Friday, December 5, 2025
Friday, December 5, 2025

Veterinary College ಪಶುವೈದ್ಯರು ಹೆಚ್ಚಿನ ಅಧ್ಯಯನದಿಂದ ಸಾಹಿತ್ಯ ಲೋಕಕ್ಕೆ ಉತ್ತಮ‌ ಕೊಡುಗೆ ನೀಡಬಹದು- ಟಿ‌.ಪಿ.ಅಶೋಕ

Date:

Veterinary College ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಕಮ್ಮಟ-2025
ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ (ರಿ), ಕರ್ನಾಟಕ, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರ ಸಹಯೋಗದಲ್ಲಿ ಶಿವಮೊಗ್ಗದಲ್ಲಿ ಆಯೋಜಿಸಿದ ದಿನಾಂಕ: 27-28 ಸಪ್ಟೆಂಬರ್ 2025 ರವರೆಗಿನ 2 ದಿನಗಳ ರಾಜ್ಯಮಟ್ಟದ “ಕನ್ನಡ ಭಾಷೆ, ಸಾಹಿತ್ಯ ಮತ್ತು ಪಶುವೈದ್ಯಕೀಯ ವಿಜ್ಞಾನ” ಈ ವಿಷಯದ “ಸಾಹಿತ್ಯ ಕಮ್ಮಟ-2025” ವನ್ನು ಉದ್ಘಾಟನೆ ಶ್ರೀ ಟಿ.ಪಿ.ಅಶೋಕ್, ಖ್ಯಾತ ವಿಮರ್ಶಕರು ಮತ್ತು ಸಾಹಿತಿಗಳು ಇವರು ಉದ್ಘಾಟಿಸಿದರು.

ನಂತರ ಅವರು ಮಾತನಾಡುತ್ತಾ ಮೂಕಪ್ರಾಣಿಗಳ ವೈದ್ಯರಾದ ಪಶುವೈದ್ಯರು ದಿನನಿತ್ಯ ಪಶುಗಳು ಮತ್ತು ಮನುಷ್ಯರ ಜೊತೆ ಬೆರೆಯುವುದರಿಂದ ಇವರ ಸಾಹಿತ್ಯವು ಅತ್ಯಂತ ಶ್ರೇಷ್ಟ ಮಟ್ಟಕ್ಕೆ ಬೆಳೆಯವ ಮಟ್ಟದ್ದು ಮತ್ತು ಈ ಕುರಿತು ಪಶುವೈದ್ಯರು ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಸಾಹಿತ್ಯ ಲೋಕಕ್ಕೆ ಹತ್ತಿರವಾದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದರು.

ಕಾರ್ಯಕ್ರಮದಲ್ಲಿ ಡಾ: ಎನ್.ಬಿ.ಶ್ರೀಧರ ಇವರ ನವಕರ್ನಾಟಕ ಪ್ರಕಾಶನದ ಕೃತಿ “ಪಶುವೈದ್ಯನ ಪಯಣ: ಪಶುವೈದ್ಯಕೀಯ ವೃತ್ತಿಯ ಅನುಭವಗಳು” ಇದನ್ನು ಬಿಡುಗಡೆ ಮಾಡಲಾಯಿತು.
ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಭಾರಿ ಡೀನ್, ಡಾ ತಿರುಮಲೇಶ್ ಮಾತನಾಡುತ್ತಾ ಕನ್ನಡ ಭಾಷೆಯ ಗರಿಮೆ, ಪಶುವೈದ್ಯಕೀಯ ವೃತ್ತಿಯವರು ಇದನ್ನು ಅಳವಡಿಸಿಕೊಳ್ಳುವ ವಿಧಾನಗಳ ಮಹತ್ವ ತಿಳಿಸಿದರು.

ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ಎಸ್. ಬಿ.ರವಿಕುಮಾರ್ ಮಾತನಾಡಿ ಪಶುವೈದ್ಯರಿಗೆ ದಿನನಿತ್ಯದ ವೃತ್ತಿಯ ಜೀವನದಲ್ಲಿ ಜನ ಮತ್ತು ಪಶುಗಳ ನಿಕಟ ಸಂಪರ್ಕವಿರುವುದರಿಂದ ಸಾಹಿತ್ಯಕ್ಕೆ ವಸ್ತುಗಳು ಲಭ್ಯತೆ ಸುಲಭ, ಹೆಚ್ಚಿನ ಪಶುವೈದ್ಯರು ಬರವಣಿಗೆಯಲ್ಲಿ ತೊಡಗಿಸಿಕೊಂಡು ವೃತ್ತಿಯ ಕುರಿತು ಜನಮಾನಸ ತಲುಪಬೇಕೆಂದರು.

Veterinary College ಸಮಾರಂಭದಲ್ಲಿ ಶಿವಮೊಗ್ಗದ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ:ಬಾಬುರತ್ನ, ಪಶುವೈದ್ಯಕೀಯ ಸಾಹಿತಿ ಡಾ: ರಮಾನಂದ ಕಾರ್ಯಕ್ರಮದ ಸಂಘಟಕರಾದ ಡಾ: ಎನ್.ಬಿ,ಶ್ರೀಧರ ಮತ್ತು ಡಾ: ರವಿಕುಮಾರ್,ಪಿ. ಇವರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ 48 ಪಶುವೈದ್ಯಾಧಿಕಾರಿಗಳು ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ,ಶಿವಮೊಗ್ಗದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಸಮಾವೇಶದಲ್ಲಿ ಒಟ್ಟು 11 ವಿವಿಧ ವಿಚಾರಗೋಷ್ಟಿಗಳಿರುತ್ತಿದ್ದು “ಪಶುವೈದ್ಯಕೀಯ ವಿದ್ಯಾರ್ಥಿ ಗೋಷ್ಟಿ” ಈ ಕಾರ್ಯಕ್ರಮದ ವಿಶೇಷವಾಗಿದೆ. ಡಾ: ಅರುಣ್ ಖರಾಟೆಯವರ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...