Sahyadri Narayana Multispeciality Hospital ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
ಉಚಿತ ಹೆಪಟೈಟಿಸ್ ‘ಬಿ’ ತಪಾಸಣಾ ಶಿಬಿರ ನಡೆಯಲಿದೆ.
ಪ್ರತಿ ವರ್ಷ ಜುಲೈ ೨೮ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜುಲೈ ೨೮ ರಿಂದ ಆಗಸ್ಟ್ ೨ನೇ ತಾರೀಖಿನವರೆಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಉಚಿತವಾಗಿ ಹೆಪಟೈಟಿಸ್ ‘ಬಿ’ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಉಚಿತವಾಗಿ ನೊಂದಣಿ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಹೆಪಟೈಟಿಸ್ ʼಬಿʼ ಲಸಿಕೆ ಪಡೆಯಬಹುದು.
ಭಾರತ ದೇಶದಲ್ಲಿ ಹೆಪಟೈಟಿಸ್ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಗಣನಿಯವಾಗಿ ಏರಿಕೆಯಾಗುತ್ತಿದೆ. ಹೆಪಟೈಟಿಸ್ ‘ಬಿ’ ರೋಗಕ್ಕೆ ಔಷದಿ ಹಾಗೂ ಲಸಿಕೆ ನೀಡದಿದ್ದರೆ ಅದು ಅಪಾಯಕಾರಿ ಮತ್ತು ಮರಣಕ್ಕೆ ಕಾರಣವಾಗಬಹುದು ಎಂದು ಆಸ್ಪತ್ರೆಯ ಯಕೃತ್ ಮತ್ತು ಗ್ಯಾಸ್ಟೊಎಂಟರಾಲಜಿ ವಿಭಾಗದ ವೈದ್ಯರಾದ ಡಾ. ಶಿವಕುಮಾರ್ ವಿ. ಹಾಗೂ ಡಾ. ಸುಮೇಶ್ ನಾಯರ್ ಎಸ್ ತಿಳಿಸಿದರು.
Sahyadri Narayana Multispeciality Hospital ಹೆಪಟೈಟಿಸ್ ‘ಬಿ’ ರೋಗವನ್ನು ತಡೆಗಟ್ಟಲು ಹೆಪಟೈಟಿಸ್ ‘ಬಿ’ ಲಸಿಕೆಯು ಹೇರಳವಾಗಿ ಲಭ್ಯವಿದ್ದು ಅದನ್ನು ಮುಂಚಿತವಾಗಿ ಹಾಕಿಸಿಕೊಂಡಲ್ಲಿ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಹೆಪಟೈಟಿಸ್ ‘ಸಿ’ ದೃಢಪಟ್ಟಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆಯು ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ವೈವಸ್ಥಾಪಕ ನಿರ್ದೆಶಕರಾದ ಶ್ರೀಯುತ ವರ್ಗೀಸ್ ಪಿ ಜಾನ್ ರವರು ತಿಳಿಸಿದ್ದಾರೆ.
ಮುಂಗಡವಾಗಿ ನೋಂದಣಿ ಮಾಡಿಸಲು ಕರೆಮಾಡಿ – ೯೫೧೩೦೯೭೪೦೦
ದಿನಾಂಕ – ಜುಲೈ ೨೮ರಿಂದ ಆಗಸ್ಟ್ ೨ರವರೆಗೆ
ಸಮಯ – ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಶಿಬಿರ ನಡೆಯಲಿದೆ.
