Children’s Day ದಾವಣಗೆರೆ : ಆದರ್ಶ ಪ್ರಜೆಗಳಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿದ್ದು ಇಂತಹ ಆದರ್ಶಗಳ ಅರಿವನ್ನು ಭಾವಿ ಪ್ರಜೆಗಳಾದ ಮಕ್ಕಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ಜಾಗೃತಗೊಳಿಸಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಕರೆ ಕೊಟ್ಟರು.
ಅವರು ದಾವಣಗೆರೆ ನಗರ ಸಮೀಪದ ತೋಳಹುಣಸೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಸತಿಯುತ ಶಾಲಾ ಸಮೂಹಗಳ ವತಿಯಿಂದ ಏರ್ಪಾಡಾಗಿದ್ದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ವಿಶ್ವದಲ್ಲೇ ಮುಂಚಿತವಾಗಿ ಭಾರತವು ಮಕ್ಕಳ ದಿನಾಚರಣೆಯನ್ನು ‘ಪುಷ್ಪ ದಿನಾಚರಣೆ ಎಂಬುದಾಗಿ 1948 ರಿಂದ ಆಚರಿಸಿಕೊಂಡು ಬರುತ್ತಿತ್ತು. ವಿಶ್ವ ರಾಷ್ಟ್ರ ಸಂಸ್ಥೆಯು 1954ರಲ್ಲಿ ನವೆಂಬರ್ 20 ನ್ನು ‘ವಿಶ್ವ ಮಕ್ಕಳ ದಿನಾಚರಣೆ’ ಎಂಬುದಾಗಿ ಘೋಷಿಸಿತು.
ಭಾರತವು ನೆಹರುರವರ ಜನ್ಮದಿನವಾದ ನವೆಂಬರ್ 14 ನ್ನು 1964 ರಿಂದ ರಾಷ್ಟ್ರೀಯ ಮಕ್ಕಳ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದು ಮಹಾನ್ ವ್ಯಕ್ತಿಗಳ ಬದುಕಿನ ಆದರ್ಶಗಳನ್ನು ಮಕ್ಕಳಿಗೆ ಮನದಟ್ಟು ಮಾಡಲು ಇದು ಅವಕಾಶವಾಗಿದೆ ಎಂದರು.
Children’s Day ಉಪ ಪ್ರಾಂಶುಪಾಲ ಉಮಾಪತಿ ಕೇಶವಪುರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮೂಹ ಸಂಸ್ಥೆಯ ಸಹಸ್ರಾರು ಮಕ್ಕಳು ಭಾಗವಹಿಸಿದ್ದು ಅಧ್ಯಾಪಕ ವರ್ಗದವರೇ ಮಕ್ಕಳಂತೆ ಪೋಷಾಕು ಧರಿಸಿ ಮಕ್ಕಳ ರೀತಿಯಲ್ಲೇ ಅಭಿನಯಿಸುತ್ತಾ ಬ್ಯಾಂಡ್ ಸೆಟ್ ನುಡಿಸಿ ಮಕ್ಕಳಿಗೆ ದಿನಾಚರಣೆಯ ಶುಭಾಶಯ ಕೋರಿದ್ದು ನೆರೆದಿದ್ದ ಮಕ್ಕಳಿಗೆ ವಿಶೇಷ ರಂಜನೆ ನೀಡಿತು.
ಕನ್ನಡ ಅಧ್ಯಾಪಕ ಶಂಕರ್ ನಸ್ವಿ ಸ್ವಾಗತ ಕೋರುತ್ತಾ ಅತಿಥಿಗಳ ಪರಿಚಯ ಮಾಡಿದರು. ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
