Sunday, December 14, 2025
Sunday, December 14, 2025

Klive Special Article ಶ್ರೀರಾಘವೇಂದ್ರ ಪ್ರಿಯ ಶ್ರೀಸುಜ್ಞಾನೇಂದ್ರ ತೀರ್ಥರು ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

Date:

Klive Special Article “ಸುಧಾಸಾರಾರ್ಥ ತತ್ತ್ವಜ್ಞಂ ಸುರದೃಮಸಮಂ ಸತಾಂ/
ಸುರಾಧಿಪ ಗುರುಪ್ರಖ್ಯಂ ಸುಜ್ಞಾನೇಂದ್ರ ಗುರುಂಭಜೇ//
ಓಂ…ಓಂ….ಓಂ

ಇದು ಓಂ ಶಬ್ದ ಶ್ರೀರಂಗಪಟ್ಟಣದ ಕಾವೇರಿ
ನದಿಯಲ್ಲಿದ್ದ ಕಲ್ಲಿನಿಂದ ಕೇಳಿಬರುತ್ತಿದ್ದ
“ಓಂ” ಶಬ್ದದ ಮಂಗಳ ಧ್ವನಿ.
ನಿತ್ಯ ಕಾವೇರಿನದಿಯಲ್ಲಿ ಬಟ್ಟೆಒಗೆಯುವ
ಕಾಯಕ ಮಾಡುತ್ತಿದ್ದ ವ್ಯಕ್ತಿಗೆ ಒಂದು ದಿನ
ನದಿಯ ಕಲ್ಲಿನ ಮೇಲೆ ಬಟ್ಟೆ ಒಗೆಯುತ್ತಿದ್ದಾಗ
ಪ್ರತಿ ಬಟ್ಟೆ ಒಗೆತಕ್ಕೂ ಕಲ್ಲಿನಿಂದ “ಓಂ” ಶಬ್ದ
ಕೇಳಿ ಬರುತ್ತಿತ್ತು.ಅವನು ಆದಿನ ಕಲ್ಲಿಗೆ ಭಕ್ತಿ
ಯಿಂದ ಕೈಮುಗಿದು ಹೋಗುತ್ತಾನೆ. ಆ ದಿನ ರಾತ್ರಿ ರಾಯರು ಅವನ ಕನಸಿನಲ್ಲಿ ಆ ಶಿಲೆಯನ್ನು ಆ ಊರಿನ ಪಂಡಿತರೊಬ್ಬರಿಗೆ ತಲುಪಿಸುವಂತೆ ತಿಳಿಸುತ್ತಾರೆ.ಅದೇ ದಿನ ಪಂಡಿತರಿಗೂ ಕನಸಿನಲ್ಲಿ ಬಟ್ಟೆ ಒಗೆಯುವವನು ತಂದು ಕೊಡುವ ಶಿಲೆಯನ್ನು ನಂಜನಗೂಡಿನಲ್ಲಿರುವ ಮಠದ ಪೀಠಾಧಿಪತಿಗಳಿಗೆ ತಲುಪಿಸುವಂತೆ ಸೂಚಿಸುತ್ತಾರೆ. ಶ್ರೀರಾಯರ ಚಿತ್ರ ಮೂಡಿರುವ ಆಶಿಲೆಯು ಪಂಡಿತರಿಂದ ಶ್ರೀಮಠದ ಪೀಠಾಧಿಕಾರಿಗಳಿಗೆ ತಲುಪುತ್ತದೆ.
ಆಪೀಠಾಧಿಕಾರಿಗಳೇ ಶ್ರೀಸುಜ್ಞಾನೇಂದ್ರ ತೀರ್ಥರು ಶ್ರೀಸುಜ್ಞಾನೇಂದ್ರ ತೀರ್ಥರು ಮಂತ್ರಾಲಯ ಕ್ಷೇತ್ರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೀಠದಲ್ಲಿ ಶ್ರೀರಾಯರ ನಂತರ 12 ನೆಯ ಯತಿಗಳಾಗಿ 25 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನಾಳಿದ ಯತಿಕುಲ ಚಕ್ರವರ್ತಿಗಳು.
