Shrimad Jagadguru Shankaracharya ಇತಿಹಾಸ ಪ್ರಸಿದ್ಧ ಶಿವಮೊಗ್ಗ ತಾಲ್ಲೂಕಿನಲ್ಲಿರುವ ಕೂಡಲಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ದಕ್ಷಿಣಾಮ್ನಾಯ ಮೂಲ ಶ್ರೀ ಶಾರದಾ ಪೀಠಮ್‍ನಲ್ಲಿ ನವರಾತ್ರಿ ಪ್ರಯುಕ್ತ ಲೋಕಲ್ಯಾಣಾರ್ಥಕ್ಕಾಗಿ ಶತಚಂಡಿಯಾಗವನ್ನು ಆಯೋಜಿಸಲಾಗಿದೆ.
ಶ್ರೀಮಠದ ನೇ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನವರಾತ್ರಿ ಪ್ರಯುಕ್ತ ಪ್ರತಿದಿನ ವಿವಿಧ ಹೋಮಗಳು ನಡೆಯುತ್ತಿದ್ದು, ಅಕ್ಟೋಬರ್ 1 ರಿಂದ ಶತಚಂಡಿಯಾಗ ನೆರವೇರಲಿದೆ.
ಶತಚಂಡಿಯಾಗವನ್ನು ಮತ್ತೂರಿನ ವಿದ್ವಾನ್ ಶ್ರೀ ಪ್ರದೀಪ್ ಅವಧಾನಿ ನೇತೃತ್ವದಲ್ಲಿ ನಡೆಸುತ್ತಿದ್ದು, ಭಕ್ತಾದಿಗಳು ಈ ಯಾಗದಲ್ಲಿ ಪಾಲ್ಗೊಂಡು, ಜಗದ್ಗುರುಗಳ ಮತ್ತು ಶ್ರೀ ಶಾರದಾ ಪರಮೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
Shrimad Jagadguru Shankaracharya ಮಾಹಿತಿಗಾಗಿ 9164185225, 9480544225, 9844570404 ಸಂಪರ್ಕಿಸಲು ಕೋರಿದೆ.
