Sunday, August 2, 2026
Sunday, August 2, 2026

Karnataka State Cartoonists Association ರಾಜ್ಯ ವ್ಯಂಗ್ಯಚಿತ್ರಕಾರರ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ ವೈ.ಎಸ್.ನಂಜುಂಡಸ್ವಾಮಿ ಆಯ್ಕೆ

Date:

Karnataka State Cartoonists Association ಕರ್ನಾಟಕ ರಾಜ್ಯ ವ್ಯಂಗ್ಯಚಿತ್ರಕಾರರ ಸಂಘದ ನೂತನ ಅಧ್ಯಕ್ಷ ರಾಗಿ ಶಿವಮೊಗ್ಗದ ಖ್ಯಾತ ವ್ಯಂಗ್ಯಚಿತ್ರಕಾರ ವೈ. ಎಸ್. ನಂಜುಂಡಸ್ವಾಮಿ ಆಯ್ಕೆ ಆಗಿದ್ದಾರೆ.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ತುಮಕೂರಿನ ರಾಜನ್ ಪುತ್ರ ಕೃಷ್ಣಕಾಂತ್ ಅವರ ದತ್ತಿಯಲ್ಲಿ ಹಿರಿಯ ವ್ಯಂಗ್ಯಚಿತ್ರಕಾರರಾದ ಉಡುಪಿಯ ಜೀವನ್ ಶೆಟ್ಟಿ ಅವರಿಗೆ ಜೀವಮಾನದ ಪ್ರಶಸ್ತಿಯನ್ನು ಬೆಂಗಳೂರಿನ ಎಂ ಜಿ ರಸ್ತೆಯ ಭಾರತೀಯ ವ್ಯಂಗ್ಯಚಿತ್ರಕಾರರ ಗ್ಯಾಲರಿಯಲ್ಲಿ ರಾಜ್ಯದ ಹಲವು ಜಿಲ್ಲೆಯ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಈ ಸನ್ಮಾನ ಸಮಾರಂಭದ ನಂತರ ಸಂಘದ ಕಾರ್ಯಕಾರಿ ಸಮಿತಿಯ ರಚನೆಯನ್ನೂ ಮಾಡಿಕೊಂಡಿದ್ದು, ಹೊಸ ಕಾರ್ಯಕಾರಿ ಸಮಿತಿಯ ಸದಸ್ಯರ ಪೈಕಿ ಶಿವಮೊಗ್ಗ ಮೂಲದ ವೈ. ಎಸ್. ನಂಜುಂಡಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿಯೂ, ಬಾಬು ಜತ್ತಕರ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಗಳನ್ನಾಗಿ ಜಿ. ಎಸ್. ನಾಗನಾಥ್, ಜಂಟಿ ಕಾರ್ಯದರ್ಶಿಗಳನ್ನಾಗಿ ಎಂ. ವಿ. ಶಿವರಾಂ ಹಾಗೂ ಸಂಕೇತ್ ಗುರುದತ್ತ ಅವರನ್ನು ನೇಮಿಸಲಾಯ್ತು.
ಮಹಾ ಪೋಷಕರಾಗಿ ಬಿ. ಜಿ. ಗುಜ್ಜಾರಪ್ಪ, ವಿ. ಆರ್. ಸಿ. ಶೇಖರ್ ಹಾಗೂ ಎಚ್. ಬಿ. ಮಂಜುನಾಥ ಇವರುಗಳು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಚ್. ಎಸ್. ವಿಶ್ವನಾಥ್, ರಘುಪತಿ ಶೃಂಗೇರಿ, ಚಂದ್ರ ಗಂಗೊಳ್ಳಿ, ಡಾ. ಜೆ. ಬಾಲಕೃಷ್ಣ, ಎಂ. ಎನ್. ಸುಬ್ರಮಣ್ಯ, ವೆಂಕಟ್ ಭಟ್ ಎಡನೀರು, ಸಿ. ಎಂ. ನಾಡಿಗೇರ್, ಅರುಣ್ ಕುಮಾರ್ ಹಾಗೂ ಬದರಿ ಪುರೋಹಿತ್ ಆಯ್ಕೆಗೊಂಡಿರುತ್ತಾರೆ.
Karnataka State Cartoonists Association ಇದೇ ಸಂದರ್ಭದಲ್ಲಿ ಹೊಸದಾಗಿ ಯುವ ವ್ಯಂಗ್ಯಚಿತ್ರಕಾರರ ಪಡೆಯನ್ನು ರಚಿಸಲಾಗಿದ್ದು, ಅದರಲ್ಲಿ ಎಂ. ಎನ್. ದತ್ತಾತಿ, ರವಿ ಪೂಜಾರಿ, ಪ್ರಸನ್ನ ಕುಮಾರ್, ವಿನೋದ್ ಆಚಾರ್ಯ, ಸುಮುಖ್ ಶಾನುಭೋಗ್, ಕೊರಲಕುಂಟೆ ದಯಾನಂದ್ ಹಾಗೂ ರೆಬೇಕಾ ಟೇಲರ್ ಇವರುಗಳಿದ್ದು ಸಂಘದ ಕಾರ್ಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...