ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ
Klive Special Article “ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬದೇ
ಕೆಟ್ಟವರುಂಟೋ”
ಶ್ರೀರಾಘವೇಂದ್ರಗುರುಸಾರ್ವಭೌಮರು 16 ನೇ ಶತಮಾನದ ಸಂತ ಶ್ರೇಷ್ಠರು.ಶ್ರೀ ರಾಘವೇಂದ್ರ ಸ್ವಾಮಿಗಳ ಅನನ್ಯ ಭಕ್ತರು ದೇಶ,ವಿದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ.ಅದರಲ್ಲೂ ದಕ್ಷಿಣಭಾರತದಪ್ರದೇಶಗಳಾದಆಂಧ್ರಪ್ರದೇಶ,
ತಮಿಳುನಾಡುಮತ್ತು ಕರ್ನಾಟಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಗೌತಮಗೋತ್ರದ ಬೀಗಮುದ್ರೆಯ ಮನೆತನದವರಾದ ವೀಣಾಕನಕಾಚಲಭಟ್ಟರೆಂದೇ ಖ್ಯಾತಿ ಪಡೆದವರ ಪುತ್ರರು ತಿಮ್ಮಣ್ಣಭಟ್ಟರು.ಇವರೂ ಕೂಡ ತಮ್ಮ ಪೂರ್ವಜರಂತೆ ಆಚಾರ್ಯರ ಶಾಸ್ತ್ರದಲ್ಲಿ ಹಾಗೂ ವಂಶವಿದ್ಯೆಯಾದ ವೀಣೆಯಲ್ಲಿ ಪ್ರಾವೀಣ್ಯತೆ ಪಡೆದವರು.
ಇವರಸುಪುತ್ರರೇ “ಶ್ರೀವೆಂಕಟನಾಥಾಚಾರ್ಯರು ವೆಂಕಟನಾಥರೇ ಶ್ರೀಸುಧೀಂದ್ರ ತೀರ್ಥಗುರುಗಳಿಂದ ಸನ್ಯಾಸ ದೀಕ್ಷೆ ಪಡೆದು ಶ್ರೀರಾಘವೇಂದ್ರಗುರು ಸಾರ್ವಭೌಮರಾಗಿ ವೇದಾಂತ ಸಾಮ್ರಾಜ್ಯದ ಪೀಠವನ್ನಲಂಕರಿಸಿದ ಯತಿವರೇಣ್ಯರು. ಸನ್ಯಾಸದೀಕ್ಷೆಯನ್ನು ಫಾಲ್ಗುಣ ಶುಕ್ಲಪಕ್ಷದ ದ್ವಿತೀಯಾ ದಿನದಂದು ಶ್ರೀಸುಧೀಂದ್ರತೀರ್ಥರಿಂದಸ್ವೀಕರಿಸುತ್ತಾರೆ.ಈದಿನವನ್ನುಶ್ರೀಗುರುಸಾರ್ವ
ಭೌಮರ ಪಟ್ಟಾಭಿಷೇಕ ಮಹೋತ್ಸವದ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹಾಮಹಿಮರಾದ ಶ್ರೀಗುರುರಾಯರು ಹುಟ್ಟಿದ ಮಂಗಳಕರವಾದ ದಿನವಾದ ಫಾಲ್ಗುಣ
ಶುಕ್ಲಪಕ್ಷದ ಸಪ್ತಮಿಯನ್ನು “ಶ್ರೀರಾಯರ ವರ್ಧಂತಿ” ಉತ್ಸವದಿನವನ್ನಾಗಿಆಚರಿಸಲಾಗುತ್ತದೆ.
ಈ ಒಂದು ವಾರದ ಕಾಲದಲ್ಲಿ ಶ್ರೀರಾಯರಿಗೆ ವಿಶೇಷ ಉತ್ಸವ,ಪೂಜೆ,ಉಪನ್ಯಾಸ,ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ಏರ್ಪಡಿಸಿ “ಶ್ರೀರಾಘವೇಂದ್ರ ಸಪ್ತಾಹ” ಎಂದೂ ಆಚರಿಸುತ್ತಾರೆ.
ಜನರಕಷ್ಟಗಳನಿವಾರಣೆಗೆಮತ್ತುಲೋಕೋದ್ಧಾರಕ್ಕಾಗಿಅವತರಿಸಿದಮಹಾನುಭಾವರು
ಶ್ರೀರಾಘವೇಂದ್ರಸ್ವಾಮಿಗಳು. ಯಾರು ರಾಯರನ್ನು ದೃಢ ಭಕ್ತಿಯಿಂದ ತಮ್ಮ
ಇಷ್ಟಾರ್ಥ,ಸಿದ್ಧಿಗಾಗಿ ಮೊರೆಹೋಗುತ್ತಾರೋ ಅಂತಹವರ ಬೇಡಿಕೆಗಳನ್ನು ಈಡೇರಿಸುವ ಕರುಣಾಮಯಿಗಳು ಶ್ರೀ ಗುರುರಾಯರು. ರಾಯರನ್ನು ನಂಬಿ ಕೆಟ್ಟವರಿಲ್ಲ. “ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ”.ಮನುಷ್ಯನ ಆತ್ಮ ಜ್ಞಾನಕ್ಕೆ ಪ್ರತಿಯೊಬ್ಬರ ಬದುಕಿನಲ್ಲಿ ಓರ್ವ ಗುರುವಿನ ಮಾರ್ಗದರ್ಶನ ಅತ್ಯಗತ್ಯ.
