Delhi Red Fort Blast ನವೆಂಬರ್ 10. ದೆಹಲಿಯ ಕೆಂಪುಕೋಟೆಯ ಬಳಿ ದುರ್ಘಟನೆ.
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರೊಂದು ಸ್ಫೋಟಗೊಂಡಿತು.
ಕನಿಷ್ಠ 13 ಮಂದಿ ಮರಣಿಸಿದರು. 20 ಹೆಚ್ಚು ಜನರು ಗಾಯಗೊಂಡರು.
ದೆಹಲಿ ಪೊಲೀಸರ ವರದಿ ಪ್ರಕಾರ, ಅಮೋನಿಯಂ ನೈಟ್ರೇಟ್ ರಾಸಾಯನಿಕವೇ ಈ ಸ್ಫೋಟಕ್ಕೆ ಕಾರಣವೆಂದು ಶಂಕಿಸಲಾಗಿದೆ.
ಈ ಸ್ಫೋಟವು ಒಮ್ಮೆಲೆ ಬೆಂಕಿಯನ್ನು ಉಂಟುಮಾಡಿತು.
ಜೊತೆಗೆ ಸನಿಹದಲ್ಲಿದ್ದ ಕಾರುಗಳು ಮತ್ತು ಆಟೋ ರಿಕ್ಷಾಗಳು ಸೇರಿದಂತೆ ಅನೇಕ ವಾಹನಗಳಿಗೆ ಅಪಾರ ಹಾನಿಯನ್ನುಂಟುಮಾಡಿದೆ.
ರಾಷ್ಟ್ರೀಯ ತನಿಖಾತಂಡವು
ತಡಮಾಡದೇ ಈ ಘಟನೆಗೆ ಕಾರಣರಾದ ತಪ್ಪಿತಸ್ಥರ ಶೋಧಕ್ಕೆ ತೊಡಗಿದೆ.
ಸ್ಫೋಟಗೊಂಡ ಕಾರನ್ನು ಶಂಕಿತ ಉಗ್ರ
ಡಾ.ಉಮರ್ ನಬಿ ಚಲಾಯಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದರೆ ಆತ ಆತ್ಮಾಹುತಿ ದಾಳಿಕೋರನೇ ಹೌದೆ ಅಲ್ಲವೆ? ಎಂಬ ಸಂಗತಿಯನ್ನ ಖಚಿತ ಪಡಿಸಿಕೊಳ್ಳಬೇಕಿದೆ.
ಚೋದ್ಯವೆಂದರೆ ಆತ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಕೋಯಿಲ್ ಹಳ್ಳಿಯವನೆಂದು ಹೇಳಲಾಗಿದೆ.
Delhi Red Fort Blast ನಿನ್ನೆ ಸಂಜೆ 6-52 ಕ್ಕೆ ಕೆಂಪುಕೋಟೆಯ ಬಳಿಯಿರುವ ಲಜಪತ್ ರಾಯ್ ಮಾರುಕಟ್ಟೆ ಹತ್ತಿರ ಈ ಭೀಕರ ಸ್ಫೋಟ ನಡೆದಿದೆ.
ಹನ್ನೆರಡು ಜನ ಮರಣಹೊಂದಿದ್ದು ,ಮೂವತ್ತಕ್ಕೂ ಹೆಚ್ಚು ಜನ ಗಾಯಾಳುಗಳಾಗಿದ್ದಾರೆ.
ಅಮಾಯಕ ಜನ ಮತ್ತೆ ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರಗೃಹ ಸಚಿವ ಅಮಿತ್ ಶಾ ಎನ್ ಐ ಎ ಯಿಂದ ತನಿಖೆ ಚುರುಕುಗೊಳಿಸಲು ಆದೇಶಮಾಡಿದ್ದಾರೆ.
ದಿಲ್ಲಿ ಸ್ಫೋಟದ ಬಗ್ಗೆ ಪ್ರಧಾನಿ ಮೋದಿ ಅವರು ಈ ಘಟನೆ ಹಿಂದಿನ ಶಕ್ತಿಯನ್ನ ಶಿಕ್ಷಿಸದೇ ಬಿಡುವುದಿಲ್ಲ.
ನಮ್ಮ ತನಿಖಾ ದಳ ಅವರೆಲ್ಲರಿಗೂ ಪತ್ತೆಮಾಡಿ ದಂಡನೆಗೊಳಪಡಿಸಲಿದೆ ಎಂದಿದ್ದಾರೆ.
