ಭಾಗ 2. ಕೆಳದಿ ನಾನು ಮೊದಲೇ ಹೇಳಿದಂತೆ ಇದು ಮಲೆನಾಡಿಗರ ಆತ್ಮ, ಕೆಳದಿ ಎಂಬ ಹೆಸರೇ ರೋಮಾಂಚಕ, ದಟ್ಟ ಅಡವಿ ಮಲೆನಾಡಿನ ಪುಟ್ಟ ಪಾಳೆಯವೊಂದು ಹುಟ್ಟಿದ್ದು ಅಖಂಡ ಭಾರತದಲ್ಲೇ ಹೆಸರಾಗಿದ್ದು ಬಹುಶಃ ಈ ಪರಿಯಾಗಿ ಕೆಳದಿ ಸಂಸ್ಥಾನವೊಂದು ಸಾಮ್ರಾಜ್ಯವಾಗಿ ಬೆಳೆಯುತ್ತದೆಂಬ ಕಲ್ಪನೆ ಕೆಳದಿಯ ಸ್ಥಾಪಕರಾದ ಚೌಡಪ್ಪ ನಾಯಕರಿಗೂ, ಭದ್ರಪ್ಪನಾಯಕರಿಗೂ ಇರಲಿಲ್ಲವೆಂದು ಅನಿಸುತ್ತದೆ. ತಮ್ಮಷ್ಟಕ್ಕೇ ತಾವು ಮಲೆನಾಡಿನ ಪುಟ್ಟ ಪಾಳೆಯವೊಂದನ್ನು ಸ್ಥಾಪಿಸಿ ದೂರ ದೇಶದಲ್ಲೂ ಪ್ರಸಿದ್ದಿ ಪಡೆಯಿತೆಂದರೆ ಅದಕ್ಕೆ ಪ್ರಾಕೃತಿಕವಾಗಿ, ದೈವಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಆತ್ಮಬಲ ತುಂಬಿದ್ದು ನೀಲಕಂಠೇಶ್ವರ ರಾಮೇಶ್ವರನೆಂಬ ನಂಬಿಕೆ. ಚೌಡಪ್ಪನಾಯಕರು ಶಕ ವರುಷ ೧೨೨೪ ರಲ್ಲಿ ಸಿದ್ಧಾರ್ಥ ಸಂವತ್ಸರದ ಮಾಘ ಶುದ್ಧ ತದಿಗೆಯಂದು ಪಟ್ಟಾಭಿಷಿಕ್ತರಾಗಿ ಕೆಳದಿಯಲ್ಲಿ ಅರಮನೆಯನ್ನು, ಇಕ್ಕೇರಿಯಲ್ಲಿ ಕೋಟೆಯೊಂದನ್ನೂ ನಿರ್ಮಾಣ ಮಾಡಿದರು. Klive Special Article ಚೌಡಪ್ಪನಾಯಕರಾದಿಯಾಗಿ ಕೆಳದಿಯನ್ನು, ನಂತರ ಬಿದನೂರನ್ನು 16 ರಾಜರು, ಇಬ್ಬರು ರಾಣಿಯರು(ಚೆನ್ನಮಾಜಿ, ವೀರಮ್ಮಾಜಿ,) ಆಳ್ವಿಕೆ ನಡೆಸಿದರು. ಪ್ರಕೃತಿ ಸೌಂದರ್ಯ, ಬೆಟ್ಟಗುಡ್ಡಗಳು, ದಟ್ಟ ಕಾಡುಗಳು, ಕಣಿವೆಗಳಿಂದ ಕೂಡಿದ ಕೆಳದಿ ಅಭೇದ್ಯವಾಗಿತ್ತು, ಮಹಾಯೋಧರೂ, ಅಪ್ರತಿಮ ಸಾಹಸಿಗರೂ, ವೀರರೂ ಆಗಿದ್ದ ಕೆಳದಿಯ ಅರಸರು, ಕೋಟೆ, ಸುರಂಗಗಳ ನಿರ್ಮಿಸಿ, ನೂರಾರು ದೇವಾಯಲದ ನಿರ್ಮಾಣ, ನಾಲ್ಕು ಸಾವಿರ ಕೆರೆಗಳ ನಿರ್ಮಾಣ ಕಾರ್ಯವನ್ನು ಮಾಡಿ ಕೃಷಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಲ್ಲದೆ ಕೆಳದಿ ರಾಜ್ಯದಲ್ಲಿ ಯಾವುದೇ ಒಬ್ಬ ಪ್ರಜೆಯೂ ಹಸಿವಿನಿಂದ ಮಲಗಬಾರದೆಂದು ದಾಸೋಹ, ಗಂಜಿಕೇಂದ್ರದ ನಿರ್ಮಾಣ ಮಾಡಿದ್ದರು. ಯುದ್ದತಂತ್ರದಲ್ಲಿ, ರಾಯಭಾರಿಯಾಗಿ, ಗೂಢಚಾರಿಕೆಯಲ್ಲಿ ನಿಪುಣರೂ ಆಗಿದ್ದ ಕೆಳದಿಯ ಅರಸು ಒಟ್ಟು 263 ಸುಧೀರ್ಘ ಕಾಲದ ಇತಿಹಾಸವನ್ನು ನಿರ್ಮಿಸಿದರು. ಇದರಲ್ಲಿ ಮೊದಲಿಗರಾಗಿ ದೊಡ್ಡಸಂಕಣ್ಣನಾಯಕರದ್ದು ಬಹುದೊಡ್ಡ ಕೊಡುಗೆ ಇದ್ದು ಅದನ್ನು ಮುಂದೆ ತಿಳಿಯೋಣ.
Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ವಿವರಣೆ: ದಿಲೀಪ್ ನಾಡಿಗ್. ಶಿವಮೊಗ್ಗ
Date:
