್ನು ಕಿಕ್ಕಿರಿದು ತುಂಬಿದ್ದ ಭಕ್ತರು ಕಣ್ಣು ತುಂಬಿಕೊಂಡರು. ಲಲಿತಾ ಸಹಸ್ರ ನಾಮಾವಳಿ ಪಠಣದೊಂದಿಗೆ ನಡೆದ ಈ ಪೂಜೆಯನ್ನು ದೆಹಲಿಯ ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ ಸಾರ್ಥಕ ಅನುಭವ ಪಡೆದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...