Bharat Scouts and Guides Shivamogga ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಗೀತ ಗಾಯನ ಸ್ಪರ್ಧೆಯ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿದ ಶಿವಮೊಗ್ಗ ನಗರದ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಸಾಂದೀಪನಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಸ್ಥಳೀಯ ಸಂಸ್ಥೆಯ ಸಹಾಯಕ ಜಿಲ್ಲಾ ಆಯುಕ್ತರು ಸ್ಕೌಟ್ ಶ್ರೀಯುತ ಶ್ರೀನಿವಾಸ್ ವರ್ಮ ಮಾತನಾಡುತ್ತಾ ಮಕ್ಕಳಲ್ಲಿ ದೇಶಭಕ್ತಿ ಪ್ರಜ್ವಲಿಸುವ ಮತ್ತು ರೋವರ್ಸ್ ಮತ್ತು ರೇಂಜಸ್ರವರಲ್ಲಿ ಜಾನಪದ ಗೀತೆಗಳ ಜ್ಞಾನವನ್ನು ಹೆಚ್ಚಿಸುವ ಇಂತಹ ಸ್ಪರ್ಧೆಗಳು ಅವಶ್ಯಕವಾಗಿದ್ದು, ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತರಾದ ಸನ್ಮಾನ್ಯ ಶ್ರೀ ಪಿ. ಜಿ. ಆರ್. ಸಿಂಧ್ಯಾ ರವರ ಆಶಯ ಮತ್ತು ಮಾರ್ಗದರ್ಶನದಂತೆ ನಡೆಯುತ್ತಿದೆ ಎಂದು ಹೇಳಿದರು.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳಿಗೆ ಶುಭಾಶಯ ಕೋರಿದರು. ಗೀತ ಗಾಯನ ಸ್ಪರ್ಧೆಯು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಜೇಶ್ ಅವಲಕ್ಕಿ ಅವರು ಸರ್ವರನ್ನ ಸ್ವಾಗತಿಸಿದರು.
ಸಿಹಿಮೊಗೆ ಓಪನ್ ಗ್ರೂಪಿನ ಗ್ರೂಪ್ ಲೀಡರ್ ಗೈಡ್ ಹಾಗೂ ಹಿರಿಯ ತರಬೇತಿ ನಾಯಕಿ ಶ್ರೀಮತಿ ಕಾತ್ಯಾಯಿನಿ ರವರು ತೀರ್ಪುಗಾರರ ಪರಿಚಯವನ್ನು ಮಾಡಿಕೊಟ್ಟರು.
ಹಿರಿಯ ಗೈಡರ್ ಮತ್ತು ಜಿಲ್ಲಾ ತರಬೇತಿ ಆಯುಕ್ತೆ ( ಗೈಡ್) ಶ್ರೀಮತಿ ಗೀತಾ ಚಿಕ್ಮಟ್ ರವರು ಸರ್ವರನ್ನು ವಂದಿಸಿದರು. ಶಿವಮೊಗ್ಗದ ಸಿಹಿಮೊಗೆ ಓಪನ್ ಗ್ರೂಪಿನ ಕಬ್, ಬುಲ್ ಬುಲ್, ಸ್ಕೌಟ್, ಗೈಡ್ ಮಕ್ಕಳು ಪ್ರಥಮ ಸ್ಥಾನ ಪಡೆದರು. ರೋವರ್ ಮತ್ತು ರೇಂಜರ್ ವಿಭಾಗದಲ್ಲಿ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ರೋವರ್ಸ್ ಮತ್ತು ರೇಂಜರ್ಸ್ ಪ್ರಥಮ ಸ್ಥಾನ ಪಡದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Bharat Scouts and Guides Shivamogga ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಸ್ಕೌಟರ್ ಮತ್ತು ಜಿಲ್ಲಾ ಸಂಸ್ಥೆ ಸಹ ಕಾರ್ಯದರ್ಶಿಗಳಾದ
ಶ್ರೀ ವೈ. ಆರ್. ವೀರೇಶಪ್ಪನವರು ಮಕ್ಕಳಿಗೆ ಮುಂದಿನ ಹಂತಗಳಲ್ಲಿ ಯಾವ ರೀತಿಯಲ್ಲಿ ತಯಾರಾಗಿ ಬರಬೇಕೆಂದು ತಿಳಿಹೇಳಿ ಶುಭಾಶಯವನ್ನು ಕೋರಿದರು.
ಡಿ ವಿ ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ರೋವರ್ ಸ್ಕೌಟ್ ಲೀಡರ್ ಆದಂತಹ ಶ್ರೀಯುತ ಗದಿಗಯ್ಯ ಸ್ವಾಮಿ, ಶ್ರೀ ಆದಿತ್ಯ ರವರು, ಮಲ್ನಾಡ್ ಓಪನ್ ಗ್ರೂಪ್ ಸಹಾಯಕ ಸ್ಕೌಟ್ ಮಾಸ್ಟರ್ ಶ್ರೀ ರೇಣುಕಯ್ಯ, ಪೋಷಕರು, ವಿವಿಧ ಶಾಲೆ ಕಾಲೇಜಿನಿಂದ ಆಗಮಿಸಿದ್ದ ಸುಮಾರು 70 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಶ್ರೀಮತಿ ರೂಪ ಎಸ್. ಹೊಳ್ಳ ಮತ್ತು ಶ್ರೀಮತಿ ಉಷಾ ಅವರಿಗೆ ಸನ್ಮಾನಿಸಲಾಯಿತು. ಭಾಗವಹಿಸಿದ ಎಲ್ಲಾ ಶಾಲೆಗಳಿಗೆ ಸ್ಥಳೀಯ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಸ್ಥಳೀಯ ಸಂಸ್ಥೆ ಖಜಾಂಜಿ ಶ್ರೀ ದೀಪು ಪಿ.ಎಸ್. ರವರು ಸರ್ವರಿಗೂ ವಂದಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು.
