Vijaya Karnataka ವಿಕ ಏರ್ಪಡಿಸುವ ಎಕ್ಸಲೆನ್ಸ್ & ಹಾನರ್ ಪುರಸ್ಕಾರವನ್ನ ಶಿವಮೊಗ್ಗದ ಖ್ಯಾತ ಮನೋವೈದ್ಯ ಡಾ.ಅರವಿಂದ್ ತಿಮ್ಮಯ್ಯ ಪಡೆದಿದ್ದಾರೆ.
ಅವರೆಂದಿಗೂ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ. ತಂದೆ ಎಸ್ ,ತಿಮ್ಮಯ್ಯ ನವರಂತೆ ಸಮಾಜಪ್ರೀತಿ ರೂಢಿಸಿಕೊಂಡವರು ಮತ್ತು ಅರ್ಪಣಾ ಮನೋಭಾವದವರು.
ದೂರದ ಇಂಗ್ಲೆಂಡಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದವರು. ಮನಸ್ಸು ಮಾಡಿದ್ದರೆ ಅಲ್ಲಿಯೇ ನೆಲೆಸಬಹುದಿತ್ತು.ಆದರೆ ತಾಯ್ನಾಡಿನ ಸೆಳೆತ,ಹೆತ್ತವರ ಪ್ರೀತಿ ಅವರನ್ನ ಭಾರತಕ್ಕೆ ಬರುವಂತೆ ಮಾಡಿತು.
ಈಗ ತಮ್ಮ ಚಿಕಿತ್ಸೆ ಮತ್ತು ಪಡೆದ ಕ್ಷೇತ್ರ ಜ್ಞಾನದ ಮೂಲಕ ಸಾಮಾಜಿವಾಗಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾಗಿ
ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಅರವಿಂದರಿಗೆ ಅರವಿಂದರೇ ಸಮ.
ಪ್ರಸಿದ್ಧ ಪತ್ರಿಕೆ ವಿಜಯ ಕರ್ನಾಟಕ ಸೇವೆ ,ಅರ್ಪಣೆ ಮನೋಭಾವದ ಇಂತಹವರನ್ನ ಗುರುತಿಸಿ
ವಾರ್ಷಿಕ ಪುರಸ್ಕಾರ ವಿತರಿಸುತ್ತಿದೆ.
ಈ ಬಗ್ಗೆ ಡಾ.ಅರವಿಂದ ಏನು ಹೇಳುತ್ತಾರೆ ,ಓದಿ….
…..ಈ ಪ್ರಶಸ್ತಿ ಮನೋವೈದ್ಯನಾಗಿ ಸಂತಸ ತಂದಿದೆ.
2 ದಶಕಗಳ ನನ್ನ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮಗಳು ಹಾಗೂ ಚಿಕಿತ್ಸೆಗಳಿಗೆ ಹೊಸ ಶಕ್ತಿ, ವಿಜಯ ಕರ್ನಾಟಕದ ಪ್ರಶಸ್ತಿ ಮೂಲಕ ಬಂದಿದೆ.
Vijaya Karnataka ಸಮಾಜದಲ್ಲಿ ಮಾನಸಿಕ ಆರೋಗ್ಯ ನಿರ್ಲಕ್ಷ್ಯದಿಂದ , ಮೂಢನಂಬಿಕೆಗಳು ,
ತಪ್ಪುಗಹಿಕೆಗಳಿಂದ ಪ್ರಪಂಚದಾದ್ಯಂತ ಪ್ರತಿ ವರ್ಷ 8 ಲಕ್ಷಕ್ಕೂ ಅಧಿಕ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಕೋಟ್ಯಾಂತರ ಜನ ಖಿನ್ನತೆ,ಆತಂಕ ,ಭ್ರಮೆಗೆ, ಮಾದಕ ವ್ಯಸನಕ್ಕೆ, ಮೊಬೈಲ್ ಗೀಳಿಗೆ
ಒಳಗಾಗುತ್ತಿದ್ದಾರೆ. ಜನರು ಮುಕ್ತವಾಗಿ
ಮನೋವೈದ್ಯರನ್ನು ಭೇಟಿ ಮಾಡಿ ಇಂಥ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು, ಪ್ರಜ್ಞಾವಂತ ನಾಗರಿಕರು ಹಾಗೂ ಮಾಧ್ಯಮಗಳು ಜಾಗೃತಿ ಮೂಡಿಸಲು ಕೈಜೋಡಿಸಬೇಕು.
UK ಲಂಡನ್ ನಲ್ಲಿ MRCP ವ್ಯಾಸಂಗ ಹಾಗೂ ಮನೋವೈದ್ಯನಾಗಿ
ಕೆಲಸ ಮಾಡಿ ಮರಳಿ ತಾಯ್ನಾಡಿಗೆ ಬಂದು ಸೇವೆ ಸಲ್ಲಿಸಿದ್ದು ಸಾರ್ಥಕ ಅನ್ನಿಸುತ್ತಿದೆ.
ಮನೋವೈದ್ಯನಾಗಲು ನಮ್ಮ ತಾಯಿ ನನಗೆ ದೊಡ್ಡ ಪ್ರೇರಣೆ, ಈ ಪ್ರಶಸ್ತಿಯನ್ನು ಅವರಿಗೆ ,ಮಾನಸಿಕ ರೋಗಿಗಳಿಗೆ ,ನನ್ನ ಸ್ಟಾಫ್ ಹಾಗೂ ಕುಟುಂಬದವರಿಗೆ ಸಮರ್ಪಿಸುತ್ತೇನೆ.
…ನಿಜಕ್ಕೂ ಡಾ.ಅರವಿಂದ ಅವರನ್ನ ಪಡೆದ “ಸಿಹಿಮೊಗೆ” ಧನ್ಯ ಅಲ್ಲವೆ?
