Friday, December 5, 2025
Friday, December 5, 2025

Shimoga News ಕಂತಿನ ಹಣ ಸೂಕ್ತ ಪಾವಿತಿಸಿದ್ದರೂ ಜೆಸಿಬಿಯನ್ನ ಫೈನಾನ್ಷಿಯರ್ ಮಾರಾಟ ಮಾಡಿದ ಪ್ರಕರಣ. ಮಾಲೀಕರ ಪರ ಗ್ರಾಹಕ ಆಯೋಗ ತೀರ್ಪು.

Date:

Shimoga News ದೂರುದಾರರಾದ ಶಿವಮೊಗ್ಗ ತಾಲ್ಲೂಕಿನ ಗೊಂದಿಚಟ್ನಹಳ್ಳಿ ನಿವಾಸಿ ನಾಗರಾಜ ಎಂಬುವವರಿAದ ಎದುರುದಾರರಾದ ಹೆಚ್‌ಡಿಬಿ ಫೈನಾನ್ಸಿಯಲ್ ಸರ್ವೀಸ್ ಶಿವಮೊಗ್ಗ, ಹೆಚ್‌ಡಿಬಿ ಫೈನಾನ್ಸಿಯಲ್ ಮುಂಬೈ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಶಿವಮೊಗ್ಗ ಇವರು ಯಾವುದೇ ರೀತಿಯ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ ಜೆಸಿಬಿ ಯನ್ನು ವಶಕ್ಕೆ ಪಡೆದು ಹರಾಜು ಮೂಲಕ ಮಾರಾಟ ಮಾಡಿದ ಕಾರಣಕ್ಕಾಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಗಣಿಸಿ, 1 ಮತ್ತು 2ನೇ ಎದುರುದಾರರು ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿಸಿದೆ.
ದೂರುದಾರರು ತಮ್ಮ ಜೀವನ ನಿರ್ವಹಣೆಗಾಗಿ ಒಂದು ಜೆಸಿಬಿ ಖರೀದಿಸಿದ್ದು, 1 ಮತ್ತು 2 ನೇ ಎದುರುದಾರರಿಂದ ರೂ.31,65,625 ಲಕ್ಷ ಸಾಲವನ್ನು ಪಡೆದು 60 ತಿಂಗಳ ಇಎಂಐ ಅನ್ನು 4/2/2023 ರಿಂದ 4/10/2023 ರವೆಗೆ ಪಾವತಿಸಬೇಕಾಗಿರುತ್ತದೆ. ದೂರುದಾರರು ಮಾಸಿಕ ಎಲ್ಲಾ ಇಎಂಐ ಗಳನ್ನು ಪಾವತಿಸಿಕೊಂಡು ಬರುತ್ತಿದ್ದು ವೈಯಕ್ತಿಕ ಕಾರಣಗಳಿಂದ 2 ಇಎಂಐಗಳನ್ನು ಪಾವತಿಸಲು ಸಾಧ್ಯವಾಗದೇ, ಅಕೋಬ್ಟರ್-2024 ರಂದು ಉಳಿಕೆಯಾದ 2 ಇಎಂಐಗಳನ್ನು ಪಾವತಿಸುವುದಾಗಿ ಭರವಸೆಯನ್ನು ಕೊಟ್ಟಿರುತ್ತಾರೆ.
Shimoga News ಆದರೆ 14/10/2024 ರಂದು ಶಿವಮೊಗ್ಗ ಸಿಟಿಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದಾಗ 1 ಮತ್ತು 2 ನೇ ಎದುರುದಾರರು ಮತ್ತು ಏಜೆಂಟರು ಜೆಸಿಬಿಯನ್ನು ತಮ್ಮ ವಶಕ್ಕೆ ಪಡೆದಿರುತ್ತಾರೆ. ತದನಂತರ ದೂರುದಾರರು ಎದುರುದಾರರ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಉಳಿಕೆ ಇಎಂಐ ಗಳನ್ನು ಪಾವತಿಸಲು ಹೇಳಿರುತ್ತಾರೆ. ಅದರಂತೆ ರೂ.50,000 ಪಾವತಿಸಿ ಜೆಸಿಬಿಯನ್ನು ಕೊಡಲು ಕೇಳಿರುತ್ತಾರೆ. ಆದರೂ ಎದುರುದಾರರು ಜೆಸಿಬಿ ಯನ್ನು ದೂರುದಾರರಿಗೆ ನೀಡಿರುವುದಿಲ್ಲ. 1 ಮತ್ತ 2ನೇ ಎದುರುದಾರರು ದಿ:16/12/2024 ರಂದು ಪತ್ರ ಬರೆದು ನಿಮ್ಮ ಜೆಸಿಬಿಯನ್ನು ಹರಾಜು ಮೂಲಕ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ. 1 ಮತ್ತು 2 ನೇ ಎದುರುರಾರರು ದೂರುದಾರರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ ಜೆಸಿಬಿ ಯನ್ನು ವಶಕ್ಕೆ ಪಡೆದು ಹರಾಜು ಮೂಲಕ ಮಾರಾಟ ಮಾಡಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವಂತಹ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಶೀಲಿಸಿ, ವಾದ-ವಿವಾದಗಳನ್ನು ಆಲಿಸಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಎದುರುದಾರರು ದೂರುದಾರರಿಗೆ ಕಾನೂನು ರೀತಿಯಲ್ಲಿ ನೋಟಿಸ್ ನೀಡದೇ ಜೆಸಿಬಿಯನ್ನು ವಶಕ್ಕೆ ಪಡೆದು ಮಾರಾಟ ಮಾಡಿರುವುದಕ್ಕೆ ಯಾವುದೇ ದಾಖಲಾತಿಗಳನ್ನು ಸಲ್ಲಿಸದಿರುವುದರಿಂದ ಸೇವಾ ನ್ಯೂನ್ಯತೆ ವಹಿಸಿರುತ್ತಾರೆ ಎಂದು ತೀರ್ಮಾನಿಸಿ, 1 ಮತ್ತು 2 ನೇ ಎದುರುದಾರರು ದೂರುದಾರರಿಂದ ಈ ಆದೇಶವಾದ 45 ದಿನಗಳ ಒಳಗೆ 2 ಇಎಂಐ ಗಳನ್ನು ಪಡೆದು ಜೆಸಿಬಿ ಯನ್ನು ದೂರುದಾರರ ವಶಕ್ಕೆ ನೀಡತಕ್ಕದ್ದು. ತಪ್ಪಿದ್ದಲ್ಲಿ 1 ಮತ್ತು 2 ನೇ ಎದುರುದಾರರು ದೂರುದಾರರಿಗೆ ಪ್ರತಿ ದಿನಕ್ಕೆ ರೂ.2000 ಗಳನ್ನು ಆದೇಶವಾದ ದಿನದಿಂದ ಜೆಸಿಬಿ ಯನ್ನು ವಶಕ್ಕೆ ಕೊಡುವವರೆಗೆ ಪಾವತಿಸತಕ್ಕದ್ದು. ಹಾಗೂ ರೂ.2,10,000 ಗಳನ್ನು ಮಾನಸಿಕ ವೇದನೆಗಾಗಿ, ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರಂತೆ ಬಡ್ಡಿಯನ್ನು ಸೇರಿಸಿ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದೆಂದು ಹಾಗೂ 3 ನೇ ಎದುರುದಾರರ ವಿರುದ್ದ ದೂರನ್ನು ವಜಾ ಮಾಡಿದೆ ಎಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ದಿ:13/8/2025 ರಂದು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...