Monday, February 2, 2026
Monday, February 2, 2026

Klive Special Article ಮಾಜಿ ಡಿಸಿಎಂ ಈಶ್ವರಪ್ಪ ಅವರ ನೇತೃತ್ವದಲ್ಲಿ “ಗೋವರ್ಧನ ಟ್ರಸ್ಟ್” ಗೋ ರಕ್ಷಣೆಯ ಧ್ಯೇಯ

Date:

ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.ಶಿವಮೊಗ್ಗ.

ಗಾವೋ ವಿಶ್ವಸ್ಯ ಮಾತರಃ ಪಾವನೀ ಪಾಪನಾಶನೀ |
ಅನಂತಾ ಹಿತದಾತಾರಃ ಸರ್ವಮಂಗಲಕಾರಿಣೀ ll
ಗೋಮಾತಾ ಧನದಾತ್ರೀ ಚ ಪೋಷಿಣೀ ಪುಷ್ಟಿಕಾರಿಣೀ |
ಗೋಮಯಂ ಗೋಮಧುಃ ವ್ಯಾಧಿ ನಾಶಿನೀ ಶುಭದಾಯಿನೀ ll
ಗಾವೋ ಮೇತ್ರಪ್ರದಾ ನಿತ್ಯಂ ಗಾವೋ ದೈವಸ್ವರೂಪಿಣೀ l
ಗೋಸೇವಾ ಗೋ ಪ್ರದಾನಂ ಚ ಪುನಾತಿ ಪರಮಂ
ಪಥಮ್ ll

Klive Special Article ಈ ಮೇಲಿನ ಎಲ್ಲ ಶ್ಲೋಕಗಳೂ ಸಹ ಗೋವಿನ ಮಹತ್ವವನ್ನು ಹೇಳುವಂತವುಗಳು. ಇದರಲ್ಲಿಯೂ ಬಹು ಮುಖ್ಯವಾಗಿ ಮಹಾಭಾರತದ ಗಾವೋ ವಿಶ್ವಸ್ಯ ಮಾತರಃ ಪಾವನೀ ಪಾಪನಾಶನೀ ಸಾಲುಗಳಂತೂ ಗೋವು ನಮಗೆಲ್ಲರಿಗೂ ಮಾತೃ ಸ್ವರೂಪಿಣಿ ಎಂದು ತಿಳಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೊಂದು ವಿಶೇಷವಾದ ಸ್ಥಾನವನ್ನೇ ನೀಡಿ ಗೌರವಿಸಿರುವುದು ಕಾಣುತ್ತೇವೆ. ಆ ಕಾರಣಕ್ಕಾಗಿಯೇ ಗೋವಿನಲ್ಲಿ ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಎಂಬ ಕಾರಣಕ್ಕಾಗಿಯೇ ಅತ್ಯಂತ ಪೂಜನೀಯ ಎಂದು ಹೇಳಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ಮಾಡುವ ಪೂಜೆಯು ನಮ್ಮೆಲ್ಲ ಪಾಪಗಳನ್ನು ತೊಳೆಯಲು ಸಹಕಾರಿ ಎಂದು ಹೇಳುತ್ತಲೇ ಅದನ್ನು ಧನದಾತ್ರೀ, ಪೋಷಿಣೀ, ಪುಷ್ಟಿಕಾರಿಣೀ ಗೋಮಯ, ಗೋಮಧುಃ, ವ್ಯಾಧಿ ನಾಶಿನೀ ಎಂದು ಬಣ್ಣಿಸಿದ್ದಾರೆ. ಅಂದರೆ, ಗವ್ಯೋತ್ಪನ್ನಗಳಾದ ಹಾಲು, ತುಪ್ಪ, ಮೊಸರು, ಬೆಣ್ಣೆಗಳು ಪೋಷಕ ಆಹಾರವಾಗಿದೆ. ಗೋಮಯದಿಂದ ಜೈವಿಕ ಕೃಷಿಗೆ ಅದು ಸಹಾಯವಾಗುತ್ತದೆ. ಮತ್ತು ರೈತನ ಜೀವನದ ಆಧಾರವೇ ಆಗಿದೆ ಎಂದೆನ್ನುತ್ತಾರೆ. ಆರ್ಥಿಕ ಸಬಲತೆಯೇ ಅಲ್ಲದೆ ಅದರಿಂದ ನಮಗೆ ಬರುವಂತಹ ಎಲ್ಲಾ ವ್ಯಾಧಿಗಳನ್ನು ನಾಶಪಡಿಸುವ ಗುಣ ಗೋಮೂತ್ರ ಗೋಮಯಕ್ಕಿದೆ ಎನ್ನುವುದನ್ನು ಬಹು ಹಿಂದೆಯೇ ನಮ್ಮ ಪೂರ್ವಜರು ಹೇಳಿದ್ದಾರೆ.

