Saturday, December 6, 2025
Saturday, December 6, 2025

S N Channabasappa ರಾಗಿಗುಡ್ಡದಲ್ಲಿ ಸಕಲ ವಿಧಿವಿಧಾನಗಳಿಂದ ಶ್ರೀವಿಘ್ನೇಶ್ವರಸ್ವಾಮಿ ಪ್ರತಿಷ್ಠಾಪನೆ- ಶಾಸಕ ಚೆನ್ನಿ

Date:

S N Channabasappa ಕಳೆದ ಜೂನ್ 5ರಂದು ಶಿವಮೊಗ್ಗ ನಗರದ ರಾಗಿ ಗುಡ್ಡದಲ್ಲಿ ನಡೆದ ಮತಾಂದರ ಹೇಡಿ ಕೃತ್ಯದಿಂದಾಗಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆಯುoಟು ಮಾಡಿತ್ತು. ಹಿಂದೂ ಸಮಾಜದ ಮೇಲೆ ನೂರಾರು ವರ್ಷಗಳಿಂದ ನಿರಂತರ ಆಕ್ರಮಣಗಳು ನಡೆಯುತ್ತಾ ಬಂದಿದ್ದರೂ, ಈ ಆಕ್ರಮಣಗಳನ್ನು ಎದುರಿಸಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದೇವೆ.

ಈ ಘಟನೆಯು ಮತ್ತೊಮ್ಮೆ ಅಖಂಡ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಹಿಂದುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು, ಧರ್ಮ ರಕ್ಷಣೆಗಾಗಿ ಹೋರಾಡುವ ನಮ್ಮ ಬದ್ಧತೆಯನ್ನು ಬಲಪಡಿಸಿದೆ. ಪ್ರತಿ ಆಕ್ರಮಣಕ್ಕೂ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನವೇ ಸೂಕ್ತ ಉತ್ತರ. ಈ ನಿಟ್ಟಿನಲ್ಲಿ ಹಿಂದು ಸಂಘಟನೆಗಳು ಹಾಗೂ ಭಕ್ತರು ನಿರಂತರ ಹೋರಾಟ ನಡೆಸಿದ ಪರಿಣಾಮ ಇದರ ಜೊತೆಯಲ್ಲಿ ಸಾಮೂಹಿಕ ಪ್ರಯತ್ನ, ಸಾರ್ವಜನಿಕ ಏಕತೆಯ ಬಲ ಹಾಗೂ ಚುನಾಯಿತ ಪ್ರತಿನಿಧಿಗಳ ಬದ್ಧತೆಯ ಫಲವಾಗಿ ಇಂದು ರಾಗಿ ಗುಡ್ಡದ ದೇವಸ್ಥಾನವು ತನ್ನ ಮೂಲ ಪಾವಿತ್ರ್ಯತೆ ಮತ್ತು ವೈಭವವನ್ನು ಪುನಃ ಪಡೆದುಕೊಂಡಿದೆ.

S N Channabasappa ಇಂದು ದೇವಸ್ಥಾನದ ಆವರಣದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಸಕಲ ವಿಧಾನಗಳೊಂದಿಗೆ ಶ್ರೀ ವಿಘ್ನೇಶ್ವರನ ಪ್ರತಿಷ್ಠಾಪನ ಮಹೋತ್ಸವವು ಅದ್ದೂರಿಯಾಗಿ ನೆರವೇರಿದೆ.

ಈ ವಿಜಯವು ಕೇವಲ ಒಂದು ದೇವಸ್ಥಾನದ ಪುನರ್ನಿರ್ಮಾಣವಲ್ಲ — ಇದು ಧರ್ಮದ ರಕ್ಷಣೆಗೆ, ನಂಬಿಕೆಯ ಗೌರವಕ್ಕೆ ಮತ್ತು ಹಿಂದೂ ಸಮಾಜದ ಅಸ್ತಿತ್ವದ ಉಳಿವಿಗೆ ನಡೆದ ಹೋರಾಟದ ಸಂಕೇತವಾಗಿದೆ. ಹಿಂದು ಧರ್ಮದ ಗೌರವ ಉಳಿಸುವುದು ನಮ್ಮ ಕರ್ತವ್ಯ, ಅದಕ್ಕಾಗಿ ಹೋರಾಡುವುದು ನಮ್ಮ ಧರ್ಮ. ಎಸ್ ಎನ್ ಚನ್ನಬಸಪ್ಪ ಶಾಸಕರು, ಶಿವಮೊಗ್ಗ ನಗರ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...