ಜ್ಞಾನಿಗಳು ಹೇಳುವ ಹಾಗೆ ಸುಜ್ಞಾನೇಂದ್ರ ತೀರ್ಥರು ಶ್ರೀರಾಯರಿಗೆ ಬಹಳ ಪ್ರೀತಿಪಾತ್ರರಾಗಿದ್ದ ಯತಿಗಳು.ಇವರು ಮಹಾ ತಪಸ್ವಿಗಳು.ಇವರ ಪರಮಗುರುಗಳಾದ “ಶ್ರೀವಾದೀಂದ್ರತೀರ್ಥರು”
“ಗುರುಗುಣ ಸ್ತವನ”ವೆಂಬ ಸುಂದರ ಕಾವ್ಯವನ್ನು ಬರೆದಿದ್ದಾರೆ. ಶ್ರೀವಾದೀಂದ್ರ ತೀರ್ಥರಪೂರ್ವಾಶ್ರಮದ ಪುತ್ರರಾಗಿದ್ದ ಜಯರಾಮಾಚಾರ್ಯರು(ಶ್ರೀರಾಯರ ಮಠದ ಪರಂಪರೆಯಲ್ಲಿ ಬರುವ ಶ್ರೀಧೀರೇಂದ್ರತೀರ್ಥರು)ಆ ಪದ್ಯ ಸಂಕಲನಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾರೆ.
ಶ್ರೀಧೀರೇಂದ್ರತೀರ್ಥರ ಪೂರ್ವಾಶ್ರಮದ ಮರಿ ಮೊಮ್ಮಗನೇ” ಶ್ರೀಸುಜ್ಞಾನೇಂದ್ರತೀರ್ಥರು”. ತಮ್ಮಲ್ಲಿ ವೇದಾಧ್ಯಯನಕ್ಕೆ ಬಂದ ಅನೇಕ ಶಿಷ್ಯರಿಗೆ ಗುರುರಾಯರ ಚಂದ್ರಿಕಾಪ್ರಕಾಶ,ಪರಿಮಳ,ಸುಧಾ ಮುಂತಾದ ಶ್ರೇಷ್ಠ ಗ್ರಂಥಗಳಪಾಠಮಾಡಿಸುಮಾರು 9ಸಾರಿಗ್ರಂಥಗ ಳಪಾಠದ ಮಂಗಳ ಮಹೋತ್ಸವವನ್ನುಆಚರಿಸಿದ ಕೀರ್ತಿ ಶ್ರೀಸುಜ್ಞಾನೇಂದ್ರ ತೀರ್ಥರಿಗೆ ಸಲ್ಲುತ್ತದೆ.
ಶ್ರೀರಾಯರು ತಮ್ಮಲ್ಲಿ ಮುಕ್ತಿಯನ್ನು ಬಯಸಿ ಬಂದ ಭಕ್ತನಿಗೆ ಸುಜ್ಞಾನೇಂದ್ರತೀರ್ಥರ ಮೂಲಕ ಮೋಕ್ಷ ಕೊಡಿಸುತ್ತಾರೆ.
ನಿತ್ಯದಂತೆ ಒಂದುದಿನ ಶ್ರೀಸುಜ್ಞಾನೇಂದ್ರತೀರ್ಥರು ಜಪದ ಪೀಠದ ಮೇಲೆಕುಳಿತು ಧ್ಯಾನಾಸಕ್ತರಾಗಿದ್ದರು.ಧ್ಯಾನ ಮುಗಿಸಿ ಕಣ್ಣು ಬಿಟ್ಟಾಗ ಅವರ ದೃಷ್ಟಿಗೆ ಬಿದ್ದ ಗುಬ್ಬಚ್ಚಿಯೊಂದು ತಕ್ಷಣವೇ ಸುಟ್ಟುಬೂದಿಯಾಗುತ್ತದೆ. ಶ್ರೀಗುರುಗಳ ದರ್ಶನಕ್ಕಾಗಿಮಠಕ್ಕೆ ಬಂದ ಭಕ್ತರೆಲ್ಲರೂ ಇದನ್ನು ನೋಡಿ ಬೆರಗಾಗುತ್ತಾರೆ.