ಗಾವೋ ಮೇತ್ರಪ್ರದಾ….ಎನ್ನುವಲ್ಲಿ ಗೋವುಗಳನ್ನು ಕುಟುಂಬದ ಸದಸ್ಯರಲ್ಲಿ ಒಬ್ಬರಂತೆ ಕಂಡು ಅವುಗಳಿಂದಲೇ ಗ್ರಾಮೀಣ ಜೀವನದಲ್ಲಿ ಐಕ್ಯತೆ ಸಹಬಾಳ್ವೆ ವೃದ್ಧಿಯಾಗುತ್ತಿತ್ತು. ಅಷ್ಟೇ ಅಲ್ಲದೆ ಗೋ ಸೇವೆಯು ಹಾಗೂ ಗೋದಾನವು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯಬಲ್ಲ ಸಾಧನವಾಗಬಲ್ಲದು ಎಂದು ನಮ್ಮ ವೇದ ಮಂತ್ರಗಳು ಹೇಳಿದ್ದರಿಂದಲೇ ಮನೆಯಲ್ಲಿ ಯಾರಾದರೂ ಮೃತರಾದಾಗ ಅವರ ಹೆಸರಿನಲ್ಲಿ ಗೋದಾನ ಮಾಡಿದರೆ ಆ ಜೀವಕ್ಕೆ ಮುಕ್ತಿ ಎಂದು ಇಂದಿಗೂ ನಂಬಿಕೆ ಇದೆ.

ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲೂ ಗೋವನ್ನು ದೇವತಾ ಸ್ವರೂಪವಾಗಿ ಹೇಳಿ ಗೋವಿನಿಂದಲೇ ನಮಗೆ ಸಿಗುವ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಇವುಗಳನ್ನು ಪಂಚಗವ್ಯಗಳಾಗಿ ಹೇಳಿ, ಅದನ್ನು ಪೂಜಾ ವಿಧಿ ವಿಧಾನಗಳಲ್ಲಿ ಪ್ರಮುಖ ಸ್ಥಾನವನ್ನ ನೀಡಿದ್ದೇವೆ. ಗೋ ಸೇವೆಯನ್ನು ಮಾಡುವುದು ದೇವಸೇವೆಯಷ್ಟೇ ಪುಣ್ಯಕರ ಎಂದೂ ಹೇಳಲಾಗಿದೆ.

