Tuesday, November 11, 2025
Tuesday, November 11, 2025

Karnataka Working Journalists Association ನ. 09 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ಚುನಾವಣೆ

Date:

Karnataka Working Journalists Association ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರತಿಷ್ಠಿತ ಪ್ರಾತಿನಿಧಿಕ ಸಂಘಟನೆಯಾದ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೆ ಅವಧಿಯ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ಘೋಷಣೆ ಆಗಿದೆ.

ಸುದ್ದಿಗೋಷ್ಟಿಯಲ್ಲಿ ಚುನಾವಣೆ ಕುರಿತು ಮಾಹಿತಿ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಖ್ಯಚುನಾವಣಾಧಿಕಾರಿ ಎನ್ .ರವಿಕುಮಾರ್ ( ಟೆಲೆಕ್ಸ್) ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 9000 ಸಾವಿರಕ್ಕೂ ಹೆಚ್ಚು ಸಕ್ರೀಯ ಕಾರ್ಯನಿರತ ಪತ್ರಕರ್ತ ಸದಸ್ಯರುಗಳನ್ನೊಳಗೊಂಡ ಬೃಹತ್ ಸಂಘಟನೆಯಾಗಿದ್ದು, ಕಾರ್ಮಿಕ ಇಲಾಖೆಯ ಉಸ್ತುವಾರಿಯಲ್ಲಿ ಸಂಘದ ರಾಜ್ಯ ಘಟಕವೂ ಸೇರಿದಂತೆ ಎಲ್ಲಾ ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಅಕ್ಟೋಬರ್ 13 ರಂದು ಸೋಮವಾರ ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಅಂದೇ ವೇಳಾಪಟ್ಟಿ ಹಾಗೂ ಮತದಾರರ ಕರಡು ಪ್ರತಿಯನ್ನು ಪ್ರಕಟಿಸಲಾಗುವುದು. ಅಕ್ಟೋಬರ್ 19ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ಅ.27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅ.28 ನಾಮಪತ್ರಗಳ ಪರಿಶೀಲನೆ, ಅ. 30 ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿರುತ್ತದೆ.

Karnataka Working Journalists Association ನವಂಬರ್ 09 ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೇಂದ್ರ )ಕಚೇರಿ ಕಂದಾಯ ಭವನ ೩ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು ಮತ್ತು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 9 ರಿಂದ ಮದ್ಯಾಹ್ನ 3ಗಂಟೆ ವರೆಗೆ ಮತದಾನ ನಡೆಯಲಿದೆ. ಮತದಾನ ಬಳಿಕ ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಎನ್.ರವಿಕುಮಾರ್ (ಟೆಲೆಕ್ಸ್) ವಿವರಿಸಿದರು. ಮಾದರಿ ನೀತಿ ಸಂಹಿತೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಘಟಕ ಮತ್ತು ಜಿಲ್ಲಾ ಘಟಕಗಳಿಗೆ ಚುನಾವಣೆ ಹಿನ್ನಲೆಯಲ್ಲಿ ಅ. 10 ರಿಂದ ನ.09 ರವರೆಗೆ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಘಟಕಗಳು ಯಾವುದೇ ಅಧಿಕೃತ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಜಾತಿ, ಧರ್ಮ, ಲಿಂಗ ಆಧಾರಿತವಾಗಿ ಮತಯಾಚಿಸುವಂತಿಲ್ಲ. ಅಭ್ಯರ್ಥಿಗಳ ವಿರುದ್ದ ವ್ಯಕ್ತಿಗತ ಆರೋಪ. ಅಪಪ್ರಚಾರಗಳನ್ನು ನಡೆಸುವಂತಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sharavati Pumped Storage Project ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರದ್ದಾಗಿಲ್ಲ- ಅಖಿಲೇಶ್ ಚಿಪ್ಪಳಿ

Sharavati Pumped Storage Project ಅಕ್ಟೋಬರ್ 27 2025ರಂದು ದೆಹಲಿಯಲ್ಲಿ ನಡೆದ...

ಶಿವಮೊಗ್ಗದಿಂದ ಹೊಸಪೇಟೆಗೆ ತೆರಳುವ ವಾಹನಗಳಿಗೆ ತಾತ್ಕಾಲಿಕ‌ ಮಾರ್ಗ ಬದಲಾವಣೆ ಆದೇಶ

ರಾಜ್ಯ ಹೆದ್ದಾರಿ ರಸ್ತೆಯ ಸರಪಳಿ 191,000 ರಿಂದ 191,230 ಫ್ಲೈ ಓವರ್...