Davangere University ದೇಶ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಏರ್ಪಟ್ಟಲ್ಲಿ ಸ್ನೇಹ ವೃದ್ಧಿಯಾಗಿ ತನ್ಮೂಲಕ ವಿಶ್ವ ಭ್ರಾತೃತ್ವ ಸಾಧಿಸಬಹುದು, ಇದಕ್ಕಾಗಿ ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ಅವರು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಏರ್ಪಾಡಾಗಿದ್ದ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಮಾತನಾಡುತ್ತಾ ದೇಶದ ಸುಮಾರು 1,200 ವಿಶ್ವವಿದ್ಯಾನಿಲಯಗಳಿಂದ ವಾರ್ಷಿಕ ಸುಮಾರು 10 ಮಿಲಿಯನ್ ಪದವೀಧರರು ಹೊರ ಬರುತ್ತಿದ್ದು ವಿಶ್ವವಿದ್ಯಾನಿಲಯಗಳು ಕೇವಲ ಪದವೀಧರರನ್ನು ತಯಾರು ಮಾಡುವ ಕಾರ್ಖಾನೆಗಳಂತಾಗದೆ ಸುಸಂಸ್ಕೃತ ಪ್ರಜೆಗಳಾಗಬಲ್ಲ ವಿದ್ಯಾರ್ಥಿಗಳನ್ನು ಹೊರಹೊಮ್ಮಿಸಬೇಕು, ದಾವಣಗೆರೆ ವಿಶ್ವವಿದ್ಯಾನಿಲಯವು ಸ್ನಾತಕೋತರ ವಿದ್ಯಾರ್ಥಿ ಸ್ನೇಹಕೂಟದ ವತಿಯಿಂದ ಸಾಂಸ್ಕೃತಿಕ ಕ್ರೀಡಾ ಉತ್ಸವ ಏರ್ಪಡಿಸುತ್ತಿರುವುದು ಸ್ವಾಗತಾರ್ಹ, ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗುತ್ತಿರುವ ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಯೂ ವೃದ್ಧಿಸಲಿದ್ದು ಬಹುರಾಷ್ಟ್ರೀಯ ಸಂಸ್ಥಾಪನೆಗಳು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಾಗ ಕೇವಲ ಶೈಕ್ಷಣಿಕ ಸಾಧನೆಯನ್ನಷ್ಟೇ ಅಲ್ಲದೆ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿರುಚಿ ಮತ್ತು ಸಾಧನೆಗಳನ್ನು ಸಹಾ ಪರಿಗಣಿಸುತ್ತವೆ, ಆದ್ದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆಗಳನ್ನೂ ಮಾಡಬೇಕು ಎಂದು ಮಂಜುನಾಥ್ ಹೇಳಿದರು.
Davangere University ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ ಡಿ ಕುಂಬಾರರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದನ್ ಪ್ರಾರ್ಥನೆಯನ್ನು ಹಾಡಿದರೆ ಪ್ರೊ. ಶಿಶುಪಾಲ ಎಸ್ ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ನುಡಿಗಳ ನಾಡಿದರು. ಡಾ. ತಿಪ್ಪೇಶ್ ಕೆ ವರದಿ ವಾಚನ ಮಾಡಿದರು. ವೀರ ಯೋಧರಾದ ಸುರೇಶ್ ರಾವ್ ಎಚ್ ಹವಾಲ್ದಾರ್ ಅವರನ್ನು ಸನ್ಮಾನಿಸಲಾಯಿತು. ಪ್ರಿಯಾಂಕಾ ಹಾಗೂ ಮುಗ್ಧಾ ಹೆಗಡೆ ನಿರೂಪಿಸಿದರೆ ಬಹುಮಾನಗಳ ವಿತರಣೆ ನಂತರ ಡಾ.ರೆಣುಕಾ ಕಾಪ್ಸೆ ವಂದನೆಗಳನ್ನು ಸಲ್ಲಿಸಿದರು.
ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿನಿ ಮೋನಿಕಾ ಆರ್ ಉಪಸ್ಥಿತರಿದ್ದರು
