Rotary Club Shimoga ಮಕ್ಕಳು ಉತ್ತಮ ವ್ಯಕಿತ್ವ ರೂಢಿಸಿಕೊಳ್ಳುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಚ್.ಎಲ್.ರವಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ನಗರದ ಗೋಪಾಳ ಬಡಾವಣೆಯಲ್ಲಿರುವ ರಾಜರಾಜೇಶ್ವರಿ ಶಾಲೆಯಲ್ಲಿ ಹೊಸ ಇಂಟರಾಕ್ಟ್ ಕ್ಲಬ್ ಪ್ರಾರಂಭ ಹಾಗೂ ಉಚಿತವಾಗಿ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಇಂಟರಾಕ್ಟ್ ಕ್ಲಬ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಸಮಯ ಪ್ರಜ್ಞೆ, ಶಿಸ್ತು, ನಾಯಕತ್ವ ಗುಣ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಡಾ. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲ್ಲಿನ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಎಲ್ಲ ಮಕ್ಕಳಿಗೆ ತಪಾಸಣೆ ನಡೆಸಿ ಟೂತ್ ಬ್ರಶ್, ಪೇಸ್ಟ್ ವಿತರಿಸಲಾಯಿತು. ಡ್ರಗ್ಸ್ ಗುಟ್ಕಾ ಮಾದಕ ವಸ್ತುಗಳಿಂದ ದೂರ ಇರುವಂತೆ ತಿಳಿಸಿದರು.
Rotary Club Shimoga ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್, ಪೆನ್ಸಿಲ್ ಇತ್ಯಾದಿ ಸಾಮಗ್ರಿಗಳನ್ನು ವಿತರಿಸಲಾಯಿತು. ಪ್ರಕಾಶ್ ಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಂಟರಾಕ್ಟ್ ವೈಸ್ ಚೇರ್ಮನ್ ಮುಸ್ತಾಕ್ ಅಲಿ ಶಾ ಅವರು ಇಂಟರಾಕ್ಟ್ ಕ್ಲಬ್ ನೂತನ ಅಧ್ಯಕ್ಷ ದರ್ಶನ್ ಅವರಿಗೆ ಪದವಿ ಪ್ರಮಾಣ ನೆರವೇರಿಸಿದರು. ರಾಜರಾಜೇಶ್ವರಿ ಪ್ರೌಢಶಾಲೆ ಮುಖ್ಯಶಿಕ್ಷಕರು, ಸಹಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಜೋನಲ್ ಲೆಫ್ಟಿನೆಂಟ್ ರಂಗರಾಜನ್, ವಲಯ ಸಂಯೋಜಕ ಸೂರ್ಯನಾರಾಯಣ ಉಡುಪ, ಯೂತ್ ಸರ್ವಿಸ್ ನಿರ್ದೇಶಕ ಪೀರು ಮಲ್ನಾಡ್, ಸ್ವಪ್ನ, ಸ್ಮಿತಾ, ಕಾರ್ಯದರ್ಶಿ ರಶ್ಮಿ ಎಸ್ ಆರ್ ಮತ್ತಿತರರು ಉಪಸ್ಥಿತರಿದ್ದರು.
Rotary Club Shimoga ಇಂಟರ್ಯಾಕ್ಟ್ ಕ್ಲಬ್ ಚಟುವಟಿಕೆಯಿಂದ ಮಕ್ಕಳಲ್ಲಿ ಸಮಯ ಪ್ರಜ್ಞೆ,ನಾಯಕತ್ವ ಗುಣ ಬೆಳವಣಿಗೆ-ಎಚ್.ಎಲ್.ರವಿ.
Date:
