Sri Rameshwar Temple ಹಳೆ ನಗರದ ಶ್ರೀರಾಮೇಶ್ವರ ದೇವಸ್ಥಾನದ ಹಿಂಭಾಗದ, ಶ್ರೀ ಗಾಯಿತ್ರಿ ಧರ್ಮಶಾಲಾ ಸಭಾಂಗಣದಲ್ಲಿ, ದಿವಂಗತ ಡಾಕ್ಟರ್ ಎಚ್ಎಸ್ ವೆಂಕಟೇಶಮೂರ್ತಿಯವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ, ಭಾವ ಗಾನ ಗೌರವ ಮತ್ತು ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಭೂಮಿಕಾ ವೇದಿಕೆ ಅಧ್ಯಕ್ಷ ಡಾಕ್ಟರ್ ಕೃಷ್ಣ ಎಸ್ ಭಟ್ ಮಾತನಾಡಿದರು.
ಪ್ರಮುಖ ವ್ಯಕ್ತಿಗಳ ಸಂಸ್ಮರಣೆ ಮಾಡುವುದು ಎಂದರೆ ಪ್ರಸಿದ್ಧ ವ್ಯಕ್ತಿಗಳ ಜೀವನ ಪಥ ಅವರು ಸಮಾಜಕ್ಕೆ ಮತ್ತು ತಾವು ಇರುವ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವಾಗಿದೆ ಎಂದು ನುಡಿದರು.
ಡಾಕ್ಟರ್ ಎಚ್ಎಸ್ ವಿ ಅವರ ಕವಿತೆ, ಕವನಗಳು ,ಆಯಾಯ ಕಾಲಘಟ್ಟದಲ್ಲಿ ಆಯಾಯ ವಯೋಮಾನದವರು ಅನುಭವಿಸಿದ ಸಂಗತಿಗಳನ್ನು ,ಪ್ರಕೃತಿಯೊಡನೆ ಹೋಲಿಕೆಯಾಗಿ ನೀಡಿ, ಉಪಮಾಲೋಲ ಕವಿಯಾಗಿ ,ಹಾಡನ್ನು ರಚಿಸಿರುವುದು ಅವರ ವ್ಯಕ್ತಿತ್ವದ ವಿಶೇಷವಾಗಿದೆ. ಅವರು ಇಂದು ಭೌತಿಕವಾಗಿ ನಮ್ಮ ನಗಲಿದರೂ, ಅವರ ಕಾವ್ಯದಲೆಗಳ ಕಂಪು ,ಇನ್ನು ನೂರಾರು ವರ್ಷಗಳ ಕಾಲ ತೇಲಿ ಬರುತ್ತಲೇ ಇರುತ್ತವೆ. ಅವರ ಭಾವಗೀತೆಗಳು ಕನ್ನಡಿಗರ ಹೃದಯಗೀತೆಯಾಗಿ, ಭಾವ ಪ್ರಪಂಚದ ಬೆರಗಾಗಿ, ಮೆರೆಯುತ್ತಾ ಕನ್ನಡಿಗರ ಮನದಲ್ಲಿ, ಸದಾ ನೆಲೆಸಿದ್ದಾರೆ ಎಂದು ತಿಳಿಸಿದರು.
Sri Rameshwar Temple ಭೂಮಿಕ ವೇದಿಕೆ ಸದಸ್ಯರು ,ಡಾಕ್ಟರ್ ಎಚ್ಎಸ್ ವಿ ಅವರು ರಚಿಸಿದ, ಆಯ್ದ 10 ಗೀತೆಗಳನ್ನು ಶುಶ್ರಾವ್ಯವಾಗಿ ಹಾಡಿದರು. ಡಾಕ್ಟರ್ ಎಚ್ಎಸ್ ವಿ ಅವರ ಜೀವನ ಪಥ, ಕುರಿತು ಶ್ರೀಮತಿ ಉಷಾ ಶೇಷಗಿರಿ, ಡಾಕ್ಟರ್ ಎಚ್ಎಸ್ವಿಯವರ ಕಾವ್ಯಪತ ಕುರಿತು ಬಿ ಕಾಂತಪ್ಪ,ನುಡಿ ನಮನ ಸಲ್ಲಿಸಿದರು.
ಶ್ರೀಮತಿ ಶಾಮಲಾ ಮತ್ತು ವೀಣಾ ಪ್ರಾರ್ಥಿಸಿ, ಕಾರ್ಯದರ್ಶಿ ಶಿವರಾಜ್ ಸ್ವಾಗತಿಸಿದರು. ಆನಂದ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಮೇಶ್ ವಂದಿಸಿದರು. ಕೋಶಾಧ್ಯಕ್ಷ ಮುನಿರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.