ಅಂತಹ ಗುರುಗಳ ಪಂಕ್ತಿಯಲ್ಲಿ ಅಗ್ರಸ್ಥಾನ ಪಡೆದಿರುವವರು ಶ್ರೇಷ್ಠಗುರುಗಳಾದ ಮಂತ್ರಾಲಯದಶ್ರೀರಾಘವೇಂದ್ರಸ್ವಾಮಿಗಳವರು.ರಾಯರುಓರ್ವ ಮಹಿಮಾ ಪುರುಷರು. ಶ್ರೀರಾಯರುಅವರಪೂರ್ವಾಶ್ರಮದಲ್ಲಿ(ವೆಂಕಟನಾಥರು) ಅವರ ಪತ್ನಿ ಮತ್ತು ಮಗನ ಸಮೇತ ಒಂದು
ಸಮಾರಂಭಕ್ಕೆಹೋಗಿದ್ದಾಗಅವರಿಗೆಆಹ್ವಾನಕೊಟ್ಟವರು ಸರಿಯಾದ ಗೌರವ ಕೊಡದೆ ಅವರಿಗೆ ಗಂಧ ತೇಯುವ ಕೆಲಸವನ್ನು ಕೊಟ್ಟರು.ಗಂಧವನ್ನು ಹಚ್ಚಿಕೊಂಡ ಬ್ರಾಹ್ಮಣರಿಗೆಮೈಯೆಲ್ಲಾ ಉರಿಯಾಗಿ ಒದ್ದಾಟ ಪ್ರಾರಂಭವಾಯಿತು.ಕಾರ್ಯಕ್ರಮ
ನಿರ್ವಾಹಕರಿಗೆತಕ್ಷಣ ಆಗಿರುವ ಪ್ರಮಾದವನ್ನರಿತು ವೆಂಕಟನಾಥರನ್ನುಒದಗಿರುವಈಸಂದಿಗ್ಧಪರಿಸ್ಥಿತಿಯಿಂದ ಪಾರುಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ತಕ್ಷಣ ವೆಂಕಟನಾಥರು ವರುಣಸೂಕ್ತವನ್ನು ಪಠಿಸಿ ಎಲ್ಲರ ಮೈಯಲ್ಲಾದ ಉರಿಯನ್ನು ತಮ್ಮ ಮಂತ್ರ ಶಕ್ತಿಯಿಂದ ಶಮನಗೊಳಿಸುತ್ತಾರೆ. ರಾಯರು ತಮ್ಮಶಿಷ್ಯನೊಬ್ಬನುತನ್ನಕಡುಬಡತನದ ಬಗ್ಗೆ ಅರಿಕೆಮಾಡಿಕೊಂಡಾಗಗುರುಗಳು ಒಂದು ಹಿಡಿ)ಮಂತ್ರಾಕ್ಷತೆಯನ್ನುಕೊಟ್ಟುಆಶೀರ್ವದಿಸುತ್ತಾರೆ.
ಶಿಷ್ಯನು ತನ್ನಮನೆಗೆಹೋಗುವಾಗಕತ್ತಲಾಗಿದ್ದರಿಂದ ದಾರಿಯಲ್ಲಿ ಸಿಕ್ಕ ಒಂದು ಮನೆಯಜಗಲಿಯಮೇಲೆ ತನ್ನ ಮಂತ್ರಾಕ್ಷತೆಯಗಂಟಿನೊಂದಿಗೆ ಮಲಗುತ್ತಾನೆ. ಆ ಮನೆಗೆ ಪಿಶಾಚಿ ಬಾಧೆ ಇರುತ್ತದೆ. ಆ ದಿನವು ಎಂದಿನಂತೆ ಪಿಶಾಚಿ ಬರಲು ಶ್ರೀರಾಯರ
Klive Special Article ಮಂತ್ರಾಕ್ಷತೆ ಪ್ರಭಾವದಿಂದ ಮನೆಯೊಳಗೆ ಹೋಗಲಾಗದೇ ಹೊರಗಡೆಯೇ ಸುಟ್ಟು ಭಸ್ಮ
ವಾಗುತ್ತದೆ.ಅಂದೇ ಆ ಮನೆಯಲ್ಲಿ ಮನೆಯೊಡತಿಗೆ ಮಗು ಹುಟ್ಟುತ್ತದೆ.ಆಮನೆಯಲ್ಲಿ ಮಗು ಹುಟ್ಟುವ ಪ್ರತಿ ಸಂದರ್ಭದಲ್ಲಿಯೂ ಪಿಶಾಚಿಯ ಕಾಟದಿಂದ ಹುಟ್ಟುವ ಮಕ್ಕಳು ಸತ್ತುಹೋಗುತ್ತಿದ್ದವು.
