N. Chaluvaraya Swamy ರಾಜ್ಯದ ಕೃಷಿ ಚಟುವಟಿಕೆ ಬೇಕಾಗಿರುವ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇದೆ ಹಾಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲವೆಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿಯವರು ತಿಳಿಸಿದ್ದಾರೆ.
ಮುಂದೆ ಬೇಕಾಗಿರುವ ರಸಗೊಬ್ಬರಕ್ಕೆ ರೈತರು ಈಗಲೇ ಖರೀದಿಗೆ ಮುಂದಾಗಿರುವುದು ಒತ್ತಡಕ್ಕೆ ಕಾರಣವಾಗಿದೆ. ತಡವಾದರೆ ರಸಗೊಬ್ಬರ ಸಿಗದಿರಬಹುದು ಎಂಬ ಆತಂಕವನ್ನು ರೈತರು ಬಿಡಬೇಕು ಎಂದು ಮನವಿ ಮಾಡಿದರು.
ರಾಜ್ಯದೆಲ್ಲೆಡೆ ಡಿಎಪಿ, ಯೂರಿಯಾ ಗೊಬ್ಬರದ ಅಭಾವ ಎದುರಾಗಿದೆ. ದೊರೆತರೂ ಹೆಚ್ಚಿನ ಹಣ ಕೊಡಬೇಕಿದೆ. ಷಡ್ಯಂತ್ರದ ಮೂಲಕ ಗೊಬ್ಬರ ಅಭಾವ ಸೃಷ್ಟಿಸಿದ್ದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರು ಕೇಳಿದ ಗೊಬ್ಬರ ಸಿಗುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ ಅವರು ತಿಳಿಸಿದ್ದಾರೆ.
N. Chaluvaraya Swamy 8 ಲಕ್ಷ ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಇದ್ದು, ವಿತರಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದ ಮಾತ್ರಕ್ಕೆ ರೈತರು ಆತಂಕ ಪಡಬೇಕಿಲ್ಲ. ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದು ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಇಡೀ ದೇಶದಲ್ಲಿ ರಸಗೊಬ್ಬರದ ಸಮಸ್ಯೆ ಇರುವುದು ಸತ್ಯ. ಇರಾನ್ ಯುದ್ಧದ ಕಾರಣಕ್ಕೆ ರಸಗೊಬ್ಬರ ಆಮದು ಆಗುತ್ತಿಲ್ಲ. ಚೀನಾ ರಫ್ತು ಸ್ಥಗಿತ ಮಾಡಿರುವುದರಿಂದ ಗೊಬ್ಬರ ಸಮಸ್ಯೆ ಇದೆ. ಕೇಂದ್ರದಿಂದ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಆಗುತ್ತಿಲ್ಲವಾದರೂ, ರಾಜ್ಯದಲ್ಲಿ ಅಗತ್ಯ ಪ್ರಮಾಣದ ದಾಸ್ತಾನು ಇರುವ ಕಾರಣ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು .
