ದೀಪಾವಳಿ ಸಂಭ್ರಮದಲ್ಲಿದ್ದ ವಡ್ಡಿನಕೊಪ್ಪದ ಕರಿಯಪ್ಪನವರ ಮನೆಯವರಿಗೆ ಶಾಕ್.
ಮನೆ ಬೀಗ ಒಡೆದು ಹಣ, ಬಂಗಾರ ಕಳ್ಳರು
ಎಗರಿಸಿದ್ದಾರೆ. ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.
ಕರಿಯಪ್ಪ, ಯಶೋದಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.
ಮನೆ ಬಾಗಿಲು ಬೀಗ ಒಡೆದು ಕಳ್ಳರ ಕೈಚಳಕ ತೋರಿದ್ದಾರೆ.
ಮನೆಯಲ್ಲಿದ್ದ 80,000 ನಗದು 1 ವರೆ ತೊಲ ಬಂಗಾರ ಕಳುವುಮಾಡಿದ್ದಾರೆ.
ದೀಪಾವಳಿ ಹಬ್ಬಕ್ಕೆ ಅವರು ಸಂಬಂಧಿಕರ ಮನೆಗೆ ತೆರಳಿದ್ದ ಮನೆಯವರು
ನಿನ್ನೆ ತಡ ರಾತ್ರಿ ನಡೆದಿರುವ ಘಟನೆ, ಬೆಳಗಿನ ಜಾವ ಬೆಳಕಿಗೆ
ಬೀಗ ಒಡೆದಿರುವುದನ್ನು ಕಂಡು ಆಸುಪಾಸಿನ ಜನ ಮಾಲೀಕರ ಗಮನಕ್ಕೆ ತಂದಿದ್ದಾರೆ.
ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
