Karnataka Rajyotsava ೭೦ನೇ ಕನ್ನಡ ರಾಜ್ಯೋತ್ಸವವನ್ನು ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಪ್ರೌಢ ಶಾಲೆಯಲಿ,್ಲ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಈ ಸಮಾರಂಭವನ್ನು ಉದ್ಘಾಟಿಸಿದ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಕೆ ಬಿ ರವಿಶಂಕರ್ ಅವರು ಮಾತನಾಡುತ್ತಾ ರಾಜ್ಯೋತ್ಸವ ಎನ್ನುವುದು ಒಂದು ನಾಡಹಬ್ಬವಾಗಿದ್ದು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಶ್ರೀ ಆಲೂರು ವೆಂಕಟರಾಯರು, ಹುಯಲಗೊಳ ನಾರಾಯಣರು, ಬಿ ಎಮ್ ಶ್ರೀಕಂಠಯ್ಯ ಮುಂತಾದ ಮಹಾನೀಯರನ್ನು ಸ್ಮರಿಸುತ್ತಾ ಕರ್ನಾಟಕ ಸರ್ಕಾರವು ನಾಡು ನುಡಿಗಾಗಿ ಶ್ರಮಿಸಿರುವ ೭೦ ಜನ ಸಾಧಕರಿಗೆ ರಾಜ್ಯೊತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಿಂತಕ ಶ್ರೀ ಕೊಣಂದೂರು ನಿಂಗಪ್ಪ ಜಾನಪದ ಕಲಾವಿದ ಶ್ರೀ ಠಾಕಪ್ಪ ಕಣ್ಣೂರು ಮತ್ತು ಪ್ರೋ. ರಾಜೇಂದ್ರ ಚೆನ್ನಿ, ಇವರುಗಳಿಗೆ ರಾಜ್ಯೊತ್ಸವ ಪ್ರಶಸ್ತಿ ಲಭಿಸಿದ್ದು ಈ ಪ್ರಶಸ್ತಿಗಳು ಇಡೀ ಜಿಲ್ಲೆಗೆ ಸಂದ ಪ್ರಶಸ್ತಿ ಎಂದರೆ ತಪ್ಪಾಗಲಾರದು ಎಂದು ತಿಳಿಸುತ್ತಾ ಕನ್ನಡ ಕೇವಲ ಭಾಷೆಯಲ್ಲ ಭಾವನೆಗಳ ಬೆಸುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಎಸ್ ಸಿ ರಾಮಚಂದ್ರ ಇವರು ಮಾತನಾಡುತ್ತಾ ಕನ್ನಡನಾಡಿನಲ್ಲಿ ಕರ್ನಾಟಕವನ್ನು ಆಳಿದ ಅತ್ಯಂತ ಪ್ರಾಚೀನ ರಾಜ ಮನೆತನದಲ್ಲಿ ಕದಂಬ ಗಂಗರು, ರಾಷ್ಟಕೂಟರು, ಚಾಲುಕ್ಯರು, ಶಾತವಾಹನರು, ಹೊಯ್ಸಳರು ಮತ್ತು ಮೈಸೂರಿನ ವಡೆಯರ್ ಮನೆತನದವರು ಹೀಗೆ ಹಲವಾರು ರಾಜಮನೆತನದವರು ಕರ್ನಾಟಕದ ಕಲೆ ಸಾಹಿತ್ಯ ಮತ್ತು ಸಂಸೃತಿಗೆ ಅಪಾರ ಕೊಡುಗೆಯನ್ನು ನೀಡುತ್ತಾರೆ ಈ ಎಲ್ಲಾ ರಾಜ ಮನೆತನಗಳು ಕನ್ನಡ, ಕನ್ನಡದ ಭಾಷೆ, ಮತ್ತು ನಾಡಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರು, ಈ ಎಲ್ಲಾ ರಾಜಮನೆತನಗಳು ಕಲೆ ಮತ್ತು ಸಂಗೀತದ ಜೊತೆಗೆ ಸಾಹಿತ್ಯಕ್ಕೆ ಆದ್ಯತೆಯನ್ನು ಕೊಟ್ಟಿರುವ ಕಾರಣದಿಂದಲೇ ಪಂಪ ರನ್ನ ಜನ್ನ ಪೊನ್ನ ಮುಂತಾದ ಮಹಾಕವಿಗಳಿಗೆ ಆಶ್ರಯದಾತರಾಗಿದ್ದು ಕಾವ್ಯದ ರಚನೆಗೆ ಇವರುಗಳು Karnataka Rajyotsava ಪ್ರೇರಣೆಯಾಗಿದ್ದರೂ ಎಂದರೆ ಅತಿಶಯೋಕ್ತಿಯಲ್ಲ, ಪ್ರಾಚೀನ ಕನ್ನಡ ಸಾಹಿತ್ಯ , ನಡುಗನ್ನಡ ಮತ್ತು ಆದುನಿಕ ಕನ್ನಡದ ಶ್ರೀಮಂತ ಪರಂಪರೆಯ ಕಾರಣದಿಂದಾಗಿಯೇ ಕನ್ನಡಕ್ಕೆ ೮ ಜ್ಣಾನ ಪೀಠಪ್ರಶಸ್ತಿಗಳು ಅಭಿಸಿರುತ್ತವೆಂದು ತಿಳಿಸಿದರು. ರಾಜ್ಯೊತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡ ಅಭಿಮಾನ ತೋರದೆ ಪ್ರತಿ ದಿನವೂ ಕರ್ನಾಟಕದ ರಾಜ್ಯ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸುವುದನ್ನು ರೂಢಿಸಿಕೊಳ್ಳಬೇಕೆಂದು ಕರೆನೀಡಿದರು.
ಈ ಸಮಾರಂಭದಲ್ಲಿ ರೊ. ವಿಜಯಕುಮಾರ್, ರೊ. ಮಂಜುನಾಥ ಎನ್ ಬಿ ರೊ. ಮನೋಹರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಾಡುನುಡಿ ಬಗ್ಗೆ ಶ್ರಮಿಸಿದವರನ್ನು ಶ್ಲಾ಼ಘಿಸಿದರು. ಕರ‍್ಯಕ್ರಮದಲ್ಲಿ ೮ನೇ ಮತ್ತು ೯ನೇ ತರಗತಿ ಮಕ್ಕಳು ರಾಜ್ಯೋತ್ಸವಕ್ಕೆ ಸಂಬಂಧಿಸಿದ ನೃತ್ಯವನ್ನು ಪ್ರದರ್ಶಿಸಿ ರಾಜ್ಯೋತ್ಸವದ ಮೆರಗನ್ನು ಹೆಚ್ಚಿಸಿರುತ್ತಾರೆ.
ಸಮಾರಂಭದಲ್ಲಿ ರೋಟರಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಸರ‍್ಯನಾರಾಯಣ ಇವರು ಉಪಸ್ಥಿತಿರಿದ್ದು, ಪ್ರಸ್ತಾವಿಕವಾಗಿ ಶ್ರೀಮತಿ ಪ್ರತಿಮಾ ಅವರು ಮಾತನಾಡಿದ್ದು , ಕಾರ್ಯಕ್ರಮವನ್ನು ಶ್ರೀಮತಿ ಕಾವ್ಯರವರು ನಿರೂಪಿಸಿದ್ದು, ಶ್ರೀಮತಿ ಸುಜಾತ ರವರ ವಂದನಾರ‍್ಪಣೆಯೊಂದಿಗೆ ಕಾರ‍್ಯಕ್ರಮವನ್ನು ಮುಕ್ತಾಯಗೊಳಿಸಿದರು