ಶ್ರೀಗಳವರು ಈ ಪ್ರಸಂಗದಿಂದ ಬಹಳಷ್ಟು ವಿಚಲಿತ
ರಾಗುತ್ತಾರೆ.ಅಯ್ಯೋ!ಎಂತಹ ಕೆಲಸವಾಯಿತಲ್ಲ,ನ ನ್ನಿಂದಾಗಿ ಒಂದು ಮೂಕ ಪಕ್ಷಿಯ ಪ್ರಾಣ ಹಾನಿ ಆಯಿತಲ್ಲ ಎಂದುನೊಂದುಕೊಂಡರು.ಅಂದು ಭಿಕ್ಷೆಯನ್ನ ಸ್ವೀಕರಿಸದೇ ಮೌನಕ್ಕೆಶರಣಾಗಿಧ್ಯಾನಕ್ಕೆ ಮೊರೆಹೋಗುತ್ತಾರೆ.
ಇಡೀ ಮಠದಲ್ಲಿ ಮೌನವಾತಾವರಣವಿಯುತ್ತದೆ. ಅಂದು ರಾತ್ರಿರಾಯರು ಸ್ವಪ್ನದಲ್ಲಿ ಪ್ರತ್ಯಕ್ಷರಾಗಿ ಅವರನ್ನುಸಂತೈಸಿದರು. ಸುಜ್ಞಾನೇಂದ್ರತೀರ್ಥರಿಗೆ”ಸುಜ್ಞಾನೇಂದ್ರ!ನನ್ನ ಭಕ್ತನೊಬ್ಬ ಈ ಹಿಂದೆ ಸರ್ಪರೂಪದಿಂದ ನನ್ನಬಳಿಗೆ ಬಂದು ತನ್ನಸದ್ಗತಿಗಾಗಿ ಬೇಡಿಕೊಂಡನು”.ಆದರೆ ಅವನಕರ್ಮವಿನ್ನೂ ಸವೆದಿಲ್ಲವಾದ ಕಾರಣ ಮುಂದೆ ನಮ್ಮ ಶಿಷ್ಯನ ಮೂಲಕ ನಿನಗೆ ಆಗಿನ “ಗುಬ್ಬಚ್ಚಿ”ರೂಪದಿಂದ ಮುಕ್ತಿ ಕರುಣಿಸುವೆವು ಎಂದು ಹೇಳಿದ್ದರೆಂತ ತಿಳಿಸುತ್ತಾರೆ.ಈಗ ನಿನ್ನ ದೃಷ್ಟಿ ಬಿದ್ದ ಕೂಡಲೇ ಭಸ್ಮವಾದ ಗುಬ್ಬಚ್ಚಿಯು ಆ ನನ್ನ ಭಕ್ತನೇ ಎಂದುತಿಳಿಸುತ್ತಾರೆ. ಅವನಿಗೆ ನಿನ್ನಿಂದ ಮುಕ್ತಿ ದೊರಕಿತು ಎಂದು ಹೇಳಿ ಅದೃಶ್ಯರಾಗುತ್ತಾರೆ. ಆಗ ಮೈಸೂರು ಸಾಮ್ರಾಜ್ಯವನ್ನು ಶ್ರೀ ಮುಮ್ಮಡಿ ಕೃಷ್ಣರಾಜಒಡೆಯರ್ರವರು ಆಳುತ್ತಿದ್ದರು. ಮಹಾರಾಜರಿಗೆ ಶ್ರೀಗಳವರಲ್ಲಿ ಅನನ್ಯವಾದ ಭಕ್ತಿ ಮತ್ತು ಗೌರವಗಳನ್ನಿಟ್ಟುಕೊಂಡಿದ್ದರು. ಶ್ರೀಸುಜ್ಞಾನೇಂದ್ರತೀರ್ಥರ ಕಾಲದಲ್ಲಿ ಪಂಡಿತರೊಬ್ಬರು ಶ್ರೀವ್ಯಾಸರಾಯರ”ಚಂದ್ರಿಕಾ” ಗ್ರಂಥವನ್ನು ಖಂಡಿಸಿ ಟೀಕಾ ಗ್ರಂಥವನ್ನು ಬರೆದಿದ್ದರಂತೆ.
Klive Special Article ಶ್ರೀಸುಜ್ಞಾನೇಂದ್ರತೀರ್ಥರು ಪಂಡಿತರ ಖಂಡನಾ ಗ್ರಂಥಕ್ಕೆ ಉತ್ತರವಾಗಿ ಖಂಡನಾ ಖಂಡನಗ್ರಂಥವನ್ನು ರಚಿಸುತ್ತಾರೆ.ಇವರು ರಚಿಸಿದ ಆ ಅಸಾಧಾರಣ ಗ್ರಂಥವೇ “ಚಂದ್ರಿಕಾಭೂಷಣಮ್”ಎಂಬಗ್ರಂಥ .ಸುಜ್ಞಾನೇಂದ್ರ ತೀರ್ಥರ ಕಾಲದಲ್ಲಿ ರಾಜ್ಯ ಬ್ರಿಟಿಷರ ಆಡಳಿತದಲ್ಲಿತ್ತು. ಒಂದುಸಂದರ್ಭದಲ್ಲಿ ಶ್ರೀಗಳವರು ಮಠದ ಸಂಬಂಧದ ವಿಷಯದಲ್ಲಿ ಬ್ರಿಟಿಷ್ಅ ಧಿಕಾರಿಯನ್ನುಕಾಣಬೇಕಾಗಿಬರುತ್ತದೆ.
ಶ್ರೀಗಳವರೇ ಬ್ರಿಟಿಷ್ ಅಧಿಕಾರಿಯನ್ನು ಕಾಣಲು ಹೋಗಬೇಕೆಂದಿದ್ದಾಗ,ಆಅಧಿಕಾರಿಯೇ ಶ್ರೀಗಳವರ ಬಳಿ ಬಂದು ಭಕ್ತಿಯಿಂದ ನಮಸ್ಕಾರ ಮಾಡಿ ಕೆಲಸ
ಮಾಡಿ ಕೊಟ್ಟುಹೋಗುತ್ತಾನೆ. ಇದು ಶ್ರೀಗಳ ತಪಃಶಕ್ತಿಯ ಮಹಿಮೆಯಿಂದಾದ ಕೆಲಸ.ಶ್ರೀಕಂಠೇಶ್ವರನ ದಿವ್ಯಕ್ಷೇತ್ರವಾದ ನಂಜನಗೂಡಿನಲ್ಲಿ ಶ್ರೀರಾಘವೇಂದ್ರಸ್ವಾಮಿಗಳವರು ಬಂದು ನೆಲೆಸಿದ್ದರ ಹಿಂದೆ ಒಂದು ರೋಚಕ ಕಥೆಯಿದೆ.
ಸುಜ್ಞಾನೇಂದ್ರತೀರ್ಥರು ತಮ್ಮ ಅಂತಿಮ ಕಾಲವನ್ನು ಮಂತ್ರಾಲಯದಲ್ಲಿ ಗುರುರಾಯರ ಬಳಿಯಲ್ಲೇ ಕಳೆಯಲು ಹಂಬಲಿಸಿದ್ದರು. ಶ್ರೀಗಳಿಗೆ ರಾಯರು ಸ್ವಪ್ನದ ಮೂಲಕ” ನೀನಿದ್ದಲ್ಲಿಗೆ ನಾನೇ ಬರುವೆ”ಎಂದು ಸೂಚಿಸುತ್ತಾರೆ.
ಶ್ರೀರಂಗಪಟ್ಟಣದ ಕಾವೇರಿಯಮಡಿಲಲ್ಲಿ ದೊರಕಿದ ಶಿಲಾಪ್ರತೀಕವೇ ಶ್ರೀರಾಯರ ಪ್ರತಿರೂಪ.ಈ ಶಿಲಾ ಪ್ರತೀಕವನ್ನು ಮುಮ್ಮಡಿ ಕೃಷ್ಣ ರಾಜ ಒಡೆಯರ್ರವರ ನೇತೃತ್ವದಲ್ಲಿ ಶ್ರೀಸುಜ್ಞಾನೇಂದ್ರ ತೀರ್ಥರಿಂದ ನಂಜನಗೂಡಿನಲ್ಲಿ ಪ್ರತಿಷ್ಠಾಪನೆಯಾಗುತ್ತದೆ. ನಂಜನಗೂಡಿನಲ್ಲಿ ಮಠದ ಕಟ್ಟಡ ನಿರ್ಮಾಣಗೊಂಡು ಶ್ರೀರಾಯರ ಶಿಲಾ ಪ್ರತೀಕ ಪ್ರತಿಷ್ಠಾಪನೆಯ ಜವಾಬ್ದಾರಿ ಮುಮ್ಮಡಿಕೃಷ್ಣ ರಾಜಒಡೆಯರ್ರವರದ್ದಾಗಿರುತ್ತೆ. ಶ್ರೀಸುಜ್ಞಾನೇಂದ್ರತೀರ್ಥರು ಶ್ರೀಗುರುರಾಯರಲ್ಲಿ ತಮಗೆ ಮಂತ್ರಾಲಯದಲ್ಲಿ ಸ್ಥಾನವನ್ನುಕೇಳುತ್ತಾರೆ. ಶ್ರೀರಾಯರು ತಮ್ಮ ಪಕ್ಕದಲ್ಲಿಯೇ ಸ್ಥಾನ ಬೇಡಿದ ಸುಜ್ಞಾನೇಂದ್ರ ತೀರ್ಥರಿಗೆತ ಮ್ಮಆರಾಧನೆಯ ಮರುದಿನವನ್ನೇ ಕೊಡುತ್ತಾರೆ.ಹಾಗಾಗಿಭಕ್ತರು ತಮ್ಮಆರಾಧನೆಯತರು ವಾಯಶ್ರೀಸುಜ್ಞಾನೇಂದ್ರತೀರ್ಥರ ಆರಾಧನೆಯನ್ನು ನೆರವೇರಿಸುವಂತೆ ಅನುಗ್ರಹಿಸಿದ್ದಾರೆ.
ಶ್ರೀಸುಜ್ಞಾನೇಂದ್ರತೀರ್ಥರು ಕ್ರಿ ಶ 1861ರ ಶ್ರಾವಣ ಬಹುಳ ಚತುರ್ಥಿಯಂದುನಂಜನಗೂಡಿನಲ್ಲಿ ಹರಿಪದವನ್ನೈದಿದರು.
ಶ್ರೀರಾಘವೇಂದ್ರಸ್ವಾಮಿಗಳವರು ಹೇಳಿದಂತೆ ಶ್ರೀರಾಯರ ಆರಾಧನೆಯು ಮುಗಿದ ನಂತರಚತುರ್ಥಿ
ಯಂದು ಶ್ರೀಸುಜ್ಞಾನೇಂದ್ರ ತೀರ್ಥರ ಆರಾಧನೆಯನ್ನು ಆಚರಿಸುತ್ತಾರೆ.
ಶ್ರೀಗಳವರ ಆರಾಧನಾ ಪರ್ವದಿನದಂದು ಭಕ್ತಿಪೂರ್ವಕ ನಮನಗಳನ್ನುಅರ್ಪಿಸಿಅವರಅನುಗ್ರಹಕ್ಕೆ
ಪಾತ್ರರಾಗೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...