ಇಷ್ಟೆಲ್ಲ ಮಹತ್ವವನ್ನು ಹೊಂದಿರುವಂತಹ ಗೋವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣನು ಗೋವುಗಳನ್ನು ರಕ್ಷಿಸಿ ಗೋಪಾಲನಾದನು ಆತನು ಗೋ ರಕ್ಷಣೆ, ಧರ್ಮ, ಕೃಷಿ ಹಾಗೂ ಜೀವನಕ್ಕೆ ಆಧಾರವೆಂದು ಗೋವುಗಳನ್ನು ಸಾರಿದನು. ಗೋಮಾತೆ ಎಂದು ಪೂಜಿಸುವ ನಮ್ಮ ಸಂಸ್ಕೃತಿಯಲ್ಲಿ ಭಾರತೀಯ ನಾರಿಯರ ನಿತ್ಯ ಕರ್ಮಗಳಲ್ಲಿ ಗೋಪೂಜೆಯೂ ಒಂದು ಸಂಪ್ರದಾಯವೇ ಆಗಿ ಹೋಗಿದೆ. ಗೋವಿಗೆ ಅಕ್ಕಿ ಬೆಲ್ಲ ಅಥವಾ ಬಾಳೆಹಣ್ಣಿನೊಂದಿಗೆ ಬೆಲ್ಲ ನೀಡಿ ನಿತ್ಯವೂ ಸ್ತ್ರೀ ಗೋಪೂಜೆ ಮಾಡಬೇಕೆಂದು ಹೇಳಿದೆ ಅಷ್ಟೇ ಅಲ್ಲದೆ ದೀಪಾವಳಿಯ ಸಂದರ್ಭದಲ್ಲಿ ವಿಶೇಷವಾಗಿ ಅದರ ಹೆಸರಿನಲ್ಲಿ ಹಬ್ಬವೇ ಆಚರಿಸುವುದನ್ನು ಕಂಡಿದ್ದೇವೆ. ಸಾಮಾಜಿಕವಾದ ದೃಷ್ಟಿಯಲ್ಲಿ ಹಸುವಿನ ಹಾಲು, ತುಪ್ಪ, ಮೊಸರು ಬೆಣ್ಣೆಗಳಿಂದ ಮಾನವನ ಪೋಷಣೆಯಾಗುತ್ತದೆ ಹೀಗಾಗಿ ಗೋಪಾಲನೆ ಸಮಾಜದ ಪೋಷಣೆಗೂ ಕಾರಣವಾಗಿದೆ. ಒಟ್ಟಿನಲ್ಲಿ ಗೋಪಾಲನೆ ಕೇವಲ ಕೃಷಿ ಆರ್ಥಿಕ, ಧಾರ್ಮಿಕ ಇಷ್ಟೇ ಇಲ್ಲದೆ ಇದೊಂದು ಆಧ್ಯಾತ್ಮಿಕ ಸಾಂಸ್ಕೃತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಮಹತ್ವ ಹೊಂದಿದ್ದು ಗೋವುಗಳನ್ನು ಕಾಪಾಡುವುದೆಂದರೆ ನಮ್ಮ ಭವಿಷ್ಯವನ್ನು ನಾವು ಕಾಪಾಡುವುದೇ ಆಗಿದೆ.

ಈ ನಿಟ್ಟಿನಲ್ಲಿ ಮಾನ್ಯ ಕೆ.ಎಸ್. ಈಶ್ವರಪ್ಪನವರು ಹಾಗೂ ಅವರ ಪುತ್ರ ಕೆ. ಈ. ಕಾಂತೇಶ್ ರವರು ಇಬ್ಬರೂ ಶ್ಲಾಘನೀಯ ಕಾರ್ಯ ಮಾಡ ಹೊರಟಿದ್ದಾರೆ. ಅದೇನೆಂದರೆ ಗೋ ಸೇವೆ, ಗೋರಕ್ಷಣೆ, ಗೊ ವರ್ಧನೆ ಎನ್ನುವ ಸೂತ್ರಗಳನ್ನು ಒಳಗೊಂಡ ಗೋವರ್ಧನ ಟ್ರಸ್ಟ್ ಎನ್ನುವುದನ್ನು ಸ್ಥಾಪಿಸಿ ಅದರ ಮೂಲಕ ಪ್ರತಿ ಹಿಂದು ಬಾಂಧವರ ಮನೆಯಿಂದ ಈ ಟ್ರಸ್ಟಿಗೆ ಹೆಸರು ನೊಂದಾಯಿಸಿ ತಿಂಗಳಿಗೆ 100 ರೂ ದೇಣಿಗೆ ಪಡೆದು ಅದರಿಂದ ಹಿಂದೂ ಸಮಾಜಕ್ಕೆ ಗೋ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗೆ ಹಣ ದೇಣಿಗೆ ಕೊಟ್ಟ ಮನೆಯು ‘ಗೋ ಸಂರಕ್ಷಣಾ ಗೃಹ’ಎಂದು ಕರೆಯಲಾಗುತ್ತದೆ.

Klive Special Article ಈಶ್ವರಪ್ಪನವರು ತಾವು ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದಾಗಲೇ ಗಾಜನೂರಿನ ಸಮೀಪ ಏಳು ಎಕರೆ ಜಮೀನನ್ನು ಗೋಪಾಲನಾ ಕಾರ್ಯಗಳಿಗಾಗಿ ಮಂಜೂರು ಮಾಡಿಸಿದ್ದು ಈಗ ಅಲ್ಲಿ ನಗರದ ಸುತ್ತಮುತ್ತಲಿನ ಗೋ ಸಂರಕ್ಷಣಾ ಕೇಂದ್ರದವರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರದ ಕಾರ್ಯ ಮಾಡುವಲ್ಲಿ ಸಜ್ಜಾಗಿದ್ದಾರೆ. ಮುಖ್ಯವಾಗಿ ಗೋವುಗಳಿಗೆ ಬೇಕಾದ ಮೇವು ಅದಕ್ಕಾಗಿ ಹುಲ್ಲಿನ ಬೀಜಗಳನ್ನು ನೆಟ್ಟು ಮೇವಿಗಾಗಿ ವ್ಯವಸ್ಥೆ ಮಾಡುವ ಕಾರ್ಯ ಭರದಿಂದ ಸಾಗಿದೆ. ಮೊನ್ನೆ ಮೊನ್ನಯಷ್ಟೇ ಗೋವಿಗಾಗಿ ಅವುಗಳ ಆರೈಕೆಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಂಬುಲೆನ್ಸ್ ಸೇವೆ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವ ಶುಶ್ರೂಷ ಕೇಂದ್ರ ಹಾಗೂ ಸಿಬ್ಬಂದಿಗಳನ್ನು ಒದಗಿಸಿಕೊಡುವ ಯೋಜನೆಯನ್ನು ಹೊಂದಿ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಟ್ರಸ್ಟಿಗೆ ಒಪ್ಪಿಸಲಾಗಿದೆ. ನಗರದ ಬೀಡಾಡಿ ದನಗಳ ರಕ್ಷಣೆಯ ಜೊತೆಗೆ ಅವುಗಳಿಗೆ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸುವ ಯೋಜನೆಯನ್ನು ಈ ಟ್ರಸ್ಟ್ ಹೊಂದಿದೆ. ಸುಮಾರು 5000 ಜನರನ್ನು ಬರುವ ಅಕ್ಟೋಬರ್ 8ರ ಒಳಗೆ ಗೋ ಸಂರಕ್ಷಣಾ ಗೃಹಕ್ಕೆ ನೋಂದಣಿ ಮಾಡಿಕೊಳ್ಳಬೇಕೆಂದು ಗುರಿ ಹೊಂದಿರುವ ಈ ಟ್ರಸ್ಟ್ ಈಗಾಗಲೇ 3000ಕ್ಕೂ ಅಧಿಕ ಜನರನ್ನ ತಲುಪಿದೆ.

ಈ ಟ್ರಸ್ಟಿಗೆ ಬೆಂಬಲವಾಗಿ ಸಮಾಜದ ಅನೇಕ ಗಣ್ಯರು ಸಾತ್ ನೀಡಿರುವುದು ಸಹ ಈಶ್ವರಪ್ಪನವರ ಈ ಕಾರ್ಯಕ್ಕೆ ನೂರಾನೆಯ ಬಲಬಂದಂತಿದೆ. ಸದಾ ನಮ್ಮ ಹಿಂದೂ ಸಂಸ್ಕೃತಿಯ ಔನ್ನತ್ಯದ ಚಿಂತನೆಗಾಗಿ ಕಾರ್ಯ ಮಾಡುವ ಮಾನ್ಯ ಈಶ್ವರಪ್ಪನವರು ಗೋ ಸಂತತಿಯ ರಕ್ಷಣೆ ಮಾಡುವ ಆಧುನಿಕ ಗೋಪಾಲಕರಾಗಿದ್ದಾರೆ. ನಾವು ಸಹ ಈ ಯಜ್ಞದಲ್ಲಿ ಪಾಲ್ಗೊಳ್ಳೋಣ.

ನಮೋ ಗೋಭ್ಯೋ ನಮೋ ನಿತ್ಯಂ ಸುರಭ್ಯೇ ಚ ನಮೋ ನಮಃ l
ಗೋವಿನಾ ನಂದಿತಂ ವಿಶ್ವಂ ಭವತು ಕ್ಷೇಮಮಂಗಲಮ್ ll
ನಾವು ಮಾಡುವ ಈ ಕಾರ್ಯದಿಂದ ಗೋಮಾತೆ ತೃಪ್ತವಾಗಿ ಸಂತೋಷಗೊಳ್ಳುತ್ತಾಳೆ. ಅದರಿಂದ ಜಗತ್ತು ಕ್ಷೇಮ ಹಾಗೂ ಮಂಗಳದಿಂದ ಕೂಡಿರುತ್ತದೆ. ಹಾಗಾಗಿ ಮನೆಯಲ್ಲಿ ಗೋವಿಲ್ಲವೆಂಬ ನೋವು ಬಿಟ್ಟು ಗೋವರ್ಧನ ಟ್ರಸ್ಟ್ ನ ಜೊತೆಗೂಡಿ.

ಈಗಾಗಲೇ ಗೋವಿನ ಸಂರಕ್ಷಣೆಯನ್ನು ನಾಡಿನ ಅನೇಕ ಮಠಾಧೀಶರು, ಸಂಘ-ಸಂಸ್ಥೆಗಳವರು ಕಾರ್ಯ ನಿರ್ವಹಿಸುತ್ತಲೇ ಬಂದಿದ್ದಾರೆ. ಅದರ ಸಾಲಿನಲ್ಲಿ ನಿಲ್ಲುವ ಮತ್ತೊಂದು ಟ್ರಸ್ಟ್ ಎಂದರೆ ಗೋವರ್ಧನ ಸೇವಾ ಟ್ರಸ್ಟ್ ನಗರದಲ್ಲಿರುವ ಗೋಶಾಲೆಗಳಾದ ಸುರಭಿ, ಜ್ಞಾನೇಶ್ವರಿಯೇ ಮೊದಲಾದ ಗೋ ಶಾಲೆಗಳಲ್ಲಿ ಗೋವಿನ ಆರೈಕೆಗೆ ಅಗತ್ಯವಾದ ಮೇವು ಆರೋಗ್ಯವೇ ಮೊದಲಾಗಿ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡುವ ಮೂಲಕ ಗೋ ರಕ್ಷಣೆಗೆ ಟೊಂಕ ಕಟ್ಟಿ ನಿಂತಾಗಿದೆ. ಗೋ ಸಂತತಿಯ ರಕ್ಷಣೆ ನಮ್ಮ ಜೀವ ನಾಡಿಯ ರಕ್ಷಣೆ ಎಂದರಿತು ನಾವೂ ಸಹ ಭಾಗಿಯಾಗೋಣ.

ವಿಶೇಷವಾಗಿ ಈ ಗೋವರ್ಧನ ಟ್ರಸ್ಟ್ ನ ಉದ್ಘಾಟನೆಯನ್ನು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ಇದೇ ಅಕ್ಟೊಬರ್ 8 ರಂದು ಅಲ್ಲಮಪ್ರಭು ಮೈದಾನದಲ್ಲಿ ನಡೆಯುವ çನೆರವೇರಿಸಲಿದ್ದಾರೆ. ಈ ಒಂದು ಪುಣ್ಯ ಕಾರ್ಯಕ್ರಮಕ್ಕೆ ನಗರದ ಸಮಸ್ತ ಹಿಂದೂ ಬಾಂಧವರು ಅತೀ ಹೆಚ್ಚಿನ ಸಮಖ್ಯೆಯಲ್ಲಿ ಭಾಗಿಯಾಗಬೇಕೆಂಬ ಆಶಯ ಆಯೋಜಕರದು…

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...