Klive Special Article ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣ ಪರಮಾತ್ಮನ
ಭಕ್ತಿಯ ಸ್ಮರಣೆ ಮತ್ತು ಪಾದಪದುಮಗಳಿಗೆ ನಮನಗಳಿಂದ ಅರ್ಚನೆ.
ಉಡುಪಿಯಲಿ ಬಾಲಕೃಷ್ಣಹೀಗೆ ನಿಂತಿದ್ದಾನೆ.
ಕೈಯಲ್ಲಿ ಕಡಗೋಲು ಹಿಡಿದಿದ್ದಾನೆ.
ಮಜ್ಜಿಗೆ ಕಡೆಯಲು ಅಲ್ಲ.ನಮ್ಮಲ್ಲಿರುವ ಅಜ್ಞಾನವನ್ನು ಕಡೆದು ಜ್ಞಾನವೆಂಬೋ ಬೆಣ್ಣೆಯು ಹೊರಬರಲು.
ನಾನು,ನನ್ನದು ಎನ್ನುವ ಬಂಧನವ ಕಿತ್ತುಹಾಕು
ನನ್ನೊಡೆಯಾ.ಕಡೆಗಣಿಸಬೇಡ ಸ್ವಾಮಿ ಈ ನಿನ್ನ
ಮಕ್ಕಳ ಕೋರಿಕೆಯನ್ನು.
ಶರಧಿ ಶಯನನಾದ ನಿನಗೆ,.ನಾನು ಎರಡೂ ಕೈಗಳಿಂದ ನಿನ್ನ ಪಾದ ಹಿಡಿದು ಬೇಡಿಕೊಳ್ಳುತ್ತಿರುವೆನು ಗೋವಿಂದ.ಈಸಂಸಾರಬಂಧನವನ್ನುತರಿದುಹಾಕು.ಶಾಶ್ವತವಲ್ಲದಮೋಹವನ್ನು ದೂರಮಾಡು.
ನನ್ನಲ್ಲಿರುವ ಷಡ್ವೈರಿಗಳನ್ನು ನಾಶಮಾಡುಗೋವಿಂದ.
ನಿನ್ನಲ್ಲಿ ಭಕ್ತಿಮಾಡುವ ಮನಸ್ಸನ್ನು ಕೊಟ್ಟು ಕಾಪಾಡು
ಜನಾರ್ಧನ.
Klive Special Article ನಿನ್ನ ಸ್ಮರಣೆ ಮಾಡಿ ಮತ್ತೆಮತ್ತೆಮಾಡಿ,ನೈವೇದ್ಯಕ್ಕೆಂದು ಚೆನ್ನಾಗಿ ಮಾಗಿರುವ ಹಣ್ಣನ್ನು ತಂದಿರುವೆ,ಇದೆಲ್ಲವೂ ನನ್ನದಲ್ಲ,ನೀನೇ ಕೊಟ್ಟದ್ದು ನಿನಗೇ ಅರ್ಪಿಸುತ್ತಿದ್ದೇನೆ.
ನಿನ್ನ ಶಿಖೆಯಲ್ಲಿ ನವಿಲುಗರಿ,ಪಾದಕ್ಕೆ ಘಿಲ್ ಘಿಲ್ ಶಬ್ದಮಾಡುವಗೆಜ್ಜೆಗಳು,ಸೊಂಟಕ್ಕೆಮುತ್ತಿನೊಡ್ಯಾನದಿಂದ ಶೋಭಿತನಾಗಿರುವಜಗದೊಡೆಯ ನನ್ನವನು ನೀನುಚೆಲುವಚೆನ್ನಿಗರಾಯನಾದ ಶ್ರೀಹರಿ. ಇಂತಹಚೆಲುವಶ್ರೀಕೃಷ್ಣನನ್ನು(ವೃಂದಾವನವಿಹಾರಿ)ಶ್ರೀಕೃಷ್ಣಜಯಂತಿಯಂದು ಭಕ್ತಿಯಿಂದ ನಮ್ಮ ತಪ್ಪುಗಳನ್ನೆಲ್ಲಾ ಮನ್ನಿಸಿ,ಎಲ್ಲರನ್ನೂ ಕಾಪಾಡು ಎಂದು ಪ್ರಾರ್ಥಿಸೋಣ.
“ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ
ಎನಬಾರದೆ”.