ಆದರೆ ಈ ಬಾರಿ ಮಂತ್ರಾಕ್ಷತೆಯ ಪ್ರಭಾವದಿಂದ
ಹುಟ್ಟಿದ ಮಗು ಬದುಕಿತು,ಪಿಶಾಚಿ ಸುಟ್ಟು ಭಸ್ಮ
ವಾಯಿತು.ಆ ಮನೆಯ ಯಜಮಾನನು ಪಿಶಾಚಿಯ ಬಾಧೆಯನ್ನು ರಾಯರೇ ಶಿಷ್ಯನಮುಖಾಂತರ ಪರಿಹಾರಮಾಡಿದ್ದಾರೆ ಎಂದು ಸಂತೋಷದಿಂದ ಶಿಷ್ಯನಿಗೆ ಗೌರವಾದರಗಳಿಂದ ಸತ್ಕಾರಮಾಡಿ ಕಳಿಸಿಕೊಡುತ್ತಾನೆ.
ಹರಿದಾಸರಲ್ಲಿಅಗ್ರಗಣ್ಯರಾಗಿದ್ದಶ್ರೀಜಗನ್ನಾಥ
ದಾಸರಿಗೂ ಅವರಿಗೆ ಬಂದಿದ್ದವ್ಯಾಧಿಪರಿಹಾರಕ್ಕೆ ದಾರಿ ತೋರಿಸಿದ ಮಹಾನುಭಾವರು . ತಮ್ಮ ಅಪೂರ್ವತಪಃಶಕ್ತಿಯ ಬಲದಿಂದ ದೇಹೀ ಎಂದು ಬರುವ ಭಕ್ತರ ಮನಸ್ಸಿನ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸುವ ಕಲಿಯುಗದ ಕಾಮಧೇನುಶ್ರೀರಾಘವೇಂದ್ರಗುರುಸಾರ್ವ
ಭೌಮರು. ಶ್ರೀಗುರುರಾಯರು ಹುಟ್ಟಿದ್ದು ತಮಿಳುನಾಡಿನ ಭುವನಗಿರಿಯಲ್ಲಿ ಮತ್ತು ಸಶರೀರರಾಗಿ ಬ್ರಂದಾವನ ಪ್ರವೇಶ ಮಾಡಿದ್ದು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ. ಶ್ರೀರಾಘವೇಂದ್ರ ಗುರುಗಳು ಯಾವುದೇ ಒಂದು ಕೋಮು,ಮತ,ಜಾತಿಗೆ ಮಾತ್ರ
ಸೀಮಿತರಾದವರಲ್ಲ.ಇಡೀ ಮಾನವ ಕುಲವನ್ನೇ ಉದ್ಧಾರ ಮಾಡಲು ಭೂಮಿಯಲ್ಲಿ ಅವತರಿಸಿದ
ಯೋಗೀಶ್ವರರು. ಜಾತಿಗಿಂತ ನೀತಿ ಮೇಲು,ಭಕ್ತಿಯೇ ಎಲ್ಲಕ್ಕೂ ಕೊಂಡಿ ಎನ್ನುವ ತತ್ವವನ್ನು ವಿಶ್ವಕ್ಕೆ ಸಾರಿದ ಮಹಾನುಭಾವರು.ಶ್ರೀರಾಯರು ಸಶರೀರರಾಗಿ ಬೃಂದಾವನವನ್ನು ರುಧಿರೋದ್ಗಾರಿ ಸಂವತ್ಸರದ ಶ್ರಾವಣ ಬಹುಳ ದ್ವಿತೀಯ (ಕ್ರಿ.ಶ 1671ನೆ ಆಗಸ್ಟ್ ಮಾಹೆ)ದಂದು ಪ್ರವೇಶ ಮಾಡುತ್ತಾರೆ.
ಈ ವಿಶೇಷ ದಿನವನ್ನು ಶ್ರೀರಾಯರ ಆರಾಧನಾ ದಿನವನ್ನಾಗಿ ಆಚರಿಸಲಾಗುತ್ತದೆ.ಈ ವರ್ಷದ ಶ್ರೀರಾಯರ ಆರಾಧನೆಯು 354ನೇವರ್ಷದ ಆರಾಧನಾ ಮಹೋತ್ಸವವಾಗಿರುತ್ತೆ.ಶ್ರೀರಾಯರ ಆರಾಧನಾಸಂದರ್ಭದಲ್ಲಿ ಭಕ್ತಿಯನಮನಗಳನ್ನು ಅರ್ಪಿಸಿ ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಿ ಅನುಗ್ರಹಿಸುವಂತೆ ಶ್ರೀರಾಯರಲ್ಲಿ ಪ್ರಾರ್ಥಿಸೋಣ.
ಎನ್.ಜಯಭೀಮ್ ಜೊಯ್ಸ್
