ಭಾಗ. 4.
Klive Special Article ಕೆಳದಿ ಮಹಾಯೋಧ ದೊಡ್ಡ ಸಂಕಣ್ಣನಾಯಕರು ತಾನುಟ್ಟಿದ್ದ ಖಾವಿಯೊಳಗೆ ಬೆಚ್ಚಗೆ ಮಲಗಿದ್ದ ನಾಗಮುರಿ ಖಡ್ಗದೊಂದಿಗೆ ದಕ್ಷಿಣ ಭಾರತದ ತೀರ್ಥ ಯಾತ್ರೆ ಕೈಗೊಂಡು ಮೊದಲು ಶ್ರೀ ರಾಮೇಶ್ವರನನ್ನ ದರ್ಶಿಸಿ ಶಿವಗಂಗೆ, ಕಂಚಿ, ಕುಂಭಕೋಣ, ಚಿದಂಬರಂ, ಶ್ರೀಮುಷ್ಣ, ಮನ್ನಾರ, ಪುದುಗಲ, ಮುಂತಾದ ಶೈವ ಪುಣ್ಯಕ್ಷೇತ್ರ ಸಂದರ್ಶಿಸಿ, ಶೈವದೇವರುಗಳ ಸಾನಿಧ್ಯದಲ್ಲಿ ಸೇವೆ ಮತ್ತು ಸಮುದ್ರ ದರ್ಶನ ಮಾಡಿ ಉತ್ತರಾಭಿಮುಖವಾಗಿ ಪ್ರಯಾಣ ಬೆಳೆಸಿ ವಿಜಯವಾಡ, ಗೋಲ್ಕೊಂಡ, ಅಹ್ಮದ್ ನಗರ, ಮೂಲಕ ದಿಲ್ಲಿಗೆ ಬಂದನು. ದೊಡ್ಡ ಸಂಕಣ್ಣನಾಯಕನ ನಿಜವಾದ ಯೋಧನ ತಾಕತ್ತು ಇಲ್ಲಿಯೇ ಪ್ರದರ್ಶವಾಗುತ್ತದೆ. ದಿಲ್ಲಿನಗರದ ವೈಭವವನ್ನು, ಸೊಬಗನ್ನು, ಭವ್ಯ ಕಟ್ಟಡಗಳನ್ನು ಕಣ್ಣಾರೆ ಕಂಡ ದೊಡ್ಡಸಂಕಣ್ಣನಾಯಕ ರಿಗೆ ದೆಹಲಿ ಬಾದಷಹನ ಅರಮನೆಯ ಬಳಿ ಬಂದಾಗ ಒಂದು ವಿಶೇಷ ದೃಶ್ಯ ಕಂಡರು, ಅರಮನೆಯ ಬಾಗಿಲಿಗೆ ಬಿರುದು ಸಮೇತ ಕಟ್ಟಿದ್ದ ಕತ್ತಿಯೊಂದು ತೂಗಾಡುತಿತ್ತು, ಅದರ ವಿಚಾರ ಕೇಳಲಾಗಿ ಬಾದಷಹನ ಅರಮನೆಯಲ್ಲಿ ಅಂಕುಶಖಾನನೆಂಬ ಜಟ್ಟಿಯೊಬ್ಬನಿದ್ದಾನೆ, ಅವನು ಒಂಟಿ ಕತ್ತಿಕಾಳಗದಲ್ಲಿ ಪ್ರಸಿದ್ದನಾಗಿದ್ದು ಅವನೊಂದಿಗೆ ಸೆಣಸುವವರು ಈ ಕತ್ತಿಯನ್ನು ಬಿಚ್ಚಿ ತನ್ನೊಡನೆ ಕಾಳಗಕ್ಕೆ ಬರಬೇಕೆಂದು ಸೂಚಿಸಿರುವುದಾಗಿಯೂ ತಿಳಿಸಿದರು. Klive Special Article ಇತ್ತ ಬಾದಷಹ ಇವನನ್ನ ಎದುರಿಸುವ ಜಟ್ಟಿಗಳಾರೂ ಇಡೀ ಭಾರತದಲ್ಲೇ ಇಲ್ಲವೆಂದು ಚಿಂತಿಸುವ ಸಮಯದಲ್ಲೇ ಮಲ್ಲರಿಗೇ ಜಗದೇಕಮಲ್ಲರಾದ ಮಲ್ಲಸಾಮ್ರಾಜ್ಯದ ದೊಡ್ಡಸಂಕಣ್ಣನಾಯಕರ ಪ್ರವೇಶವಾಗಿತ್ತು. ಈ ವಿಚಾರ ತಿಳಿದ ಸಂಕಣ್ಣ ನಾಯಕರು ಕತ್ತಿಯನ್ನು ಬಿಚ್ಚಿ ಅಂಕುಶಖಾನನು ಪರಾಕ್ರಮಿಯಾಗಿದ್ದರೆ ನನ್ನನ್ನು ಎದುರಿಸಲೆಂದನು. ದೊಡ್ಡಸಂಕಣ್ಣನಾಯಕ ರ ವಿಷಯ ತಿಳಿದ ದೆಹಲಿ ಬಾದಷಹ ಸಂಭ್ರಮದಿಂದ ಅವನನ್ನು ಬರಮಾಡಿಕೊಂಡು ಕತ್ತಿ ಕಾಳಗ ಏರ್ಪಡಿಸಿದನಲ್ಲದೆ ತನ್ನ ಶಸ್ತ್ರಾಗಾರದಿಂದ ನಾನಾ ತರಹದ ಖಡ್ಗವನ್ನು ತರಿಸಿ ಬೇಕಾದುದನ್ನು ಆರಿಸಿಕೊಳ್ಳುವಂತೆ ಮಲ್ಲರಿಗೆ ಮಲ್ಲನಾದ ಸಂಕಣ್ಣನಾಯಕರಿಗೆ ತಿಳಿಸಿದನು. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಂಕಣ್ಣನಾಯಕರು ನಗುತ್ತ ನನಗೆ ಈ ಯಾವ ಆಯುಧವೂ ಬೇಕಿಲ್ಲವೆಂದು ನನ್ನ ಬಳಿಯೇ ಖಡ್ಗವಿದೆಯೆಂದು ಹೇಳಿ ಕಾಳಗಕ್ಕೆ ಇಳಿದನು. ಈ ಅಪೂರ್ವ ಕಾಳಗವನ್ನು ವೀಕ್ಷಿಸಲು ಸಾವಿರಾರು ಜನರು, ನೂರಾರು ಜಟ್ಟಿಗಳು ಸೇರಿದರು. ಆದರೆ ಖಾವಿಯೊಳಗೆ ಬೆಚ್ಚಗೆ ಮಲಗಿದ್ದ ನಾಗಮುರಿ ರಕ್ತಕ್ಕಾಗಿ ತಹತಹಿಸುತ್ತಾ ಮಲಗಿತ್ತು. ಮಲ್ಲರಿಗೆ ಮಲ್ಲರಾದ ಮಲ್ಲಸಾಮ್ರಾಜ್ಯದ ದೊಡ್ಡಸಂಕಣ್ಣನಾಯಕರು ಇಡೀ ಭಾರತವೇ ಮೆಚ್ಚಿ ಕೊಂಡಾಡುವಂತಹ ಸಾಹಸಕ್ಕೆ ಕೈ ಹಾಕಿದ್ದರು. ಮುಂದುವರೆಯುವುದು. ದಿಲೀಪ್ ನಾಡಿಗ್, 6361124316
