Saturday, October 10, 2026
Saturday, October 10, 2026

Sahyadri College ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಬೀಳ್ಕೊಡುಗೆ

Date:

Sahyadri College ಹೃದಯಸ್ಪರ್ಶಿ ಸಾಮೂಹಿಕ ಬೋಳ್ಕೊಡುಗೆ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಬುಧವಾರ ಸಂಜೆ ಕಂಟ್ರೀಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದರು.
ಸಹ್ಯಾದ್ರಿ ಕಾಲೇಜಿನಲ್ಲಿ ಓದಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಇತ್ತೀಚೆಗೆ ನಿವೃತ್ತರಾದ ಐವರನ್ನು ಅಭಿನಂದಿಸಿ, ಹರಸಿ, ನಿವೃತ್ತಿ ಜೀವನಕ್ಕೆ ಬೀಳ್ಕೊಡಲಾಯಿತು.
ಹೊಸನಗರ ಕಾಲೇಜಿನ ಸಹ ಪ್ರಾಧ್ಯಾಪಕ ಹಾಗೂ ವಾಗ್ಮಿ ಡಾ.ಕೆ. ಪ್ರಭಾಕರರಾವ್, ಕುವೆಂಪು ವಿವಿ ಹಿರಿಯ ಸಹಾಯಕ ಎಲ್.ಎನ್. ಶಾಂತರಾಜು, ಬಸವಾನಿಯ ಪಿಯು ಕಾಲೇಜಿನ ಉಪನ್ಯಾಸಕ ನಾಗೇಶ್ ವಿ.ಕೆ., ಕಮ್ಮರಡಿ ಹೈಸ್ಕೂಲ್ ಮುಖ್ಯೋಪಾಧ್ಯಾಯ ಸುರೇಶ್ ಎನ್.ಟಿ., ಕುಂಕುವದ ಸಹಕಾರ ಸಂಘದ ತೇಜಾನಾಯ್ಕ್ ಇವರೆಲ್ಲರೂ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉದ್ಯೋಗ ಪಡೆದು ನಿವೃತ್ತರಾದವರು.

ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್ ಮತ್ತು ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ.ಯ ಎಸ್ಪಿ, ಯುವಕುಮಾರ್ ಹಾಗೂ ಗೆಳೆಯರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಸನ್ಮಾನಿತರಾಗಿ ನಿವೃತ್ತರ ಪರವಾಗಿ ಮಾತನಾಡಿದ ಡಾ.ಕೆ. ಪ್ರಭಾಕರರಾವ್, ಸ್ನೇಹ ಎಂಬುದು ಅತಿ ಮಧುರ. ಅದು ಕಾಲ, ದೇಶವನ್ನೂ ಮೀರಿದ್ದು. ನಾವೆಲ್ಲರೂ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇವೆ. ವೃತ್ತಿ ನಮಗೆ ತೃಪ್ತಿ ತಂದಿದೆ. ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಸಹಜ ಕ್ರಿಯೆ. ನಿವೃತ್ತಿ ನಂತರವೂ ಕ್ರಿಯಾಶೀಲರಾಗಿರೋಣ ಎಂದರು.
ನಿವೃತ್ತಿಯಾದವರನ್ನು ಸನ್ಮಾನಿಸಿ ಮಾತನಾಡಿದ ಡಾ.ಕೆ.ಎನ್. ಮಂಜುನಾಥ್, ನಿವೃತ್ತರಾದ ಎಲ್ಲಾ ಗೆಳೆಯರು ತಮ್ಮ ತಮ್ಮ ವೃತ್ತಿಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಮಾನವೀಯತೆಯೇ ನಿಜವಾದ ಸೇವೆ ಎಂದರು.

ಕೆ.ಎಸ್.ಆರ್.ಪಿ. ಎಸ್ಪಿ ಯುವಕುಮಾರ್ ಮಾತನಾಡಿ, ನಾವೆಲ್ಲರೂ ಸಹ್ಯಾದ್ರಿ ಕಾಲೇಜಿನಲ್ಲಿ ಓದಿದವರು. ಈ ಕಾಲೇಜಿಗೊಂದು ದೊಡ್ಡ ಪರಂಪರೆ ಇದೆ. ನಿವೃತ್ತರಾದವರನ್ನು ಅಭಿನಂದಿಸುವುದು ಒಂದು ಸಂಪ್ರದಾಯ. ಇದು ಸೇವೆ ಸಲ್ಲಿಸಿದ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಗುತ್ತದೆ ಎಂದರು.

ಸರ್ಕಾರಿ ವೃತ್ತಿ ಹಿಡಿಯದೇ ಕೃಷಿ ಕ್ಷೇತ್ರ ಆರಿಸಿಕೊಂಡ ಮಾಳೂರು ಹಿರೇಗೋಡಿನ ಹರಿಯಪ್ಪ ಈ.ಎನ್. ಅವರು ಮಾತನಾಡಿ, ಸ್ನೇಹವೇ ದೊಡ್ಡದು. ಕೃಷಿ ಕ್ಷೇತ್ರ ಒಂದು ಪವಿತ್ರ ಕ್ಷೇತ್ರವಾಗಿದೆ ಎಂದರು.

Sahyadri College ರಾಷ್ಟ್ರೀಯ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಚಿಕ್ಕಪೆಂಚಾಲಯ್ಯ, ಬಸವಾನಿ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಕೆ.ಸಿ., ಗಾಂಧಿಬಜಾರ್ ನ ಗೋಲ್ಡ್ ಸ್ಮಿತ್ ಮೋಹನ್ ಹೆಚ್.ಎನ್., ಆನಂದಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುರೇಶ್ ನಾಯ್ಕ್, ಭದ್ರಾವತಿಯ ಹಳೆನಗರ ಉರ್ದು ಪ್ರೌಢಶಾಲೆಯ ದೈಹಿಕ ಶಿಕ್ಷಕ ಲಕ್ಷ್ಮಣ್, ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಆರುಂಡಿ ಶ್ರೀನಿವಾಸ್ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...