Dr. Besagarahalli Ramanna Foundation ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಜೊತೆಯಲ್ಲಿ ಆಯೋಜಿಸಿರುವ ‘ಸಾಹಿತ್ಯ ಕಮ್ಮಟ – ೨೦೨೫’ ಕ್ಕೆ ಅರ್ಜಿ ಸಲ್ಲಿಸಲು ಇಂದು ಕಡೆಯ ದಿನ. ಭಾಗವಹಿಸಲು ಇಚ್ಚಿಸುವ ಎಲ್ಲರಿಗೂ ಅರ್ಜಿ ಸಲ್ಲಿಸುವುದು ಕಡ್ಡಾಯ. ಆಯ್ಕೆಗೊಂಡವರಿಗೆ ಇಮೇಲ್ ಮೂಲಕ ತಿಳಿಸಲಾಗುವುದು.
ಈ ಬಾರಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತಾಗಿ ಚರ್ಚೆ, ಸಂವಾದಗಳು ನಡೆಯಲಿವೆ. ಹಿರಿಯರಾದ ಡಾ. ಕೆ.ವಿ. ನಾರಾಯಣ ಅವರು ಕಮ್ಮಟ ನಿರ್ದೇಶಕರಾಗಿದ್ದಾರೆ. ಜೊತೆಯಲ್ಲಿ ಓ ಎಲ್ ನಾಗಭೂಷಣಸ್ವಾಮಿ, ಕೆ.ವೈ. ನಾರಾಯಣಸ್ವಾಮಿ, ಕೆ. ಪುಟ್ಟಸ್ವಾಮಿ, ಮೇಟಿ ಮಲ್ಲಿಕಾರ್ಜುನ, ವಿಕ್ರಂ ವಿಸಾಜಿ, ಬಿ ಎಲ್ ರಾಜು, ಆರ್ ಶಿವಪ್ಪ, ಬಿ ಎಂ ಪುಟ್ಟಯ್ಯ, ಸಬಿತಾ ಬನ್ನಾಡಿ, ಗೀತಾ ವಸಂತ ಮುಂತಾದ ಬರಹಗಾರರು ಸಂವಾದಗಳನ್ನು ಮುನ್ನಡೆಸುವರು.
- ಕುಪ್ಪಳಿಯಲ್ಲಿ ನವಂಬರ್ 14, 15, 16 ಮೂರು ದಿನಗಳ ಕಮ್ಮಟ ನಡೆಯಲಿದ್ದು. ಮೂರೂ ದಿನಗಳ ಕಾಲ ಭಾಗವಹಿಸುವಿಕೆ ಕಡ್ಡಾಯ.
- ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉಚಿತವಾದ ಊಟ ಮತ್ತು ಸರಳವಾದ ವಸತಿ ವ್ಯವಸ್ಥೆ ಇರುತ್ತದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
- ಅರ್ಜಿಸಲ್ಲಿಸದೇ, ಆಯ್ಕೆಗೊಳ್ಳದೇ ನೇರ ಪ್ರವೇಶವಿಲ್ಲ.
- 60 ಮಂದಿಗೆ ಮಾತ್ರ ಅವಕಾಶ. ಅದರಲ್ಲಿ 30 ಸೀಟುಗಳು ಹೆಣ್ಣುಮಕ್ಕಳಿಗೆ ಮೀಸಲು.
ಆಸಕ್ತರು ನಿಮ್ಮ ಹೆಸರು, ವಯಸ್ಸು, ಉದ್ಯೋಗ, ವಿಳಾಸ ಮತ್ತು ಆಸಕ್ತಿಗಳ ವಿವರಗಳುಳ್ಳ ಅರ್ಜಿಯನ್ನು email ಮಾಡಬಹುದು. Email : drbrtrust@gmail.com
