Shimoga News ಉತ್ತಮ ಶಿಕ್ಷಣ ಪಡೆದಲ್ಲಿ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ವಿಕ್ಟೋರಿಯ ಆಸ್ಪತ್ರೆ ಸಹಾಯಕ ಪ್ರಾಧ್ಯಾಪಕ ಡಾ. ವಿವೇಕ್ ಎಸ್. ರೇವಣ್‌ಕರ್ ಹೇಳಿದರು.
ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ದೈವಜ್ಞ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆಯಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಶ್ರದ್ಧೆ, ತಾಳ್ಮೆ ಹಾಗೂ ನಿರಂತರ ಪರಿಶ್ರಮ ವಹಿಸಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಸೋಲು ಕೊನೆಯಲ್ಲ, ಸೋಲಿನಿಂದ ಜೀವನದ ಪಾಠಗಳನ್ನು ಕಲಿಯಬೇಕು. ಪ್ರಾಮಾಣಿಕತೆಯಿಂದ ಇರಬೇಕು. ದೇವರನ್ನು ಎಂದಿಗೂ ಮರೆಯಬಾರದು. ಪೋಷಕರು ಮಕ್ಕಳಿಗೆ ಓದುವುದನ್ನು ಮಾತ್ರ ಕಲಿಸದೆ ಜೀವನದ ಪಾಠವನ್ನು ಕಲಿಸಬೇಕು ಎಂದು ಹೇಳಿದರು.
ಸೊಸೈಟಿ ಅಧ್ಯಕ್ಷ ಚಂದ್ರಹಾಸ ಪಿ. ರಾಯ್ಕರ್ ಮಾತನಾಡಿ, ದೈವಜ್ಞ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯು ಎ ದರ್ಜೆಯ ಸಹಕಾರ ಸೊಸೈಟಿಯಾಗಿದೆ. ಸೊಸೈಟಿಯು 95 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿ 73.01 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ವಿವಿಧ ರೀತಿ ಸಾಲಗಳನ್ನು ಕಡಿಮೆ ಬಡ್ಡಿದರದಲ್ಲಿ ನಿಡಲಾಗುತ್ತಿದೆ. ಠೇವಣಿಗಳಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಸುಸ್ತಿದಾರರಾಗಿರುವ ಸದಸ್ಯರು ಸಾಲ ಮರುಪಾವತಿಸಬೇಕು ಎಂದರು.
Shimoga News ಪ್ರತಿಭಾ ಪುರಸ್ಕಾರ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಸೊಸೈಟಿ ಉಪಾಧ್ಯಕ್ಷ ಎಸ್. ಪಾಂಡುರಂಗ ಶೇಟ್, ಖಜಾಂಚಿ ಸುಧಾಕರ ವಿ. ಶೇಟ್, ನಿರ್ದೇಶಕರಾದ ಬಿಳಿಕಿ ಕೃಷ್ಣಮೂರ್ತಿ ಬಿ.ಎನ್, ಕಮಲಾಕ್ಷ ಎಸ್.ಡಿ., ಗುರುರಾಜ ಎಂ. ಶೇಟ್, ಮಂಜುನಾಥ ಜಿ. ಶೇಟ್, ನಾಗರಾಜ ಜಿ. ಶೇಟ್, ವಿಜಯೇಂದ್ರ ಜಿ. ವರ್ಣೇಕರ್, ನಿರ್ಮಲಾ ಪಿ. ಶೇಟ್, ಪ್ರತಿಮಾ ದಿನೇಶ ಶೇಟ್ ಹಾಗೂ ಅಚ್ಚುತ ಶ್ರೀಧರ ಶೇಟ್ ಉಪಸ್ಥಿತರಿದ್ದರು.
Shimoga News ಜ್ಞಾನಕ್ಕಿಂತ ಮಿಗಿಲು ಯಾವುದೂ ಇಲ್ಲ. ಶ್ರದ್ಧೆ,ತಾಳ್ಮೆ,ನಿರಂತರ ಶ್ರಮದಿಂದ ಅಧ್ಯಯನ ಮಾಡಬೇಕು- ಡಾ.ವಿವೇಕ್.ಎಸ್.ರೇವಣಕರ್
Date:
