ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ
Klive Special Article ದಿನದ ಒಳ್ಳೆಯಮಾತು(ನವರಾತ್ರಿ5ನೇ ದಿನ)
ನವರಾತ್ರಿ(ಐದನೆಯದಿನ).ಸ್ಕಂದಮಾತೆಯ ಆರಾಧನೆ
” ಸಿಂಹಾಸನಗತಾ ನಿತ್ಯಂ
ಪದ್ಮಾಂಚಿತ ಕರಾದ್ವಯಾ/
ಶುಭದಾಸ್ತು ಸದಾ ದೇವಿ
ಸ್ಕಂದಮಾತಾ ಯಶಸ್ವಿನೀ//”
ನವರಾತ್ರಿ ಹಬ್ಬದ ಐದನೇ ದಿನವಾದ ಇಂದು
ಸ್ಕಂದಮಾತೆಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಬುಧಗ್ರಹವನ್ನು ಪ್ರತಿನಿಧಿಸುವ ದುರ್ಗಾಮಾತೆಯ ಐದನೇ ಅವತಾರವಾದ ಸ್ಕಂದಮಾತೆ,ಸದಾ ತನ್ನ ಭಕ್ತರಮೇಲೆಸಹಾನುಭೂತಿತೋರುತ್ತಾಳೆ.ಪಾತಾಳಲೋಕದಲ್ಲಿದ್ದತಾರಕಾಸುರನೆಂಬ ರಾಕ್ಷಸನನ್ನು ಸಂಹರಿಸಲುತದೇವಿ ಸ್ಕಂದನಿಗೆ(ಸುಬ್ರಹ್ಮಣ್ಯ ಸ್ವಾಮಿ) ಜನ್ಮ ಕೊಡುತ್ತಾಳೆ.ಆದ್ದರಿಂದಈ ದೇವಿಯನ್ನು ಸ್ಕಂದಮಾತಾಎಂದುಕರೆಯುತ್ತಾರೆ.ಸ್ಕಂದಮಾತಾದೇವಿಯ ವಾಹನಸಿಂಹವಾಗಿರುತ್ತದೆ.ನಾಲ್ಕುಭುಜಗಳನ್ನು ಹೊಂದಿದ್ದು,ಎರಡು ಕೈಗಳಲ್ಲಿ ಕಮಲವನ್ನು
Klive Special Article ಹಿಡಿದಿರುತ್ತಾಳೆ.ದೇವಿಯು ಮಾತೃಸ್ವರೂಪಿಣಿಯಾಗಿ ಭಕ್ತಕೋಟಿಯನ್ನು ಹರಸುವಳು.
ಇಂತಹಮಾತೃಸ್ವರೂಪಿಣಿಯಾದಸ್ಕಂದಮಾತಾದೇವಿಯನ್ನು ಭಕ್ತಿಯಿಂದ ಆರಾಧಿಸಿ,ಪೂಜಿಸಿ ದೇವಿಯ ಅನುಗ್ರಹಕ್ಕೆಪಾತ್ರರಾಗೋಣ.
