ಲೇ: ಮುರಳೀಧರ ನಾಡಿಗೇರ್.
ವಿಜಯನಗರ.
Klive Special Article ಸರ್ಕಾರದ ನಿಧಿ ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದರೆ — ಯುವಕರಿಗೂ ಉದ್ಯೋಗ ಅನುಭವ, ಸರ್ಕಾರಕ್ಕೂ ಉತ್ತಮ ಹೆಸರು ಸಿಗುತ್ತಿತ್ತು
ಕರ್ನಾಟಕ ಸರ್ಕಾರ ಜನಗಣತಿ ಮತ್ತು ಜಾತಿಗಣತಿ ಕಾರ್ಯಕ್ಕಾಗಿ ಸರ್ಕಾರಿ ನೌಕರರನ್ನು ನಿಯೋಜಿಸುವ ಬದಲಿಗೆ, ಕಾಂಗ್ರೆಸ್ ಸರ್ಕಾರದ “ಯುವನಿಧಿ” ಯೋಜನೆಯಡಿ ತಿಂಗಳಿಗೆ ರೂ 3000 ಪಡೆಯುತ್ತಿರುವ ನಿರುದ್ಯೋಗಿ ಯುವಕರು ಮತ್ತು ಯುವತಿಯರನ್ನು ಈ ಕಾರ್ಯದಲ್ಲಿ ತೊಡಗಿಸಬಹುದಿತ್ತು ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ಮತ್ತು ಸರ್ಕಾರಿ ನೌಕರರಲ್ಕಿಯೇ ವ್ಯಾಪಕವಾಗಿ ವ್ಯಕ್ತವಾಗಿದೆ.
ಸರ್ಕಾರ ನೀಡುತ್ತಿರುವ ಯುವನಿಧಿ ಯೋಜನೆಯಡಿ ಲಕ್ಷಾಂತರ ಯುವಕರು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಅಗತ್ಯ ತರಬೇತಿ ನೀಡಿ ಜನಗಣತಿ ಕಾರ್ಯದಲ್ಲಿ ಬಳಸಿದ್ದರೆ, ಯುವಕರಿಗೂ ಉದ್ಯೋಗದ ಅನುಭವ ದೊರಕುತ್ತಿತ್ತು, ಕೈಗೆ ಆದಾಯ ಸಿಗುತ್ತಿತ್ತು ಮತ್ತು ಸರ್ಕಾರಕ್ಕೂ ಜನಮನ್ನಣೆ ದೊರೆಯುತ್ತಿತ್ತು ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಅವರು ಹೇಳುವಂತೆ, ಸರ್ಕಾರ ನೀಡುತ್ತಿರುವ ನಿಧಿಯನ್ನು ನೇರವಾಗಿ ಸಹಾಯಧನವಾಗಿ ನೀಡುವ ಬದಲಿಗೆ, ಈ ರೀತಿಯ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸುವುದು ಉತ್ತಮ ಪ್ರಯೋಜನಕಾರಿಯಾಗುತ್ತಿತ್ತು. ಇದು ಯುವಜನರಲ್ಲಿ ಕೌಶಲ್ಯಾಭಿವೃದ್ಧಿ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿತೆ ಬೆಳೆಯಲು ಸಹಾಯಕವಾಗುತ್ತಿತ್ತು.
Klive Special Article ಸರ್ಕಾರ ಈಗಾಗಲೇ ಜನಗಣತಿ ಕಾರ್ಯ ಪ್ರಾರಂಭವಾಗಿದೆ ತಕ್ಷಣವೇ ಸರ್ಕಾರಿ ನೌಕರರನ್ನು ತಡೆಗಟ್ಟಿ , ಮುಂದಿನ ಹಂತಗಳಲ್ಲಿ ಯುವನಿಧಿ ಯೋಜನೆ ಫಲಾನುಭವಿಗಳಿಗೆ ಇಂತಹ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಬೇಕು, ಈಗ ನೇಮಕ ಮಾಡಿರುವ ಸರ್ಕಾರಿ ಅಧಿಕಾರಿಗಳು ಮತ್ತು ಟೀಚರ್ಸ್ ಗಳಿಂದ ದಿನಂಪ್ರತಿ ಮಾಡುವ ಕೆಲಸಕ್ಕೆ ಅಡ್ಡಿಯಾಗಿರುತ್ತದೆ ಅಲ್ಲಾದೆ ಅರಿಯಾದ ಅಭಿಪ್ರಾಯಗಳು ಮತ್ತು ವಿಷಯಗಳ ಹಂಚಿಕೆ ಸರಿಯಾಗಿ ಆಗದೆ ಕಾಲಹರಣವಾಗುತ್ತಿದೆ. ಕಾರಣ ಸರ್ಕಾರ ಇದರಕಡೆ ಹೆಚ್ಚಿಗೆ ಗಮನಹರಿಸುವುದು ಒಳ್ಳೆಯದು.
