H. B. Manjunath ಸನಾತನ ಭಾರತೀಯ ಮೌಲ್ಯಗಳ ಪ್ರಸರಣ ದೇವಾಲಯಗಳ ಮುಖಾಂತರ ಮಾಡಲೂ ಸಾಧ್ಯವಿದ್ದು ಇದರಲ್ಲಿ ಅರ್ಚಕರ ಪಾತ್ರವೂ ಮಹತ್ತರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ.ಮಂಜುನಾಥ ಹೇಳಿದರು.
ಅವರಿಂದು ಚನ್ನಗಿರಿ ತಾಲೂಕು ತಾವರೆಕೆರೆಯಲ್ಲಿ ಕರ್ನಾಟಕ ದೇವಾಲಯ ಸಂವರ್ಧನ ಸಮಿತಿಯಿಂದ ಏರ್ಪಾಡಾಗಿದ್ದ ದೇವಾಲಯಗಳ ಅರ್ಚಕರ ರಾಜ್ಯಮಟ್ಟದ ಪ್ರಶಿಕ್ಷಣ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡುತ್ತಾ ವೇದೋಕ್ತವಾದ ದೇವ ಪೂಜಾ ಪದ್ಧತಿಯು ವೈಜ್ಞಾನಿಕ ಹಾಗೂ ವೈಚಾರಿಕವಾಗಿ ನೋಡಿದಾಗಿಯೂ ಅತ್ಯಂತ ಅರ್ಥವತ್ತಾಗಿದ್ದು ಇದನ್ನು ಅರ್ಚಕರು ಅರಿತುಕೊಂಡು ಕಾರ್ಯನಿರ್ವಹಿಸಬೇಕು, ಅನೇಕ ಮಂತ್ರಗಳು ಸಹಾ ಸಮಾಜಮುಖಿಯಾದ ಉದಾತ್ತ ಉದ್ದೇಶಗಳನ್ನೇ ವ್ಯಕ್ತಪಡಿಸುತ್ತಿದ್ದು ಅರ್ಚಕರು ಇದನ್ನು ತಾವು ತಿಳಿದು ಭಕ್ತರಿಗೂ ತಿಳಿಸಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.
ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್ ಹಾಗೂ ಸ್ವಾಮಿಯವರ ಉಪಸ್ಥಿತಿಯಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಅರ್ಚಕರ ಶ್ರದ್ಧಾ ಭಕ್ತಿಗಳು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪ್ರೇರಣದಾಯಕವಾಗಿರಬೇಕು ತನ್ಮೂಲಕ ದೇವರು ದೇವಸ್ಥಾನಗಳ ಬಗ್ಗೆ ನಂಬಿಕೆ ಹೆಚ್ಚಾಗಬೇಕು ಎಂದರು.
H. B. Manjunath ಕೃಷ್ಣಮೂರ್ತಿ ಕಶ್ಯಪ್, ಓಂಕಾರ್, ಮುನಿಯಪ್ಪ ದೇವರಾಜ್ ಮುಂತಾದವರು ಉಪಸ್ಥಿತರಿದ್ದರು. ತಾವರ ಕೆರೆಯ ಶ್ರೀ ಶಿಲಾ ಮಠದಲ್ಲಿ ಶಿಬಿರ ಏರ್ಪಾಡಾಗಿತ್ತು.
