Rotary Biodiversity Park ರೋಟರಿ ದತ್ತಿನಿಧಿ ಎಂಡೋಮೆಂಟ್ ಫಂಡ್‌ಗೆ 25 ಸಾವಿರ ಡಾಲರ್ ದೇಣಿಗೆ ನೀಡಿರುವ ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರೊ. ಎ.ಎಸ್.ಚಂದ್ರಶೇಖರ್‌ಗೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜು ನಿವೃತ್ತ ಅಧ್ಯಾಪಕರ ಸಂಘ ಹಾಗೂ ರೋಟರಿ ಬಯೋಡೈವರ್ಸಿಟಿ ಪಾರ್ಕ್ ವತಿಯಿಂದ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಎಸ್.ಚಂದ್ರಶೇಖರ್ ಅವರು ರೋಟರಿ ಬಯೋಡೈವರ್ಸಿಟಿ ಫೌಂಡೇಷನ್ ಆಫ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ್, ಎಂಡೋಮೆಂಟ್ ಫಂಡ್‌ನಿಂದ ಪ್ರತಿ ವರ್ಷ ಬರುವ ಆದಾಯದಲ್ಲಿ ಆರೋಗ್ಯ, ಪರಿಸರ, ಶಿಕ್ಷಣ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಯೋಜನೆಗಳಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
Rotary Biodiversity Park ಈವರೆಗೂ ಗ್ರಾಮಾಂತರ ಪ್ರದೇಶ ಹಾಗೂ ಸರ್ಕಾರಿ ಶಾಲೆಗಳಿಗೆ ನೆರವು ಒದಗಿಸುವಲ್ಲಿ ಮಹತ್ತರ ಕೆಲಸಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಅಧ್ಯಕ್ಷ ಪ್ರೊ. ಶಿವಣ್ಣ ಗೌಡ, ಕಾರ್ಯದರ್ಶಿ ಪ್ರೊ. ಕಣ್ಣಪ್ಪ, ಉಪಾಧ್ಯಕ್ಷ ಪ್ರೊ. ಚಂದ್ರಪ್ಪ, ಖಜಾಂಚಿ ಪ್ರೊ. ಮಂಜುನಾಥ, ಪ್ರೊ. ಧನಂಜಯ ಬಿ.ಆರ್., ಪ್ರೊ. ಬೋಗೇಶಪ್ಪ, ಪ್ರೊ. ಉಮಾಶಂಕರ್, ಪ್ರೊ. ಗಂಗಪ್ಪ, ಪ್ರೊ. ಷಣ್ಮುಖಪ್ಪ, ಪ್ರೊ. ಶಿವಮೂರ್ತಿ, ಪ್ರೊ. ನಾಗೇಂದ್ರಪ್ಪ, ಕೆ.ಪಿ.ಶೆಟ್ಟಿ, ಜಿ.ವಿಜಯಕುಮಾರ್, ನಾಗರಾಜ್, ವೀರಣ್ಣ ಹುಗ್ಗಿ, ಶಂಕರ್, ಜಗದೀಶ್, ಎಂ.ಪಿ.ಆನಂದಮೂರ್ತಿ, ರೋಟರಿ ಉತ್ತರ ಅಧ್ಯಕ್ಷ ಬಸವರಾಜಪ್ಪ ಹಾಗೂ ರೋಟರಿ ಪದಾಧಿಕಾರಿಗಳು ಹಾಜರಿದ್ದರು.
Rotary Biodiversity Park ರೋಟರಿ ಬಯೋಡೈವರ್ಸಿಟಿ ಎಂಡೋಮೆಂಟ್ ನಿಧಿಯನ್ನ ಆರೋಗ್ಯ, ಪರಿಸರ, ಶಿಕ್ಷಣ, ಮಹಿಳಾ ಸಬಲೀಕರಣ ಚಟುವಟಿಕೆಗಳಿಗೆ ವಿನಿಯೋಗ- ಪ್ರೊ.ಎ.ಎಸ್.ಚಂದ್ರಶೇಖರ್
Date:
