Shivamogga Karnataka Sanga ದಿನಾಂಕ 25ನೇ ಅಕ್ಟೋಬರ್ 2025ರ ಶನಿವಾರ, ಸಂಜೆ 5:30ಕ್ಕೆ ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ಯಕ್ಷ ಕೌಮುದೀ ಟ್ರಸ್ಟ್ (ರಿ) ಶ್ರೀರಂಗಪಟ್ಟಣ ಇವರಿಂದ ತಾಳ ಮದ್ದಳೆ ಕಾರ್ಯಕ್ರಮ ಮತ್ತು ಶ್ರೀ ಗ.ನಾ ಭಟ್ಟ ಅವರ ‘ಮಾತು ಮದ್ದಳೆ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ ಹಾಗೂ ಪ್ರೊ. ಗಣರಾಜ ಕುಂಬ್ಳೆ ಭಾಗವಹಿಸಲಿದ್ದಾರೆ.
ದಿನಾಂಕ 26ನೇ ಅಕ್ಟೋಬರ್ 2025ರ ಭಾನುವಾರ ಸಂಜೆ 5:30ಕ್ಕೆ ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಇವರ ಅಧ್ಯಕ್ಷತೆಯಲ್ಲಿ ‘ವಿದ್ಯಾಲಂಕಾರ’ ಪ್ರೊ. ಎಸ್.ಕೆ. ರಾಮಚಂದ್ರರಾಯರ ಜನ್ಮಶತಾಬ್ದಿ-ಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
Shivamogga Karnataka Sanga ಮುಖ್ಯ ಭಾಷಣಕಾರರಾಗಿ ಬೆಂಗಳೂರಿನ ಶ್ರೀ ಎಸ್. ಸೂರ್ಯಪ್ರಕಾಶ ಪಂಡಿತ್, ಲೇಖಕರು-ಪತ್ರಕರ್ತರು, ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಬಹುಶ್ರುತ ವಿದ್ವಾಂಸರು ಇವರು ಮಾತನಾಡಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
