ಪ್ರಶಾಂತ್, 25 ವರ್ಷ ವಯಸ್ಸು ಇವರು ದಿ:24-10-2025 ರಂದು ಬೆಳಿಗ್ಗೆ ತಮ್ಮ ಅಂಗಡಿಯಲ್ಲಿ ಪತ್ರ ಬರೆದಿಟ್ಟು ಕಾಣೆಯಾಗಿರುತ್ತಾರೆ.
ಸಾಲ ಜಾಸ್ತಿಯಾಗಿದೆ ದುಡಿಮೆ ಹಾಗೂ ಹೆಂಡತಿ ಜೊತೆ ಬಾಳ್ವೆ ಮಾಡಲು ಇಷ್ಟವಿಲ್ಲದೇ ಮಹಾರಾಷ್ಟ್ರಕ್ಕೆ ಹೋಗುತ್ತೇನೆ ಪತ್ರ ಬರೆದು ಮನೆ ಬಿಟ್ಟು ಹೋಗಿದ್ದು ಇದುವರೆಗೂ ಅವರ ಯಾವುದೇ ಮಾಹಿತಿ ದೊರಕಿರುವುದಿಲ್ಲ.
ಕಾಣೆಯಾದ ವ್ಯಕ್ತಿ 6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಸದೃಢ ಮೈಕಟ್ಟು ಹೊಂದಿದ್ದಾರೆ. ಇವರು ಕಾಣೆಯಾದ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಪತ್ತೆ ಯಾರಿಗಾದರೂ ಸಿಕ್ಕಲ್ಲಿ ಪಿಎಸ್‌ಐ ಮಾಳೂರು ಠಾಣೆ ದೂ.ಸಂ:08181-235142, 9480803353, ಸಿಪಿಐ ಮಾಳೂರು ವೃತ್ತ ದೂ.ಸಂ:08181-228310, 9480803333, ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 08182-261413, 9480803300 ಗೆ ಸಂಪರ್ಕಿಸಬಹುದೆಂದು ಮಾಳೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ವ್ಯಕ್ತಿ ನಾಪತ್ತೆ, ಮಾಳೂರು ಪೊಲೀಸ್ ಠಾಣೆ ಪ್ರಕಟಣೆ
Date:
