ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
Klive Special Article ನವರಾತ್ರಿ(ಎಂಟನೆಯದಿನ)
ಶ್ರೀಮಹಾಗೌರಿ ಮಾತೆಯ ಆರಾಧನೆಯ ದಿನ….
ಇಂದು ಸಪ್ತಮಿಯಂದು ಆಹ್ವಾನಿಸಿದ ಶ್ರೀಸರಸ್ವತಿದೇವಿಯನ್ನು ಪೂಜಿಸುವ ದಿನವೂ ಆಗಿದೆ.
“”*
“ಶ್ವೇತೆ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ/
ಮಹಾಗೌರೀ ಶುಭಂ ದದ್ಯಾತ್ ಮಹಾದೇವ
ಪ್ರಮೋದದಾ//
ಇಂದು ನವರಾತ್ರಿಯ ಎಂಟನೆಯ ದಿವಸ.
ಇಂದು ದೇವಿಯ ಎಂಟನೆಯ ರೂಪವಾದ ಮಹಾ
ಗೌರಿಯ ಆರಾಧನೆಯ ದಿನ.
ಸರ್ವ ಸನ್ಮಂಗಳ ಕಾರಿಣಿಯಾದ ದೇವಿಯ ರೂಪ
ಮಹಾಗೌರಿಯ ಅವತಾರ ರೂಪ.
ಶ್ವೇತ ವರ್ಣದಿಂದ ಕಂಗೊಳಿಸುವ ಮಾತೆಯ ದೇಹವೆಲ್ಲಾಪ್ರಭೆಯಿಂದಹೊಳೆಯುವುದು.ನಂದಿವಾಹನರೂಢಳಾದ ದೇವಿಯು ಶಾಂತಿ ಮತ್ತು ಸಂತೋಷದ ಪ್ರತೀಕ.
ನಾಲ್ಕು ಭುಜಗಳನ್ನು ಹೊಂದಿರುವ ಮಾತೆ,ಅಭಯ ಹಸ್ತದಿಂದ ಭಕ್ತರನ್ನು ಹರಸುತ್ತಿದ್ದಾಳೆ.ಒಂದು ಕೈಯಲ್ಲಿ
ದುಷ್ಟಶಕ್ತಿಗಳನ್ನು ನಿಗ್ರಹಿಸಲು ತ್ರಿಶೂಲವನ್ನು ಹಿಡಿದಿರು
ತ್ತಾಳೆ.ಪಾರ್ವತೀದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು.ಶಿವನನ್ನು ಪಡೆಮಾಡುತ್ತಾಯುವುದು ಅವಳ ಗುರಿಯಾಗಿರುತ್ತದೆ.ನಾರದ ಮಹರ್ಷಿಗಳ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಮಾಡುವರು.ಸುದೀರ್ಘತಪಸ್ಸನ್ನು ನೀರು ಆಹಾರವನ್ನೂ ತ್ಯಜಿಸುತ್ತಾಳೆ.
ಬಿಸಿಲಿನಿಂದ ಆಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುವುದು ಮತ್ತು ದೀರ್ಘಕಾಲ ತಪಸ್ಸನ್ನು ಮಾಡುತ್ತಾ ಕುಳಿತ ಕಾರಣ ಆಕೆಯ ಮುಂಬೈಗೆ ಧೂಳು ಮೆತ್ತಿಕೊಳ್ಳುತ್ತದೆ.
ಇವಳ ತಪಸ್ಸಿಗೆ ಸಂತುಷ್ಟನಾದ ಶಿವನು ಪಾರ್ವತಿಯ ಮೈಮೇಲಿನ ಕಪ್ಪುಬಣ್ಣ ಮತ್ತು ಇಷ್ಟು ದಿನಗಳ ಕಷ್ಟಗಳಪರಿಹಾರಕ್ಕಾಗಿ ಗಂಗಾಜಲವನ್ನು ಮೈಮೇಲೆ ಹರಿಸಿದ್ದರಿಂದ ಮೈಯೆಲ್ಲಾ ಕಾಂತಿಯಿಂದ ಹೊಳೆಯ
ತೊಡಗಿತು.
Klive Special Article ಆಕೆಯುಮಹಾಗೌರಿಯಾಗಿಹೊಸಜನ್ಮಎತ್ತಿದಳು.ಶಿವನು ಆಕೆಯ ಭಕ್ತಿಗೆ ಮೆಚ್ಚಿ ಅವಳ ಇಷ್ಟದ ಪ್ರಕಾರ ಆಕೆಯನ್ನು ವರಿಸಿದ.
ಆಶ್ವಯುಜ ಮಾಸದ ಶುಕ್ಲಪಕ್ಷದ ಸಪ್ತಮಿಯಂದು
ವಿದ್ಯಾಪ್ರದಾಯಿಕೆಯಾದ ಶ್ರೀಸರಸ್ವತೀಮಾತೆಯನ್ನು
ಆಹ್ವಾನಿಸುವ ದಿನ.ಶ್ರೀಸರಸ್ವತಿ ಮಾತೆಯನ್ನು ಅಷ್ಟಮಿಯಂದು ಪೂಜಿಸಲಾಗುತ್ತದೆ.ಈ ದಿನವನ್ನು ದುರ್ಗಾಷ್ಟಮಿ ಎಂದು ಕರೆಯಲಾಗುತ್ತದೆ.
ಭಕ್ತರಿಗೆ ಶಾಂತಿ ಮತ್ತು ಸಂತೋಷವನ್ನುಕೊಟ್ಟು
ಅನುಗ್ರಹಿಸುವ ಮಹಾಗೌರಿಮಾತೆಗೆ ಭಕ್ತಿಯ ನಮನಗಳನ್ನು ಅರ್ಪಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗೋಣ
