Saturday, December 6, 2025
Saturday, December 6, 2025

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ಮಾಹಿತಿ ಸರಣಿ

Date:

ಭಾಗ 6

ಕೆಳದಿ ಅರಸರ ಕಾಲದ ಸಾಹಿತ್ಯ..

Klive Special Article ಕೆಳದಿ, ಬಿದನೂರು, ಇಕ್ಕೇರಿ ಸಂಸ್ಥಾನದ ನಾಯಕರು ಶೃಂಗೇರಿ ಸಂಸ್ಥಾನದ ಗುರುಗಳನ್ನು ಮಾರ್ಗದರ್ಶಕರ ನ್ನಾಗಿಸಿಕೊಂಡಿದ್ದರು.
ಹಾಗೆಯೇ ಕೆಳದಿ ಅರಸರಿಗೆ ಹಲವು ಬಿರುದುಗಳು ಇದ್ದು, ಪರಯಡವಮುರಾರಿ ಕೋಟೆಕೋಲಾಹಲೇನ ಪ್ರವಿಚಲಿತವಿಶುದ್ಧಾದ್ವೈತಸಿದ್ಧಾಂತಭೂಮ್ನಾ|ಅಸಿಯುಗಲಭೃತಾ ಚ ವೈರಿಸಪ್ತಾಂಗ ಲಕ್ಷ್ಮೀ, ಹರಹರಿತ ಪಟೋದ್ಯತ್ಕೇತನಶ್ರೀಯುತೇನ||೨||ಚೌಡಪ್ಪನಾಯಕ ಸಮುನ್ಮಿಷಿತಾನ್ವವಾಯ ದುಗ್ದಾಬ್ಧಿವೃದ್ಧಿಕರಕೈರವಬಾಂಧವೇನ| ಏಕಾಂಗವೀರರಣರಂಗವಿಹಾರಧೀರ, ದೋನೇಜ ಪಶ್ಚಿಮ ಸರಸ್ವದಿಧೀಶ್ವರೇಣ||೩| | ಸಾಮಾನ್ಯವಾಗಿ ಈ ಎಲ್ಲಾ ಬಿರುದುಗಳು ಕೆಳದಿಯನ್ನು ಆಳಿದ ಎಲ್ಲಾ ಅರಸರಿಗೂ ಅನ್ವಯವಾಗುತ್ತದೆ. ‌

ಕೆಳದಿ ಅರಸರ ಕಾಲದಲ್ಲಿ ಸಂಸ್ಕೃತ ಮಾತ್ರವಲ್ಲದೆ ಕನ್ನಡ ಸಾಹಿತ್ಯದ ಉತ್ತಮ ಕೃತಿಗಳೂ ಬೆಳಕು ಕಂಡಿವೆ. ಕೆಳದಿಯನ್ನಾಳಿದ ಅರಸರಲ್ಲಿ ಮೂರು ಅರಸರು ಸ್ವಯಂ ವಿದ್ವಾಂಸರೇ ಆಗಿದ್ದರು. ಹಿರಿಯ ವೆಂಕಟಪ್ಪ ನಾಯಕರು “ಶಿವಗೀತಾವ್ಯಾಖ್ಯಾ” ಎಂಬ ಭಾಷಾಕೃತಿಯನ್ನು, “ವೀರಮಾಹೇಶ್ವರ ಸುಧಾವರ್ಧಿ” ಹಾಗೂ “ತತ್ವಾಧಿಕಾರನಿರ್ಣಯ” ಎಂಬ ಧಾರ್ಮಿಕ ಗ್ರಂಥ ವನ್ನು ರಚಿಸಿದ್ದಾನೆ. ಬಸಪ್ಪನಾಯಕನು “ಶ್ರೀ ಶಿವತತ್ವರತ್ನಾಕರ,” ಎಂಬ ವಿಶ್ವಕೋಶ ವನ್ನೂ, “ಸುಭಾಷಿತ ಸುರದ್ರುಮ” ಎಂಬ ನೀತಿಗ್ರಂಥವನ್ನು, “ಸೂಕ್ತಿ ಸುಧಾಕರ” ಎಂಬ ಕೃತಿಯನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಸಂಕಲಿಸಿದ್ದಾನೆ. ಜೊತೆಗೆ “ಶೈವ ಸಂಜೀವಿನಿ” ಅಥವಾ “ಪಂಚಶ್ಲೋಕೀವ್ಯಾಖ್ಯಾ” ಎಂಬ ಕೃತಿಯನ್ನು ರಚಿಸಿದ್ದಾನೆ. ಕೆಳದಿ ಅರಸರ ಕಾಲದಲ್ಲಿ ಮೂವತ್ತಕ್ಕೂ ಹೆಚ್ಚು ಸಾಹಿತ್ಯ ಕೃತಿಗಳು ರಚಿತವಾಗಿದೆ‌.

ಭಟ್ಟೋಜಿ ಧೀಕ್ಷಿತ, ರಂಗನಾಥ ಧೀಕ್ಷಿತ, ರಂಗೋಜಿ ಭಟ್ಟ, ಅಶ್ವಪಂಡಿತ, ಕೊಂಡಭಟ್ಟ, ಮಾನಪ್ಪ ಪಂಡಿತ, ನಿರ್ವಾಣಮಂತ್ರಿ, ಮರಿತೋಂಟದಾರ್ಯ, ಸಂಗಮೇಶ್ವರಯ್ಯ, ಚೊಕ್ಕನಾಥ ಮುಂತಾದ ಪಂಡಿತರು ಇದ್ದರೆಂದು ಮಾಹಿತಿಇದೆ. ಚೊಕ್ಕನಾಥನು ಸಂಸ್ಕೃತ, ಕನ್ನಡ, ತೆಲುಗು ಬಲ್ಲವನಾಗಿದ್ದನು.

ಪ್ರವರ್ಧಮಾನಕ್ಕೆ ಬಂದ ಕೆಳದಿ ಅರಸರ ಸಾಹಿತ್ಯ ಪ್ರೇಮವನ್ನು ಕಂಡು ಕೆಲವು ವಿದ್ವಾಂಸರು, ಕವಿಗಳು ಕೆಳದಿಗೆ ವಲಸೆಬಂದರು, ಅವರಲ್ಲಿ ಭಟ್ಟೋಜಿ ದೀಕ್ಷಿತರು ವಾರಣಾಸಿಯಿಂದಲೂ, ಬಿಲ್ಹಣನು ಕಾಶ್ಮೀರದಿಂದಲೂ ಬಂದಿದ್ದರೆಂಬ ಉಲ್ಲೇಖವಿದೆ. ಭಟ್ಟೋಜಿ ದೀಕ್ಷಿತರು ೧೬೦೦ರಲ್ಲಿ ಕೆಳದಿಗೆ ಬಂದು ಆಸ್ಥಾನ ವಿದ್ವಾನ್ ಆಗಿದ್ದು, ಇವನು “ತತ್ವಕೌಸ್ತುಭ ಸಿದ್ಧಾಂತ”, ” ಸಿದ್ಧಾಂತ ಕೌಮುದೀ”, “ಶಬ್ಧ ಕೌಸ್ತುಭ” ಎಂಬ ವ್ಯಾಕರಣ ಗ್ರಂಥವನ್ನು, “ಪ್ರೌಢಮನೋರಮ” ಎಂಬ ವ್ಯಾಖ್ಯಾನ ಗ್ರಂಥ ವನ್ನು, “ತಂತ್ರಾಧಿಕಾರ ನಿರ್ಣಯ” ವೆಂಬ ಆಗಮಿಕ ಗ್ರಂಥ ವನ್ನು, “ವೇದಭಾಷ್ಯಾಸಾರ”, ” ಜಾತಿ ವಿವೇಕ”, ಹಾಗೂ “ಸ್ಮೃತಿ ದರ್ಪಣ” ಎಂಬೆರಡು ಧರ್ಮಗ್ರಂಥಗಳ ನ್ನು ಗ್ರಂಥಗಳನ್ನು ರಚಿಸಿದ್ದಾನೆ.

Klive Special Article ಭಟ್ಟೋಜಿ ದೀಕ್ಷಿತರ ಸಹೋದರ ರಂಗೋಜಿ ಭಟ್ಟ, ಇವನ ಮಗ ಕೊಂಡ ಭಟ್ಟ ಇಬ್ಬರೂ ಕೆಳದಿ ಆಸ್ಥಾನ ವಿದ್ವಾಂಸರಾಗಿದ್ದು ಸಂಸ್ಕೃತ ‌ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹೀಗೆ ಕೆಳದಿಯಲ್ಲಿ ವಿದ್ವಾಂಸರ ಸಮೂಹವೇ ಇತ್ತು. ನಮ್ಮ ಹೆಮ್ಮೆ ನಮ್ಮ ಇತಿಹಾಸ ನಮ್ಮ‌ಹೆಮ್ಮೆ ನಮ್ಮ ಕೆಳದಿ,ನಮ್ಮ ಹೆಮ್ಮೆ ನಮ್ಮ ಬಿದನೂರು ನಮ್ಮ ಹೆಮ್ಮೆ ನಮ್ಮದೇ ನಗರ

ಚಿತ್ರಕೃಪೆ:
ಆದಿತ್ಯ ಪ್ರಸಾದ್,
ರಾಯಲ್ ಕಾಫೀ ವರ್ಕ್ಸ್,
ಶಿವಮೊಗ್ಗ.

ದಿಲೀಪ್ ನಾಡಿಗ್,
6361124316

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...